Latest Post

ಉಪನ್ಯಾಸಕ ಅಶೋಕ ಕೋರೆಗೆ ಪಿಎಚ್‌.ಡಿ ಡಾಕ್ಟರೇಟ್ : ಎಬಿವಿಪಿ ಯಿಂದ ಸನ್ಮಾನ ಸಾಕು ನಾಯಿಗಳಿಗೆ ತಪ್ಪದೇ ರೇಬೀಸ್ ಲಸಿಕೆ ನೀಡಿ: ಸಚಿವ ಪ್ರಭು ಚವ್ಹಾಣ
Spread the love

ಗದಗ ತಾಲ್ಲೂಕಿನಾದ್ಯಂತ ಅತಿ ಹೆಚ್ಚು ಯರೆ ಭೂಮಿಯನ್ನು ಹೊಂದಿದ ಭೂ ಪ್ರದೇಶವಿದ್ದು ಈರುಳ್ಳಿ ಹಾಗೂ ಮೆಣಸಿನಕಾಯಿ ಬೆಳೆಯಲು ಸೂಕ್ತ ಭೂಮಿಯಾಗಿರುವದರಿಂದ ಅದಕ್ಕೆ ರೈತರು ಅಧಿಕ ಪ್ರಮಾಣದಲ್ಲಿ ಬೀತನೆ ಮಾಡುತ್ತಿದ್ದಾರೆ.
ತಾಲ್ಲೂಕಿನ ಲಕ್ಕುಂಡಿ ತಿಮ್ಮಾಪೂರ ಹರ್ಲಾಪೂರ ಕಣಗಿನಾಳ ಕೋಟುಮಚಿಗಿ ಭಾಗದ ರೈತರು ಈರುಳ್ಳಿ ಮೆಣಸಿನಕಾಯಿ ಬಿತ್ತನೆ ಪ್ರಾರಂಭಿಸಿದ್ದು ಜುಲೈ ತಿಂಗಳಿನ ಮೊದಲನೆಯ ವಾರ ಸುಕ್ತ ಸಮಯವಾಗಿದ್ದು ಅದಕ್ಕೆ ಬಿತ್ತನೆ ಕಾರ್ಯ ಗರಿಗೆರಗಿದೆ.

ರೈತರ ಪ್ರಮುಖ ವಾಣಿಜ್ಯ ಬೆಳೆಗಳಾದ ಈರುಳ್ಳಿ ಮೆಣಸಿಕಾಯಿ ಬಿತ್ತನೆ ಕಾರ್ಯ ಪ್ರಾರಂಭ

ಈರುಳ್ಳಿ ಮೆಣಸಿನಕಾಯಿ ಬಿತ್ತನೆಯ ಖರ್ಚು ವೆಚ್ಚಗಳು

4 ಎಕರೆ ಭೂಮಿಯನ್ನು ಬೇಸಿಗೆಯಿಂದ ಇಲ್ಲಿಯವರೆಗೂ ಸರಿ ಸುಮಾರು ನಾಲ್ಕುರಿಂದ ಐದು ಬಾರಿ ಭೂಮಿಯನ್ನು ಉಳುಮೆ ಮಾಡಿ ಅದ ಗೊಳಿಸಲು ಸುಮಾರು 10 ಸಾವಿರ ರೂಪಾಯಿಗಳು ಖರ್ಚಾಗುತ್ತದೆ.ಈರುಳ್ಳಿ ಬೀಜ ಪ್ರತಿ ಕೆಜಿಗೆ 1200 ರೂಪಾಯಿಗಳು ಒಟ್ಟು 4800 ರೂಪಾಯಿ
ಮೆಣಸಿನಕಾಯಿ ಬೀಜಕ್ಕೆ 1200 ರೂಪಾಯಿ 2 ಚೀಲ ರಸಗೋಬರಕ್ಕೆ 3300ರೂಪಾಯಿ ಹಾಗೂ ಬಿತ್ತನೆಯ ಟ್ರ್ಯಾಕ್ಟರ್ ಬಾಡಿಗೆ  4000 ರೂಪಾಯಿಗಳು.
ಒಟ್ಟು 4 ಎಕರೆ ಪ್ರದೇಶದಲ್ಲಿ ಬೀತನೆ ಮಾಡಲು 23300 ರೂಪಾಯಿ ಹಣವನ್ನು ರೈತರು ಖರ್ಚು ಮಾಡುತ್ತಾರೆ.

ಈ ವರ್ಷವಾದರೂ ಮಳೆರಾಯ ಸಮಯಕ್ಕೆ ಸರಿಯಾಗಿ ಬಂದು ಈರುಳ್ಳಿ ಮೆಣಸಿನಕಾಯಿ ಬೆಳೆಗಳು ಉತ್ತಮ ಇಳುವರಿ ಬಂದು ಒಳ್ಳೆಯ ಬೆಲೆಗೆ ಮಾರಾಟವಾಗಿ ರೈತರನ್ನು ಆರ್ಥಿಕವಾಗಿ ಸುಭದ್ರವಾಗಿ ಮುಂದೆ ಬರಲಿ ಎಂದು ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ವಿ ಆರ್ ನಾರಾಯಣರೆಡ್ಡಿ ಬಣದ ಗದಗ ಜಿಲ್ಲಾ ರೈತ ಸಂಘದ ಜಿಲ್ಲಾ ಅಧ್ಯಕ್ಷ ಯಲ್ಲಪ್ಪ ಎಚ್ ಬಾಬರಿ ಅವರು ಹಾರೈಸಿದ್ದಾರೆ.