Latest Post

ಈ ದೇಶದ ಸಂಪತ್ತು ಶಿಕ್ಷಕರು :ಡಾ ಮನ್ನಥ ಡೊಳೆ ವಸತಿ ನಿಲಯಗಳಿಗೆ 25% ಪ್ರತಿಶತ ಪ್ರವೇಶವನ್ನು ಹೆಚ್ಚಿಸುವಂತೆ ಎಬಿವಿಪಿ ಔರಾದ ಶಾಖೆ ಮನವಿ
Spread the love

“ನನ್ನ ಮತ ಮಾರಾಟ ಕಲ್ಲ”
ಸ್ವಚ್ಛ ವಿಧಾನಸಭೆಯ ಅಭಿಯಾನ ಪಾದಯಾತ್ರೆ,

ಔರಾದ: ಮೂಲತ ಬಾಗಲಕೋಟೆ ಜಿಲ್ಲೆಯ ನಾಗರಾಜ್ ಕಲಕುಟಕರ ಅವರು ಕರ್ನಾಟಕದ 224 ವಿಧಾನಸಭಾ ಕ್ಷೇತ್ರಗಳಿಗೆ ತೆರಳಿ ಭ್ರಷ್ಟರಲ್ಲದ ಕೋಮುವಾದಿಯಲ್ಲದ ಪ್ರಭುತ್ವ ಜನಪರ ಸುಸಂಸ್ಕೃತ ವ್ಯಕ್ತಿಯುಳ್ಳವರು ಬೇಕಾಗಿದ್ದಾರೆ ಅನ್ನುವ ಧೈರ್ಯವನ್ನು ಇಟ್ಟುಕೊಂಡು ಇಡೀ ಕರ್ನಾಟಕ ರಾಜ್ಯದಲ್ಲಿ ಪ್ರತಿ ವಿಧಾನಸಭಾ ಕ್ಷೇತ್ರಕ್ಕೆ ಪಾದಯಾತ್ರೆ ಮಾಡುತ್ತಿದ್ದು ಇದರ ಉದ್ದೇಶ ನನ್ನ ಮತ ಮಾರಾಟಕ್ಕಿಲ್ಲ ಒಂದು ಧೈರ್ಯ ಇಟ್ಟುಕೊಂಡು ಪಾದಯಾತ್ರೆಗೆ ಚಾಲನೆ ನೀಡಿದ್ದಾರೆ.
ಜೂನ್ 9ರಂದು ಬಾಗಲಕೋಟೆ ಜಿಲ್ಲೆಯಿಂದ ಪ್ರಾರಂಭಿಸಿದ ಪಾದಯಾತ್ರೆ ಇಂದು ದಿನಾಂಕ 26 ಜುಲೈ ರಂದು ಬೀದರ ಜಿಲ್ಲೆಯ ಔರಾದ ತಾಲೂಕಿಗೆ ಬಂದು ಔರಾದ್ನಲ್ಲಿ ಸಾಮಾಜಿಕ ಕಾರ್ಯಕರ್ತ ಗುರುನಾಥ ವಡ್ಡೆ ಅಡವೆಪ್ಪಾ ಪಟ್ನೆ ,ರಮೇಶ್ ಕುರಳ್ಳೆ,ಅಂಬಾದಾಸ ನಳಗೆ,ನಾಗನಾಥ ಪಾಟೀಲ್ ಅವರು ಅವರನ್ನು ಸ್ವಾಗತಿಸಿ ಸನ್ಮಾನಿಸಿ ತಮ್ಮ ಅಭಿಯಾನ ಯಶಸ್ವಿಯಾಗಲಿ ಎಂದು ಆಶೀರ್ವದಿಸಿ ಅವರಿಗೆ ಮುಂದಿನ ಪಯಣ ಭಾಲ್ಕಿ ವಿಧಾನಸಭಾ ಕ್ಷೇತ್ರಕ್ಕೆ ಕಳುಹಿಸಿದರು.
ಹಣ ಹೆಂಡ ಸೀರೆ ಕುಕ್ಕರ್ ಗೆ ಮತ ಮಾರಿಕೊಳ್ಳಬೇಡಿ ಎಂಬುದು ನನ್ನ ಮನವಿ ಜನಪರ ಪ್ರಭುತ್ವ ಅಭಿವೃದ್ಧಿಗೆ ಮತ ನೀಡಿ ಭ್ರಷ್ಟರು ಹಾಗೂ ಮತಾಂತರನ್ನು ದೂರವಿಡಬೇಕು ಎಂಬ ಬಗ್ಗೆ ಅರಿವು ಮೂಡಿ ಸುತ್ತ ಸ್ವಚ್ಛ ವಿಧಾನಸಭೆ ಅಭಿಯಾನಕ್ಕೆ ಪಾದಯಾತ್ರೆ ನಡೆಸಿದ್ದೇನೆ ನನ್ನ ಪಾದಯಾತ್ರೆದಿಂದ ಕೆಲವು ಕ್ಷೇತ್ರಗಳಲ್ಲಾದರೂ ಬದಲಾವಣೆಯಾದರೂ ಏಳು ತಿಂಗಳ ಪಾದಯಾತ್ರೆ ಸಾರ್ಥಕವಾಗುತ್ತದೆ ಎನ್ನುತ್ತಾರೆ ನಾಗರಾಜ್ ಕಲಕುಟಗರ ಸಾಮಾಜಿಕ ಕಾರ್ಯಕರ್ತ

2023 ವಿಧಾನಸಭಾ ಚುನಾವಣೆಯಲ್ಲಿ ಸ್ವಚ್ಛ ಆಡಳಿತ ನಡೆಸುವ ಪ್ರತಿ ನಿಧಿಗಳನ್ನು ಆಯ್ಕೆ ಮಾಡಲು ಮತದಾರರಲ್ಲಿ ಜಾಗೃತಿ ಮೂಡಿಸಲು ಮುಂದಾಗಿದ್ದಾರೆ ಪ್ರತಿ ಜಿಲ್ಲೆಯ ಬಹುತೇಕ ತಾಲೂಕುಗಳಲ್ಲಿ ಸಂಚರಿಸುವ ಯೋಜನೆ ರೂಪಿಸಿಕೊಂಡಿದ್ದಾರೆ ಗ್ರಾಮ ಪಟ್ಟಣಗಳಲ್ಲಿ ಜನರನ್ನು ಉದ್ದೇಶಿಸಿ ಮಾತನಾಡಲಿದ್ದಾರೆ ಶಾಲಾ-ಕಾಲೇಜು ಮಂದಿರಗಳಲ್ಲಿ ವಾಸ್ತವ ಮಾಡಲಿದ್ದಾರೆ.

ಬದಲಾವಣೆಗಾಗಿ ನಾಗರಾಜ್ ಅವರ ಪಾದಯಾತ್ರೆ ಸುಸಜ್ಜಿತವಾಗಿ ನಡೆಯಲಿ ಪ್ರತಿ ತಾಲೂಕಿನಲ್ಲಿ ಸಾರ್ವಜನಿಕರು ಅವರಿಗೆ ಸ್ಪಂದಿಸಿ ಊಟ ವಸತಿ ವ್ಯವಸ್ಥೆ ಮಾಡುವಲ್ಲಿ ಮುಂದಾಗಬೇಕು ಎನ್ನುತ್ತಾರೆ ಗುರನಾಥ ವಡ್ಡೆ ಸಾಮಾಜಿಕ ಕಾರ್ಯಕರ್ತ ಔರಾದ ಬಿ