Latest Post

ಈ ದೇಶದ ಸಂಪತ್ತು ಶಿಕ್ಷಕರು :ಡಾ ಮನ್ನಥ ಡೊಳೆ ವಸತಿ ನಿಲಯಗಳಿಗೆ 25% ಪ್ರತಿಶತ ಪ್ರವೇಶವನ್ನು ಹೆಚ್ಚಿಸುವಂತೆ ಎಬಿವಿಪಿ ಔರಾದ ಶಾಖೆ ಮನವಿ
Spread the love

ಬಸವಕಲ್ಯಾಣ ನಗರದಲ್ಲಿ ಕೆಲ ದಿನಗಳಿಂದ ಬೀದಿ ದೀಪಗಳು ಹಗಲುಹೊತ್ತಿನಲ್ಲಿ ಉರಿಯುತ್ತಿವೆ ಇದರಿಂದ ವಿದ್ಯುತ್ ಶಕ್ತಿ ನಷ್ಟವಾಗಿ ಸಾರ್ವಜನಿಕರ ತೆರಿಗೆ ಹಣ ಪೋಲಾಗುತ್ತಿದೆ ಹಾಗೂ ವಿದ್ಯುದ್ದೀಪಗಳು ಬಹುಬೇಗನೆ ಕೆಟ್ಟು ಹೋಗುತ್ತಿವೆ

 ದುರಸ್ತಿ ಕಾರ್ಯಗಳು ತ್ವರಿತಗತಿಯಲ್ಲಿ ಆಗದಿರುವುದರಿಂದ ಸಾರ್ವಜನಿಕರು ಸಂಕಷ್ಟ ಅನುಭವಿಸುವಂತಾಗಿದೆ ಈಗಲೂ ಕೂಡ ನಗರದ ಸಾಕಷ್ಟು ಕಡೆ ರಸ್ತೆಯ ವಿಭಜಕ ಗಳಲ್ಲಿನ ಹಾಗೂ ರಸ್ತೆಬದಿಯ ಕಂಬಗಳಿಗೆ ವಿದ್ಯುದ್ದೀಪಗಳು ಇದ್ದರೂ ಕೂಡ ರಾತ್ರಿ ಹೊತ್ತಿನಲ್ಲಿ ಉರಿದು ಬೆಳಕು ಕೊಡದೆ ನಿಷ್ಪ್ರಯೋಜಕವಾಗಿವೆ ಮತ್ತು  ರಸ್ತೆ ವಿಭಜಕಗಳಲ್ಲಿ  ವಿದ್ಯುತ್ ದೀಪ ಕಂಬಗಳು ಕೇವಲ ನಾಲ್ಕೈದು ವರ್ಷಗಳ ಹಿಂದೆ ಅಳವಡಿಸಿದ್ದರು ಕೂಡ ಅವುಗಳು ತುಕ್ಕು ಹಿಡಿದು ವಾಹನ ಸವಾರರಿಗೆ ರಾತ್ರಿಹೊತ್ತಿನಲ್ಲಿ ಕಾಣಿಸದಂತಹ ಪರಿಸ್ಥಿತಿಗೆ ಬಂದು ತಲುಪಿದೆ ಇದರಿಂದ ಅನೇಕ ಸಾರ್ವಜನಿಕರು(ರಸ್ತೆ ಅಪಘಾತ)ಕಂಬಗಳಿಗೆ ಡಿಕ್ಕಿ ಹೊಡೆದು ವಾಹನ ಸವಾರರು ಸಂಕಷ್ಟಕ್ಕೆ ಸಿಲುಕಿ  ತೊಂದರೆ ಅನುಭವಿಸಿರುವ ಸಾಕಷ್ಟು ಉದಾರಣೆಗಳು ಆಗುತ್ತಿದೆ

ಆದರಿಂದ ಸಂಬಂಧಿಸಿದವರು ವಿದ್ಯುತ್ ಕಂಬಗಳಿಗೆ ಮತ್ತು ರಸ್ತೆ ವಿಭಜಕ ಗಳಿಗೂ ಮತ್ತು ರಸ್ತೆ ಬದಿಯ (ಪಾದಚಾರಿ ಸ್ಥಳ) ಫುಟ್ ಪಾತ್ ಗಳಿಗೆ ಬಣ್ಣ ಬಳಿದು ನಗರದ ಸುಂದರಿಕರಣದ ಜೊತೆಗೆ ಸಾರ್ವಜನಿಕರಿಗೆ ಸಹಾಯ ಕೂಡ ಒದಗಿಸಿದಂತಾಗುತ್ತದೆ ಸಂಬಂಧಪಟ್ಟ ಇಲಾಖೆಯವರು ಕಾರ್ಯಪ್ರವೃತ್ತರಾಗಬೇಕು ಎಂದು ಯುವ ಮುಖಂಡ ವೀರೇಶ ಬೋರ್ಗೆ ಬಸವಕಲ್ಯಾಣ  ಅಗ್ರಹಿಸಿದ್ದಾರೆ