Latest Post

ಈ ದೇಶದ ಸಂಪತ್ತು ಶಿಕ್ಷಕರು :ಡಾ ಮನ್ನಥ ಡೊಳೆ ವಸತಿ ನಿಲಯಗಳಿಗೆ 25% ಪ್ರತಿಶತ ಪ್ರವೇಶವನ್ನು ಹೆಚ್ಚಿಸುವಂತೆ ಎಬಿವಿಪಿ ಔರಾದ ಶಾಖೆ ಮನವಿ
Spread the love

ಸಚಿವ ಚವ್ಹಾಣ ನೇತ್ರತ್ವದಲ್ಲಿ ಪ್ರಗತಿ ಪರಿಶೀಲನಾ ಸಭೆ

ಔರಾದ್ ಪಟ್ಟಣದಲ್ಲಿ ಸೋಮವಾರ ಪ್ರಭು ಚೌಹಾಣ್ ರವರು ಎಲ್ಲಾ ಅಧಿಕಾರಿಗಳಿಗೆ ತ್ರೈಮಾಸಿಕ ಸಭೆಯನ್ನು ಕರೆದರು ತ್ರೈಮಾಸಿಕ ಸಭೆಯು ವ್ಯಸನಮುಕ್ತ ಜೀವನ ನಡೆಸಲು ಎಲ್ಲರೂ ಬದ್ಧರಾಗಿರಬೇಕೆಂದು ಯಾವುದೇ ಕೆಟ್ಟ ಚಟಗಳಿಗೆ ಬಲಿಯಾಗದಂತೆ ನಾವೆಲ್ಲರೂ ಪ್ರಮಾಣ ವಚನ ಸ್ವೀಕರಿಸಬೇಕೆಂದು ಪ್ರಮಾಣವಚನ ಸ್ವೀಕರಿಸುತ್ತ ತ್ರೈಮಾಸಿಕ ಸಭೆ ಪ್ರಾರಂಭಿಸಿದರು
ಇನ್ನು ಇದೇ ಸಂದರ್ಭದಲ್ಲಿ ಸಭೆಗೆ ಗೈರಾದ ಅಧಿಕಾರಿಗಳ ಬಗ್ಗೆ ಗರಂ ಆಗಿ ಅವರಿಗೆ ಕಠಿಣವಾದ ಶಿಕ್ಷೆ ನೀಡುವುದಲ್ಲದೆ ಅವರನ್ನು ನೋಟಿಸ್ ಜಾರಿಗೊಳಿಸಿ ಎಂದು ತಾಲೂಕ ಪಂಚಾಯತ ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳಿಗೆ ತಿಳಿಸಿದರು ಇನ್ನೂ ತಾಲೂಕಿನಲ್ಲಿ ಕಾರ್ಯನಿರ್ವಹಿಸುತ್ತಿರುವ ಎಲ್ಲಾ ಅಧಿಕಾರಿಗಳು ತಾಲ್ಲೂಕಿನಲ್ಲಿ ವಾಸ್ತವ್ಯ ಹೂಡಬೇಕೆಂದು ಪ್ರತಿ ಬಾರಿ ಹೇಳಿದರೂ ಕೂಡ ಯಾರೂ ಅದನ್ನು ಸ್ಪಂದಿಸುತ್ತಿಲ್ಲಎಂದು ಬೇಸರ ವ್ಯಕ್ತಪಡಿಸಿದರು ಇನ್ನು ಅಧಿಕಾರಿಗಳು ಸರಿಯಾದ ಸಮಯಕ್ಕೆ ಕಚೇರಿಗೆ ಆಗಮಿಸುತ್ತಿಲ್ಲ ಜನರ ಕಷ್ಟಗಳಿಗೆ ಅವರ ಕೆಲಸಗಳಿಗೆ ಸ್ಪಂದಿಸುತ್ತಿಲ್ಲ ಎಂದು ಜನರು ಹಲವಾರು ಬಾರಿ ಕರೆ ಮಾಡಿ ನನ್ನನ್ನು ತಿಳಿಸಿದ್ದಾರೆ ಎಂದು ಅಧಿಕಾರಿಗಳಿಗೆ ಗುಡುಗಿದರು ತಾಲ್ಲೂಕಿನಾದ್ಯಂತ ನಡೆಯುತ್ತಿರುವ ವಾಟರ್ ಫಿಲ್ಟರ್ ಎಲ್ಲಾ ಕೆಲಸವೂ ಬೋಗಸ್ ಆಗಿದೆ ಎಂದು ಜನರು ತಿಳಿಸಿದ್ದಾರೆ ಇನ್ನೂ ಔರಾದ್ ತಾಲ್ಲೂಕಿನಲ್ಲಿ ವಾಡಿಕೆಗಿಂತ ಹೆಚ್ಚು ಮಳೆಯಾಗಿರುವುದರಿಂದ ರೈತರು ಸಂಕಷ್ಟಕ್ಕೊಳಗಾಗಿದ್ದಾರೆ ಆ ರೈತರ ಗದ್ದೆಗಳಿಗೆ ತೆರಳಿ ಅವರಿಗಾದ ಹಾನಿಯ ಬಗ್ಗೆ ಪರಿಶೀಲಿಸಿ ಅವರಿಗೆ ಸರ್ಕಾರದಿಂದ ಆಗುವ ಅಥವಾ ಬರುವ ಎಲ್ಲಾ ಪರಿಹಾರಗಳು ಅವ್ರಿಗೆ ಸಿಗಬೇಕೆಂದು ತಿಳಿಸಿದರು .
ಇನ್ನೂ ಪ್ರತಿ ವರ್ಷದಂತೆ ವಾಡಿಕೆಯಂತೆ ತಾಲ್ಲೂಕಿನಲ್ಲಿ 360 ಮಿಲಿ ಮೀಟರ್ ಮಳೆಯಾಗಬೇಕಿತ್ತು ಆದರೆ ಈ ಸಾರಿ 680 ಮಿಲಿಮೀಟರ್ ಮಳೆ ಔರಾದ್ ತಾಲೂಕಿಗೆ ಆದುದರಿಂದ ರೈತರು ಸಂಕಷ್ಟಕ್ಕೊಳಗಾಗಿದ್ದಾರೆ ಆದ್ದರಿಂದ ಔರಾದ್ ತಾಲೂಕಿನಗೆ ಅತಿವೃಷ್ಟಿ ಪರಿಹಾರ ಘೋಷಿಸಬೇಕೆಂದು ನಾನು ಸಹ ಮುಖ್ಯಮಂತ್ರಿಗೆ ಮಾತನಾಡಿದೆನೆಂದು ಹೇಳಿದರು
ಇನ್ನು ತಾಲ್ಲೂಕಿನ ರೈತ ಸಂಪರ್ಕಗಳಿಗೆ ಗ್ರಾಮಸೇವಕರು ಸರಿಯಾಗಿ ಕೆಲಸಕ್ಕೆ ಹೋಗುತ್ತಿಲ್ಲ ಅಲ್ಲಿ ರೈತರಿಗೆ ಸ್ಪಂದಿಸುತ್ತಿಲ್ಲ ಎಂದು ದೂರು ಬಂದಿದೆ ಇವುಗಳನ್ನು ಗಮನವಿಟ್ಟು ಕೆಲಸ ಮಾಡಬೇಕೆಂದು ಅಧಿಕಾರಿಗಳಿಗೆ ತಿಳಿಸಿದರು .
*ಒಂದನೇ ತರಗತಿಯಿಂದ ಆರನೇ ತರಗತಿಯವರೆಗಿನ ಮಕ್ಕಳಿಗೆ ಓದಲು ಬರೆಯಲು ಬರುತ್ತಿಲ್ಲ ಎಂದು ಸಚಿವರು ಆಕ್ರೋಶ ವ್ಯಕ್ತಪಡಿಸಿದರು
ಶಿಕ್ಷಕರು ಶಾಲೆಗೆ ಹೋಗದೆ ರಾಜಕೀಯ ಮಾಡುತ್ತಿದ್ದಾರೆ ಎಂದು ಸಚಿವರು ಶಿಕ್ಷಣಾಧಿಕಾರಿಗಳಿಗೆ ತರಾಟೆಗೆ ತೆಗೆದುಕೊಂಡರು ಶಾಲೆ ಜೆ ಸಮಯದಲ್ಲೂ ಸಹ ಶಿಕ್ಷಕರು ಹೊರಗಡೆ ಓಡಾಡುವುದು ತಿರುಗಾಟ ಮಾಡುವುದು ಕಂಡು ಕಂಡುಬಂದಿದೆ ಇನ್ನು 170 ಅತಿಥಿ ಶಿಕ್ಷಕರ ನೇಮಕದಲ್ಲಿ ಗೋಲ್ ಮಾಲ್ ಆಗಿದೆ ಎಂದು ನನ್ನ ಗಮನಕ್ಕೆ ಬಂದಿದೆ ಇನ್ನೂ ಕ್ಷೇತ್ರ ಶಿಕ್ಷಣಾಧಿಕಾರಿಗಳಿಗೆ ಪ್ರತಿ ಸರ್ಕಾರಿ ಶಾಲೆಗಳಲ್ಲಿ ಶೌಚಾಲಯಗಳು ಶಾಲೆ ಕಾಂಪೌಂಡ್ ಗಳು ಹಾಗೂ ಶಾಲೆಯಲ್ಲಿ ಕಸ ಕಡ್ಡಿ ಬೀಳದಂತೆ ಸ್ವಚ್ಚತೆಯಿಂದ ಕೂಡಿರಬೇಕೆಂದು ಅವರ ಗಮನ ತಂದರು ನಾನು ಶಿಕ್ಷಣಕ್ಕೆ ಆದ್ಯತೆ ಕೊಡುತ್ತೇನೆ ಆದ್ದರಿಂದ ಎಲ್ಲಾ ಶಾಲೆಗಳಲ್ಲಿ ಮೂಲಭೂತ ಸೌಕರ್ಯಗಳು ಇರಲೇಬೇಕು ಎಂದು ತಿಳಿಸಿದರು.
*ಕುಡಿದ ಅಮಲಿನಲ್ಲಿ108 ನಡೆಸಿದ ಚಾಲಕ*
ಸರ್ಕಾರವು ಆರೋಗ್ಯ ಇಲಾಖೆ ತನ್ನದೇ ಆದ ಮಹತ್ವವನ್ನು ನೀಡಿದೆ ಆರೋಗ್ಯ ಇಲಾಖೆಯಲ್ಲಿ ಕೆಲಸ ಮಾಡುತ್ತಿರುವ ಎಲ್ಲಾ ಸಿಬ್ಬಂದಿ ವರ್ಗದವರು ಬಗ್ಗೆ ಹೊಸ ಕಾಳಜಿ ವಹಿಸಿದೆ ಆದರೆ ವೈದ್ಯಾಧಿಕಾರಿಗಳು ಸರ್ಕಾರದ ಕೆಲಸ ಬಿಟ್ಟು ತಮ್ಮ ಮನೆಯಲ್ಲಿ ಸ್ವತಃ ಆಸ್ಪತ್ರೆಗಳನ್ನು ಹಾಕಿಕೊಂಡು ಜನರಲ್ಲಿ ಹಣ ಸುಲಿಗೆ ಮಾಡುವಂತಹ ಕೆಲಸ ನಡೆಯುತ್ತಿದೆ ಎಂದು ನನ್ನ ಗಮನಕ್ಕೆ ಬಂದಿದೆ ಎಂದರು
ಇನ್ನೂ ಆಸ್ಪತ್ರೆಯಲ್ಲಿ ಔಷಧಿಗಳು ಇದ್ದರೂ ಸಹ ಹೊರಗಿನಿಂದ ಔಷಧಿ ತೆಗೆದುಕೊಂಡು ಬನ್ನಿ ಇಲ್ಲಿ ನಮ್ಮಲ್ಲಿ ದೊರಕುವುದಿಲ್ಲ ಎನ್ನುವ ಮಾತು ಸಹ ಸಿಬ್ಬಂದಿಗಳು ರೋಗಿಗಳ ಜೊತೆ ಈ ರೀತಿಯಾಗಿ ವರ್ತಿಸುತ್ತಿದ್ದಾರೆಂದು ನನ್ನ ಗಮನಕ್ಕೆ ಬಂದಿದೆ ಆಸ್ಪತ್ರೆಗಳಿಗೆ ವೈದ್ಯಾಧಿಕಾರಿಗಳು ವೈದ್ಯರು ನಶೆ ಮಾಡಿ ಬಂದರೆ ಅವರನ್ನು ವಜಾಗೊಳಿಸುತ್ತೇವೆಂದು ಖಡಕ್ ವಾರ್ನಿಂಗ್ ಮಾಡಿದರು.
ಇನ್ನೂ 108 ಆಂಬ್ಯುಲೆನ್ಸ್ ಇಲ್ಲ ಆದಷ್ಟು ಬೇಗ ಅಲ್ಲಿಗೆ ಅಂಬ್ಯುಲೆನ್ಸ್ ವ್ಯವಸ್ಥೆ ಮಾಡಬೇಕೆಂದು ವೈದ್ಯಾಧಿಕಾರಿಗಳಿಗೆ ತಿಳಿಸಿದರು.
ಇದೇ ಸಂದರ್ಭದಲ್ಲಿ
ಗ್ರಾಮ ವಿಕಾಸ ಅಡಿಯಲ್ಲಿ ಎಕಲಾರ ಗ್ರಾಮಕ್ಕೆ ಮತ್ತು ಮುಂಗನಾಳ ಗ್ರಾಮಕ್ಕೆ ಬಂದಿರುವ ಅನುದಾನದಲ್ಲಿ ಕೆಲಸ ಕಾರ್ಯಗಳು ಪೂರ್ಣಗೊಂಡಿಲ್ಲ ಎಂದು ಗಮನಕ್ಕೆ ಬಂದಿದೆ ಅದನ್ನು ಸಂಬಂಧಪಟ್ಟ ಅಧಿಕಾರಿಗಳು ಗಮನಿಸಿ ಪರಿಷ್ಕರಿಸಿ ಕೆಲಸಕಾರ್ಯಗಳು ಪ್ರಾರಂಭಿಸಬೇಕೆಂದರು.
ತಾಲ್ಲೂಕಿಗೆ ಜೆಜಿಎಂ ಅಡಿಯಲ್ಲಿ 291ಹಳ್ಳಿಗಳು ಆಯ್ಕೆಯಾಗಿದ್ದು ಪ್ರತಿ ಗ್ರಾಮಗಳಲ್ಲಿಯೂ ಕೂಡ ಉತ್ತಮ ಕೆಲಸವಾಗಬೇಕೆಂದು ಹೇಳಿದರು.
*ಔರಾದ್ ಪಟ್ಟಣ ಸ್ವಚ್ಛತೆಯಿಂದ ಕೂಡಿರಬೇಕು
ಇದೇ ಸಂದರ್ಭದಲ್ಲಿ ಸಚಿವರು ಪಟ್ಟಣ ಪಂಚಾಯತ್ ಮುಖ್ಯಾಧಿಕಾರಿಗಳು ಜೊತೆ ಚರ್ಚಿಸುತ್ತಾ ಪಟ್ಟಣದಲ್ಲಿ ನೀರಿನ ವ್ಯವಸ್ಥೆಯಾಗಬೇಕು ಲೈಟಿನ ವ್ಯವಸ್ಥೆ ಆಗಬೇಕು ಪಟ್ಟಣದಲ್ಲಿ ಆರಾಧ್ಯದೇವರಾದ ಅಮರೇಶ್ವರ ದೇವಸ್ಥಾನದ ಪಕ್ಕ ಕಸಕಡ್ಡಿಗಳು ತುಂಬಿದೆ ಅದನ್ನು ಸುಸಜ್ಜಿತಗೊಳಿಸಬೇಕೆಂದು ತಿಳಿಸಿದರು
ಇನ್ನೂ ನೀರಿನಲ್ಲಿ ಬ್ಲೀಚಿಂಗ್ ಪೌಡರ್ ಹಾಕಿ ಪ್ರತಿ ತಿಂಗಳಿಗೆ ಟ್ಯಾಂಕ್ಗಳನ್ನು ಸ್ವಚ್ಛಗೊಳಿಸಿ ಬೇಕೆಂದು ಹೇಳಿದರು.
*ಪಿ.ಡಿ.ಒ ಗಳು ಸ್ಥಳೀಯವಾಗಿಯೇ ವಾಸ್ತವ್ಯ ಹೂಡಬೇಕು ಇಲ್ಲ ಜಾಗ ಖಾಲಿ ಮಾಡಬೇಕು*
ತಾಲೂಕು ಪಂಚಾಯತ್ ಮುಖ್ಯ ಕಾರ್ಯ ನಿರ್ವಹಣಾ ಅಧಿಕಾರಿಗಳಿಗೆ ತರಾಟೆಗೆ ತೆಗೆದುಕೊಂಡು ತಾಲ್ಲೂಕಿನ ಎಲ್ಲಾ ಗ್ರಾಮ ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳು ಸ್ಥಳೀಯವಾಗಿ ವಾಸ್ತವ್ಯ ಹೂಡಬೇಕು ಇಲ್ಲವೇ ಜಾಗ ಖಾಲಿ ಮಾಡಬೇಕು ಗ್ರಾಮ ಪಂಚಾಯಿತಿಗಳಿಗೆ ಸರಿಯಾದ ವೇಳೆಗೆ ಅಭಿವೃದ್ಧಿ ಅಧಿಕಾರಿಗಳು ಹೋಗುತ್ತಿಲ್ಲ ಅಲ್ಲಿನ ಜನರ ಕಷ್ಟಗಳಿಗೆ ಸ್ಪಂದಿಸುತ್ತಿಲ್ಲ ಯಾವುದೇ ರೀತಿಯ ಕುಡಿಯುವ ನೀರಿನ ವ್ಯವಸ್ಥೆ ಲೈಟಿನ ವ್ಯವಸ್ಥೆ ಮೂಲಭೂತ ಸೌಕರ್ಯಗಳನ್ನು ಒದಗಿಸುತ್ತಿಲ್ಲ ಎಂದು ನನ್ನ ಗಮನಕ್ಕೆ ಬಂದಿದೆ ಅತ್ತಕಡೆಗೆ ಗಮನಹರಿಸಬೇಕೆಂದು ಮುಖ್ಯ ನಿರ್ವಾಹಕ ಅಧಿಕಾರಿಗಳಿಗೆ ತಿಳಿಸಿದರು.