Latest Post

ಈ ದೇಶದ ಸಂಪತ್ತು ಶಿಕ್ಷಕರು :ಡಾ ಮನ್ನಥ ಡೊಳೆ ವಸತಿ ನಿಲಯಗಳಿಗೆ 25% ಪ್ರತಿಶತ ಪ್ರವೇಶವನ್ನು ಹೆಚ್ಚಿಸುವಂತೆ ಎಬಿವಿಪಿ ಔರಾದ ಶಾಖೆ ಮನವಿ
Spread the love

ಅಕ್ರಮವಾಗಿ 15 ಕೆ.ಜಿ ಗಾಂಜಾ ಬೆಳೆದ ಆರೋಪಿ ಬಂಧನ

ಅಕ್ರಮವಾಗಿ 15 ಕೆ.ಜಿ ಗಾಂಜಾ ಗಿಡಗಳನ್ನು ಬೆಳೆದಿದ್ದ ಆರೋಪಿಯನ್ನು ಬಂಧಿಸಿರುವ ಘಟನೆ ಶನಿವಾರ ಚಿಂತಾಕಿ ಪೊಲೀಸ್ ಠಾಣಾ ವ್ಯಾಪ್ತಿಯ ಕೀಶನ್ ತಾಂಡದಲ್ಲಿ ನಡೆದಿದೆ.
ಔರಾದ ಚಿಕ್ಲಿ (ಜೆ) ಗ್ರಾಪಂ ವ್ಯಾಪ್ತಿಯ ಕೀಶನ್ ತಾಂಡಾದ ಪುಂಡಲಿಕ್ ತಂದೆ ತುಳಸಿರಾಂ ಬಂಧಿತ ಆರೋಪಿ. ಈತ ತನ್ನ ಸ್ವಂತ ಹೊಲದಲ್ಲಿ ಹತ್ತಿ ಬೆಳೆಗಳ ಮಧ್ಯೆ ಅಕ್ರಮವಾಗಿ ಗಾಂಜಾ ಗಿಡಗಳನ್ನು ಬೆಳೆದಿರುವ ಖಚಿತ ಮಾಹಿತಿ ಮೇರೆಗೆ ಔರಾದ್ ವೃತ್ತ ನೀರಿಕ್ಷ ಮಲ್ಲಿಕಾರ್ಜುನ ಇಕ್ಕಳಕಿ ಅವರ ಮಾರ್ಗದರ್ಶನದಲ್ಲಿ ಚಿಂತಾಕಿ ಪೊಲೀಸ್‌ ಠಾಣಾ ಪಿಎಸ್‌ಐ ಸಿದ್ದಲಿಂಗ ಹಾಗೂ ಅವರ ತಂಡ ದಾಳಿ ನಡೆಸಿ ಆರೋಪಿ ಪುಂಡಲಿಕ್ ನನ್ನು ಬಂಧಿಸಿ ಸುಮಾರು 15 ಕೆ.ಜಿ.ಯ ಗಾಂಜಾ ಗಿಡಗಳನ್ನು ವಶಪಡಿಕೊಂಡು ನಂತರ ಆರೋಪಿಯನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ. ಈ ದಾಳಿಯಲ್ಲಿ ಮುಖ್ಯಪೇದೆ ಸತೀಶ ಗಂಗಾ, ಗೊರಕನಾಥ ರಾಠೊಡ, ಶಿವಕುಮಾರ ಸ್ವಾಮಿ, ಅರುಣ್ ಪಟೇಲ್, ಪ್ರಕಾಶ ಉಪಸ್ಥಿತರಿದ್ದರು.