Latest Post

ಸಾಕು ನಾಯಿಗಳಿಗೆ ತಪ್ಪದೇ ರೇಬೀಸ್ ಲಸಿಕೆ ನೀಡಿ: ಸಚಿವ ಪ್ರಭು ಚವ್ಹಾಣ ಕಂದಾಯ ಇಲಾಖೆ ಡಾಟಾ ಎಂಟ್ರಿ ಆಪರೇಟರ್‌ಗೆ ಸೇವಾ ಭದ್ರತೆ, ಸೂರ್ಯಕಾಂತ್ ನಾಗಮಾರಪಳ್ಳಿ ಮನವಿ
Spread the love

ಶ್ರಾವಣ ಮಾಸ ಪ್ರಾರಂಭ ಈ ಪ್ರಮುಖ ವಿಚಾರಗಳನ್ನು ಮರೆಯಬೇಡಿ ಭಗವಾನ್ ಶಿವನ ನೆಚ್ಚಿನ ತಿಂಗಳು ಶ್ರಾವಣ 2022 | sawan 2022 date/sawan 2022 start date and end date ಇಂದಿನಿಂದ ಜುಲೈ 14 ರಿಂದ ಅಗಸ್ಟ 12 ತನಕ ಇರಲಿದೆ.

ಈ ಬಾರಿ ಶ್ರಾವಣ ಮಾಸದಲ್ಲಿ ನಾವು ಯಾವ ಕೆಲಸ ಮಾಡಬೇಕು..?

ಶ್ರಾವಣ ಮಾಸ shravan 2022 ಬಂತೆಂದರೆ ಶಿವ ಭಕ್ತರಲ್ಲಿ ಎಲ್ಲಿಲ್ಲದ ಉತ್ಸಾಹ ಕಾಣಿಸಿಕೊಳ್ಳುತ್ತದೆ. ಶ್ರಾವಣ ಸೋಮವಾರ ಶಿವನ ಆರಾಧನೆ ಮಾಡಿದರೆ ಮಹದೇವನಿಗೆ ಬೇಗ ತಲುಪುತ್ತದೆ ಎಂದು ಹೇಳಲಾಗುತ್ತದೆ. ರುದ್ರನಿಗೆ ಅಭಿಷೇಕ, ಪೂಜೆ ಮಾಡುವುದರಿಂದ ಉತ್ತಮ ಫಲಿತಾಂಶವನ್ನೂ ಪಡೆಯಬಹುದು. ಶ್ರಾವಣ ಮಾಸವು ಪವಿತ್ರ ತಿಂಗಳು ಎಂದು ಪರಿಗಣಿಸಲಾಗುತ್ತದೆ. ಆಷಾಢ ಏಕಾದಶಿಯಲ್ಲಿ ವಿಷ್ಣುವು ಕ್ಷೀರ ಸಾಗರದಲ್ಲಿ ವಿಶ್ರಾಂತಿ ಪಡೆಯಲು ಹೋಗುತ್ತಾನೆ. ಆಗ ಭೂ ಲೋಕದ ಸಂಪೂರ್ಣ ಜವಾಬ್ದಾರಿಯು ಪರಶಿವನ ಮೇಲೆ ಇರುತ್ತದೆ. ಶ್ರಾವಣ ಮಾಸದಲ್ಲಿ ಕೆಲವು ನಿಯಮಗಳನ್ನು ಅನುಸರಿಸಿದರೆ ಶಿವನ ಅನುಗ್ರಹಕ್ಕೆ ಪಾತ್ರರಾಗಬಹುದು. ಶ್ರಾವಣ ಮಾಸದಲ್ಲಿ ನಾವು ಯಾವ ಕೆಲಸ ಮಾಡಬೇಕು? ಯಾವುದನ್ನು ಮಾಡಬಾರದು ಎನ್ನುವ ಮಾಹಿತಿ ತಿಳಿಯೋಣ.

​ಶ್ರಾವಣ ಮಾಸದಲ್ಲಿ ಏನು ಮಾಡಬೇಕು..?

ಶ್ರಾವಣ ಮಾಸದಲ್ಲಿ ಶಿವನನ್ನು ಪೂಜಿಸುವ ವೇಳೆ ಶಿವನಿಗೆ ಯಾವುದೇ ರೀತಿಯ ಅಭಿಷೇಕ ಮಾಡಲು ಹೋಗಬೇಡಿ. ಹಾಗೆ ಮಾಡುವುದರಿಂದ ನೀವು ವಿಶೇಷ ಪ್ರಯೋಜನಗಳಿಂದ ವಂಚಿತರಾಗಬಹುದು. ಶ್ರಾವಣ ಮಾಸದಲ್ಲಿ  ಶಿವನನ್ನು ಆರಾಧಿಸುವಾಗ, ಯಾವಾಗಲೂ ಆತನನ್ನು ಮನಸ್ಸಿನಲ್ಲಿ ಧ್ಯಾನಿಸಿ ಮತ್ತು ”ಓಂ ನಮಃ ಶಿವಾಯ” ಮಂತ್ರವನ್ನು ಜಪಿಸಿ. ಈ ಮೂಲಕ ಶಿವನ ಅನುಗ್ರಹ ಪ್ರಾಪ್ತಿಯಾಗುತ್ತದೆ ಎಂಬುವುದು ನಮ್ಮೆಲ್ಲರ ನಂಬಿಕೆ

​ಶಿವನ ಜೊತೆಗೆ ಪಾರ್ವತಿಯನ್ನೂ ಸಹ ಪೂಜಿಸುವುದು ಉತ್ತಮ !

​ಶಿವನ ಪಾರ್ವತಿ

ಶ್ರಾವಣ ಮಾಸದಲ್ಲಿ ಶಿವನ ನೆಚ್ಚಿನ ವಸ್ತುವಾದ ಬಿಲ್ವಪತ್ರೆ, ಧಾತುರಾ, ಕಾಯಿ ಇತ್ಯಾದಿಗಳನ್ನು ಅರ್ಪಿಸಬೇಕು. ಶಿವ ಹಾಗೂ ಪಾರ್ವತಿ ದೇವಿಯನ್ನು ಇಡೀ ಕುಟುಂಬ ಪೂಜಿಸಬೇಕು. ಸಂಜೆ ಸಹ ಪೂಜೆ-ಆರತಿ ಮಾಡಲು ಮರೆಯಬೇಡಿ. ಶ್ರಾವಣ ಸೋಮವಾರ ವಿಶೇಷ ಮಹತ್ವವನ್ನು ಹೊಂದಿದೆ. ಆದ್ದರಿಂದ ಈ ದಿನದಂದು ಉಪವಾಸ ಮಾಡಿ ಮತ್ತು ಶಿವನನ್ನು ಧ್ಯಾನಿಸುತ್ತಿರಿ. ಸಾಧ್ಯವಾದರೆ, ರುದ್ರಾಭಿಷೇಕ ಕೂಡ ಮಾಡಿ.

​ ರುದ್ರಾಕ್ಷಿ  ಧಾರಣೆಗೆ   ಇದಕ್ಕಿಂತ ಉತ್ತಮ ದಿನವಿಲ್ಲ

​ ರುದ್ರಾಕ್ಷಿ

ಬಹಳಷ್ಟು ಜನರು  ರುದ್ರಾಕ್ಷಿ ಧರಿಸುವ ಬಗ್ಗೆ ಯೋಚಿಸುತ್ತಿದ್ದರೆ ಶ್ರಾವಣ ಮಾಸಕ್ಕಿಂತ ಉತ್ತಮ ದಿನ ನಿಮಗೆ ಸಿಗುವುದಿಲ್ಲ. ಈ ಮಾಸದಲ್ಲಿ ರುದ್ರಾಕ್ಷಿ ಧರಿಸುವುದು ಪ್ರಯೋಜನಕಾರಿ ಎಂದು ಪರಿಗಣಿಸಲಾಗಿದೆ. ಹಾಗೆಯೇ, ಶ್ರಾವಣ ಮಾಸದಲ್ಲಿ ನೀವು ಹಾಲು ಅಥವಾ ತುಪ್ಪ, ಮೊಸರು ಮುಂತಾದ ಹಾಲಿನಿಂದ ಮಾಡಿದ ವಸ್ತುಗಳನ್ನು ದಾನ ಮಾಡಬಹುದು. ನೀವು ಪ್ರತಿದಿನ ಮನೆಯನ್ನು ಸ್ವಚ್ಛ ಗೊಳಿಸಬೇಕು ಮತ್ತು ಶುಭ್ರವಾದ ಬಟ್ಟೆಗಳನ್ನು ಧರಿಸಬೇಕು. ಶ್ರಾವಣ ಮಾಸದಲ್ಲಿ ಮಾತ್ರ ಸ್ವಚ್ಛತೆಯ ವಿಷಯದ ಬಗ್ಗೆ ಹೆಚ್ಚು ಗಮನ ಕೊಡಿ.