Latest Post

ಉಪನ್ಯಾಸಕ ಅಶೋಕ ಕೋರೆಗೆ ಪಿಎಚ್‌.ಡಿ ಡಾಕ್ಟರೇಟ್ : ಎಬಿವಿಪಿ ಯಿಂದ ಸನ್ಮಾನ ಸಾಕು ನಾಯಿಗಳಿಗೆ ತಪ್ಪದೇ ರೇಬೀಸ್ ಲಸಿಕೆ ನೀಡಿ: ಸಚಿವ ಪ್ರಭು ಚವ್ಹಾಣ
Spread the love

ಸುಭಾಸ್ ಚಂದ್ರ ಭೋಸ್ ಯುವಕ ಸಂಘ (ರಿ ) ಔರಾದ್  ವತಿಯಿಂದ ಮುಖ್ಯ ಮಂತ್ರಿಗೆ ಬರೆದ ಮನವಿ ಪತ್ರವನ್ನು  ತಹಸೀಲ್ದಾರ ಮುಖಾಂತರ ಮನವಿ ಸಲ್ಲಿಸಲಾಯಿತ್ತು

ಇದೇ ವೇಳೆಯಲ್ಲಿ ಮಾತನಾಡಿದ ಸಂಘದ ಅಧ್ಯಕ್ಷ ರತ್ನದೀಪ ಕಸ್ತೂರೆ ಮಾತನಾಡಿ 8 ದಿವಸಗಳಿಂದ ಸುರಿಯುತ್ತಿರುವ ಧಾಹಕಾರ ಮಳೆಯಿಂದ ತಾಲೂಕಿನ ಜನರು ತ್ತತರಿಸಿ ಹೋಗಿದ್ದಾರೆ ಬಹಳಷ್ಟು ಜನರು ತಮ್ಮ ಮನೆಗಳನ್ನು ಕಳೆದುಕೊಂಡು ಕಂಗಾಲ ಆಗಿದ್ದಾರೆ ಅವರಿಗೆ ನೀಡುತ್ತಿರುವ 10 ಸಾವಿರ ತಕ್ಷಣ ಪರಿಹಾರ ಬದಲಾಗಿ 1 ಲಕ್ಷ ರೂಪಾಯಿ ನೀಡಬೇಕು ಹಾಗೂ ಬೆಳೆ ಹಾನಿಯಾದ ರೈತರಿಗೆ ಪ್ರತಿ ಹೆಕ್ಟರಗೆ 50 ಸಾವಿರ ರೂಪಾಯಿ ನೀಡಬೇಕು ಹಾಗೂ ಪತ್ರಿ ಹೋಬಳಿ ಮಟ್ಟದಲ್ಲಿ ಗಂಜಿ ಕೇಂದ್ರ ಸ್ಥಾಪಿಸಿ ನೀರಾಶ್ರೀತರಿಗೆ ಗಂಜಿ ಕೇಂದ್ರದಲ್ಲಿ ಆಶ್ರಯ ನೀಡಬೇಕು

 ಹಾಗೂ ಎಲ್ಲಾ ತಾಲೂಕಾ ಮಟ್ಟದ ಅಧಿಕಾರಿಗಳು ಹಾಗೂ ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳು ಕೇಂದ್ರ ಸ್ಥಾನದಲ್ಲಿ ಇರಬೇಕು ಹಾಗೂ ಔರಾದ ತಾಲೂಕವನ್ನು ಅತಿವೃಷ್ಟಿ ತಾಲೂಕಾ ಘೋಷಿಸಿ ವಿಶೇಷ ಪ್ಯಾಕೇಜ್ ಮಂಜೂರ ಮಾಡಬೇಕು ಎಂದರು. ಈ ಸಂದರ್ಭದಲ್ಲಿ ಮುಖಂಡರಾದ ಸುನಿಲ ಮಿತ್ರಾ, ಪ್ರಕಾಶ ಕಾಂಬಳೆ, ಸೂರ್ಯಕಾಂತ ಕಾಂಬಳೆ, ಸಂಘದ ಜಿಲ್ಲಾ ಅಧ್ಯಕ್ಷ ಮಹಾದೇವ ಶಿಂದೆ, ತಾಲೂಕಾ ಅಧ್ಯಕ್ಷ ಪ್ರೇಮ ರಾನೆ, ಪ್ರಮುಖರಾದ ಅನಿಲ್ ವಡೆಯರ, ಅವಿನಾಶ ಟಕಳೆ, ಶುಬಮ, ಅಭಿಷೇಕ್, ಆಕಾಶ ರಾಠೋಡ್, ಉಪಸ್ಥಿತರಿದ್ದರು