Latest Post

ಈ ದೇಶದ ಸಂಪತ್ತು ಶಿಕ್ಷಕರು :ಡಾ ಮನ್ನಥ ಡೊಳೆ ವಸತಿ ನಿಲಯಗಳಿಗೆ 25% ಪ್ರತಿಶತ ಪ್ರವೇಶವನ್ನು ಹೆಚ್ಚಿಸುವಂತೆ ಎಬಿವಿಪಿ ಔರಾದ ಶಾಖೆ ಮನವಿ
Spread the love

ಕಮಲನಗರ: ಸತತ ಮಳೆಯಿಂದಾಗಿ ಮನೆಗಳ ಗೋಡೆ ಕುಸಿತದಿಂದಾಗಿ ಭಯಭಿತರಾಗಿ ಜನರು, ಮನೆ ತೊರೆದು ಅಕ್ಷರಶಃ ಬೀದಿಗೆ ಬಿದ್ದಿದ್ದಾರೆ.ಪ್ರತಿದಿನ ಸತತ ತುಂತುರು ಮಳೆ ಬೀಳುತ್ತಿದ್ದು, ಮನೆ ಚಾವಣಿ ಹಾಗೂ ಗೋಡೆಗಳು ನೆಲಕ್ಕುರುಳಿ ಆತಂಕದಲ್ಲಿಜೀವನ ಸಾಗಿಸುವಂತಾಗಿದೆ ಎಂದು ಕಮಲನಗರ ತಾಲೂಕಿನ ಮದನೂರ ಗ್ರಾಮದ ಗ್ರಾಮಸ್ಥರು ಅಳಲು ತೋಡಿಕೊಂಡಿದ್ದಾರೆ.ಕಮಲನಗರ ತಾಲೂಕಿನ ಮದನೂರ ಗ್ರಾಮದ ಕಾಶಿನಾಥ್ ತಂದೆ ಮಾದಪ್ಪ ಎಂಬುವರ ಮನೆ ಗೋಡೆ ಕುಸಿದಿರುವುದು

ರವಿವಾರ ಸಂಜೆ ಸುರಿದ ಮಳೆಯಿಂದಾಗಿ ಮದನೂರ ಗ್ರಾಮದ ನಿವಾಸಿ ಕಾಶಿನಾಥ್ ತಂದೆ ಮಾದಪ್ಪ ಮಗಳೂರೆ ಎಂಬುವರ ಮನೆ ಮುಂಭಾಗದ ಗೋಡೆ ಕುಸಿದು ಆತಂಕವನ್ನುಂಟು ಮೂಡಿಸಿದೆ. ಇಂದು ಸಾಂಯಕಾಲ 7.30ರ ಹೊತ್ತಿಗೆ ಸಂಪೂರ್ಣ ಗೋಡೆ ಕುಸಿದ ಪರಿಣಾಮ ಪಕ್ಕದವರ ಮನೆಯಲ್ಲಿಕುಟುಂಬ ಆಶ್ರಯ ಪಡೆದಿದೆ. ಗೋಡೆ ಕುಸಿತದಿಂದ ಮನೆಯಲ್ಲಿದವಸ, ಧಾನ್ಯಗಳು ಸೇರಿದಂತೆ ದಿನಬಳಕೆ ಸಾಮಗ್ರಿಗಳು ಸಿಲುಕಿವೆ. ಸಂಬಂಧಿಸಿದ ಕಮಲನಗರ ತಾಲೂಕಿನ ತಹಶೀಲ್ದಾರರು ಹಾಗೂ ಸ್ಥಳೀಯ ಶಾಸಕರಾದ ಪ್ರಭು ಚವ್ಹಾಣ ಗ್ರಾಮಕ್ಕೆ ಭೇಟಿ ನೀಡಿ ಹಳೆ ಮನೆಗಳನ್ನು ಪರಿಶೀಲಿಸಿ ಬೇರೆಡೆ ಆಶ್ರಯ ಕಲ್ಪಿಸಬೇಕಾಗಿದೆ ಎಂಬುದು ಗ್ರಾಮಸ್ಥರ ಆಗ್ರಹವಾಗಿದೆ.

ಗುಂಡಪ್ಪಾ ಬೇಲ್ಲೆ ಮದನೂರ ಮನವಿ

ಸತತ ಸುರಿಯುತ್ತಿರುವ ಮಳೆಯಿಂದಾಗಿ ಗ್ರಾಮೀಣ ಪ್ರದೇಶದ ಹಳೆ ಮಣ್ಣಿನ ಮನೆಗಳ ಚಾವಣಿ ಹಾಗೂ ಗೋಡೆಗಳು ನೆಲಕ್ಕುರುಳುತ್ತಿವೆ. ಜಿಲ್ಲಾಡಳಿತ ಮತ್ತು ತಹಸೀಲ್ದಾರರು ಮಳೆಯಿಂದಾಗಿ ಹಾನಿಗೊಳಗಾದ ಫಲಾನುಭವಿಗಳತ್ತ ಗಮನಹರಿಸಿ ಸೂಕ್ತ ಪರಿಹಾರ ನೀಡಬೇಕೆಂದು ಗ್ರಾಮದ ಗುಂಡಪ್ಪಾ ಬೇಲ್ಲೆ ಮದನೂರ ಮನವಿ ಮಾಡಿದ್ದಾರೆ.