Latest Post

ಈ ದೇಶದ ಸಂಪತ್ತು ಶಿಕ್ಷಕರು :ಡಾ ಮನ್ನಥ ಡೊಳೆ ವಸತಿ ನಿಲಯಗಳಿಗೆ 25% ಪ್ರತಿಶತ ಪ್ರವೇಶವನ್ನು ಹೆಚ್ಚಿಸುವಂತೆ ಎಬಿವಿಪಿ ಔರಾದ ಶಾಖೆ ಮನವಿ
Spread the love

ದಕ್ಷಿಣ ಭಾರತದ ರಾಜಕಾರಣ ಬೇರೆ, ಉತ್ತರ ಭಾರತದ ರಾಜಕಾರಣವೇ ಬೇರೆ ! ದಕ್ಷಿಣ ಭಾರತದ ಮಹಾ ಜನತೆ ನಿಮಗೆ ಪ್ರತಿಉತ್ತರ ನೀಡಲಿದ್ದಾರೆ : ಎಚ್.ಡಿ.ಕುಮಾರಸ್ವಾಮಿ ಹೇಳಿಕೆ

ದೇವನಹಳ್ಳಿ: ಉತ್ತರ ಭಾರತ ರಾಜಕಾರಣ ಬೇರೆ, ದಕ್ಷಿಣ ಭಾರತದ ರಾಜಕಾರಣ ಬೇರೆ ಎನ್ನುವುದನ್ನು ಮುಂದಿನ ದಿನಗಳಲ್ಲಿ ದಕ್ಷಿಣ ಭಾರತದ ಮಹಾ ಜನತೆ ನಿಮಗೆ ಪ್ರತಿಉತ್ತರ ಕೊಡುತ್ತಾರೆ ಎಂದು ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ತಿಳಿಸಿದರು.

ದೇವನಹಳ್ಳಿ ತಾಲೂಕಿನ ವಿಶ್ವನಾಥಪುರ ಗ್ರಾಮದ ನೂತನ ಶ್ರೀ ಚೌಡೇಶ್ವರಿ ಕಾಶೀ ವಿಶ್ವನಾಥ ದೇವಾಲಯ ಪ್ರತಿಷ್ಠಾಪನೆ ಹಾಗೂ ಬ್ರಹ್ಮ ಕಲಶಾಭಿಶೇಕ ಹಾಗೂ ಜಾತ್ರ ಮಹೋತ್ಸವದ ಕಾರ್ಯಕ್ರಮಕ್ಕೆ ಮಾಜಿ ಸಿಎಂ ಎಚ್.ಡಿ.ಕುಮಾರಸ್ವಾಮಿ ಆಗಮಿಸಿ ಪೂಜಾ ಕೈಂಕರ್ಯದಲ್ಲಿ ಭಾಗಿಯಾಗಿ ಅವರು ಮಾತನಾಡಿದರು. ಮೊದಲು ಬಿಜೆಪಿಯ ಪ್ರಮುಖ ಅಜೆಂಡ ಈ ವರೆಗೂ ಕಾಂಗ್ರೆಸ್ ಮುಕ್ತ ರಾಜ್ಯವಾಗಿತ್ತು. ಇದೀಗ ಅವರ ಸ್ಲೋಗನ್ ದೇಶದ ಪರಿವಾರತ್ನ ಸರ್ಕಾರಗಳು ಪಕ್ಷಗಳನ್ನ ಮುಗಿಸುವುದಾಗಿದೆ. ಹೀಗಾಗಿ ಭ್ರಷ್ಟಾಚಾರ ಮತ್ತೊಂದು ನಡೆಯುತ್ತಿದೆ ದೇಶಕ್ಕೆ ಮಾರಕ ಅಂತ ಹೇಳ್ತಿದ್ದಾರೆ. ಬಿಜೆಪಿಯವರು ಏನು ಮಾಡುತ್ತಿದ್ದಾರೆ. ಕರ್ನಾಟಕದಲ್ಲಿರುವ ಬಿಜೆಪಿ ಸರಕಾರದಲ್ಲಿ ಭ್ರಷ್ಟಾಚಾರ ನಿಲ್ಲಿಸಿದ್ದಾರೆಯೇ, ಚುನಾಯಿತ ಸರ್ಕಾರಗಳನ್ನು ಹೇಗಂದ್ರೆ ಹಾಗೆ ಅಸ್ಥಿರಗೊಳಿಸುತ್ತಿದ್ದಾರೆ ಇದು ಈ ದೇಶದ ಡೆಮಾಕ್ರಸಿಯೇ?

ಕುಟುಂಬ ರಾಜಕಾರಣದ ಬಗ್ಗೆ ಗುಡುಗಿದ ಮಾಜಿ ಸಿಎಂ: ಹೈದರಾಬಾದಿನಲ್ಲಿ ನಡೆದ ಬಿಜೆಪಿ ಕಾರ್ಯಕಾರಿಣಿಯಲ್ಲಿ ಕುಟುಂಬ ರಾಜಕಾರಣ ಬಗ್ಗೆ ಮಾತನಾಡಿದ್ದರಿಂದ ಮೊದಲು ದಕ್ಷಿಣ ಭಾರತದಲ್ಲಿ ಬಾಗಿಲು ತೆಗೆಯಬೇಕು ಅಂತ ತಮಿಳುನಾಡು, ಆಂದ್ರ ಪ್ರದೇಶದಲ್ಲಿ ಒರಿಸ್ಸಾದಲ್ಲಿ ಮುಗಿಸಲು ಹೊರಟಿದ್ದಾರೆ. ಆಯಾ ರಾಜ್ಯಗಳ ಪ್ರಾದೇಶಿಕ ಪಕ್ಷಗಳು ಸ್ಥಳೀಯ ಸಮಸ್ಯೆಗಳನ್ನಿಟ್ಟುಕೊಂಡು ಹೋರಾಟ ಮಾಡುತ್ತಿರುವ ಪಕ್ಷಗಳನ್ನು ಕುಟುಂಬ ರಾಜಕಾರಣ ಅಂತಿದ್ದಾರೆ. ರಾಷ್ಟ್ರೀಯ ಪಕ್ಷಗಳು 75 ವರ್ಷಗಳಿಂದಿರೂ ಪ್ರಾದೇಶಿಕ ಪಕ್ಷಗಳನ್ನು ಮುಗಿಸಲು ಮುಂದಾಗಿದ್ದಾರೆ. ನಾವು ಕೊಟ್ಟ ಮನವಿಗಳಿಗೆ ಇವರ ಬಳಿ ಪುರಸ್ಕಾರವಿಲ್ಲ, ನಾವು ಇವರ ಬಳಿ ಗುಲಾಮರಂತೆ ನಿಲ್ಲಬೇಕಾ? ಇವರ ಅಜೆಂಡ ಕುಟುಂಬ ರಾಜಕಾರಣ ಅಂತ್ಯವಲ್ಲ, ವಿರೋಧ ಪಕ್ಷಗಳನ್ನ ದಮನ ಮಾಡಬೇಕು ಅನ್ನೋದು ಇವರ ಅಜೆಂಡವಾಗಿದೆ. ದೇಶದಲ್ಲಿ ವಿರೋದ ಪಕ್ಷವೆ ಇಲ್ಲವಾಗಬೇಕು ಅನ್ನೂ ಅಜೆಂಡವನ್ನಿಟ್ಟುಕೊಂಡು ಈ ರೀತಿ ಮಾಡುತ್ತಿದ್ದಾರೆ ಎಂದು ಗುಡುಗಿದರು.

ಈ ವೇಳೆ ಶಾಸಕ ಎಲ್.ಎನ್.ನಾರಾಯಣಸ್ವಾಮಿ, ತಾಲೂಕು ಜೆಡಿಎಸ್ ಅಧ್ಯಕ್ಷ ಆರ್.ಮುನೇಗೌಡ, ಪ್ರಧಾನ ಕಾರ್ಯದರ್ಶಿ ರವೀಂದ್ರ, ಕಾರ್ಯಾಧ್ಯಕ್ಷ ಲಕ್ಷ್ಮಣ್ , ಕುಂದಾಣ ಹೋಬಳಿ ಮಾಜಿ ಅಧ್ಯಕ್ಷ ಮುನಿರಾಜು, ವಿಶ್ವನಾಥಪುರ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಕಲ್ಪನಾ ನಾರಾಯಣಸ್ವಾಮಿ, ಮಾಜಿ ಅಧ್ಯಕ್ಷೆ ಮಂಗಳ ನಾರಾಯಣಸ್ವಾಮಿ, ಸದಸ್ಯರಾದ ದಿನ್ನೇಸೋಲೂರು ಶ್ರೀನಿವಾಸ್, ಭವ್ಯವಸಂತ್, ಮುನೇಗೌಡ, ವೆಂಕಟಮ್ಮ, ಲಕ್ಷ್ಮೀನರಸಮ್ಮ, ಮಂಜುನಾಥ್, ನರಸಿಂಹರಾಜು, ನಾಗರಾಜು, ಆಂಜಿನಮ್ಮ, ಪ್ರಧಾನ ಅರ್ಚಕ ನಾಗೇಶ್, ಪುರಸಭಾ ಸದಸ್ಯ ಎಸ್.ನಾಗೇಶ್, ಮುಖಂಡ ನೆರಗನಹಳ್ಳಿ ಶ್ರೀನಿವಾಸ್, ಪ್ರಭಾಕರ್, ದಿನ್ನೂರು ರಾಮಣ್ಣ, ಮುನಿರಾಜ್, ಸೋಲೂರು ಮನು, ನವೀನ್, ಜೆಡಿಎಸ್ ಮುಖಂಡರು, ಕಾರ್ಯಕರ್ತರು ಮತ್ತು ಭಕ್ತಾಧಿಗಳು ಇದ್ದರು.

ದೇವನಹಳ್ಳಿ ತಾಲೂಕಿನ ವಿಶ್ವನಾಥಪುರ ಗ್ರಾಮದಲ್ಲಿನ ಶ್ರೀ ಚೌಡೇಶ್ವರಿ ಕಾಶೀ ವಿಶ್ವನಾಥ ದೇವಾಲಯ ಪ್ರತಿಷ್ಠಾಪನೆ ಹಾಗೂ ಬ್ರಹ್ಮ ಕಲಶಾಭಿಶೇಕ ಹಾಗೂ ಜಾತ್ರ ಮಹೋತ್ಸವದ ಕಾರ್ಯಕ್ರಮಕ್ಕೆ ಮಾಜಿ ಸಿಎಂ ಎಚ್.ಡಿ.ಕುಮಾರಸ್ವಾಮಿ ಭೇಟಿ ನೀಡಿ ಪೂಜಾ ಕೈಂಕರ್ಯದಲ್ಲಿ ಪಾಲ್ಗೋಂಡಿರುವುದು.