Latest Post

ಉಪನ್ಯಾಸಕ ಅಶೋಕ ಕೋರೆಗೆ ಪಿಎಚ್‌.ಡಿ ಡಾಕ್ಟರೇಟ್ : ಎಬಿವಿಪಿ ಯಿಂದ ಸನ್ಮಾನ ಸಾಕು ನಾಯಿಗಳಿಗೆ ತಪ್ಪದೇ ರೇಬೀಸ್ ಲಸಿಕೆ ನೀಡಿ: ಸಚಿವ ಪ್ರಭು ಚವ್ಹಾಣ
Spread the love

ಬ್ರಿಟಿಷರು ವ್ಯಾಪಾರಕ್ಕೆಂದು ಭಾರತಕ್ಕೆ ಬಂದಿದ್ದರು,
ನಂತರ ಅದೇ ಬ್ರಿಟಿಷರು ಎರಡು ನೂರು ವರ್ಷಗಳ ಕಾಲ ಭಾರತದ ಮೇಲೆ ತಮ್ಮ ಹಿಡಿತವನ್ನು ಸಾಧಿಸಿ ಆಡಳಿತ ನಡೆಸಿದರು,

ಅದೇ ನಿಟ್ಟಿನಲ್ಲಿ ಇವಾಗ ಔರಾದ ಕಾಂಗ್ರೆಸ್ ನಲ್ಲಿ ಬೇರೆ ಜಿಲ್ಲೆಯ ಅಭ್ಯರ್ಥಿಗಳು ಬಂದು ಸ್ಥಳೀಯರ ವರ್ಚಸ್ಸು ಕಡಿಮೆ ಮಾಡುತ್ತಿದ್ದಾರೆ

ಯಾವುದೇ ಒಂದು ತಾಲೂಕಿನಲ್ಲಿ ಆ ಪಕ್ಷ ಗೆಲ್ಲಬೇಕಾದರೆ ಸ್ಥಳೀಯ ಅಭ್ಯರ್ಥಿಗೆ ಟಿಕೆಟ್ ನೀಡುವುದು ಕಡ್ಡಾಯ!
ಕಳೆದ 15 ವರ್ಷಗಳಿಂದ ಕಾಂಗ್ರೆಸ್ ಪಕ್ಷಕ್ಕೆ ಗೆಲ್ಲುವ ಅವಕಾಶ ಇದ್ದರು ಸಹ ಬೇರೆ ಜಿಲ್ಲೆಯ ಅಭ್ಯರ್ಥಿಗಳಿಗೆ ಟಿಕೆಟ್ ನೀಡಿ ಸೋತು ಸುಣ್ಣವಾಗಿರುವುದು ಔರಾದ್ ಕಾಂಗ್ರೆಸ್ ನ ಇತಿಹಾಸ!

ಮತ್ತೆ ಇವಾಗ ಚುನಾವಣೆ ಹತ್ತಿರವಾಗುತ್ತಿದ್ದಂತೆ ಪರ ಜಿಲ್ಲೆಯ/ ತಾಲೂಕಿನ ಅಭ್ಯರ್ಥಿಗಳು ಔರಾದ್ ವಿಧಾನಸಭಾ ಮತಕ್ಷೇತ್ರದ ವ್ಯಾಪ್ತಿಯಲ್ಲಿ ಬಂದು ಪ್ರಚಾರ ಗಿಟ್ಟಿಸಿಕೊಳ್ಳುತ್ತಿರುವುದು ಸ್ಥಳೀಯ ಕಾಂಗ್ರೆಸ್ ಮುಖಂಡರಲ್ಲಿ ಆತಂಕ ಮನೆ ಮಾಡಿದೆ

ಕಳೆದ ಮೂರು ಚುನಾವಣೆಗಳಲ್ಲಿ ಸೋತು ಸುಣ್ಣವಾಗಿರುವ ಕಾಂಗ್ರೆಸ್ ! ಮತ್ತೆ ಮುಂದಿನ ಚುನಾವಣೆಯಲ್ಲಿ ಬೇರೆ ಜಿಲ್ಲೆಯ ಅಭ್ಯರ್ಥಿಗಳಿಗೆ ಟಿಕೆಟ್ ನೀಡಿ ಸ್ಥಳೀಯ ಕಾಂಗ್ರೆಸ್ ಮುಖಂಡರಿಗೆ ವಂಚಿಸುತ್ತಾರ?
ಎಂಬ ಪ್ರಶ್ನೆ  ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ

ಸ್ಥಳೀಯ ಕಾಂಗ್ರೆಸ್ ಮುಖಂಡರುಗಳ ಪ್ರಕಾರ ಯಾರೇ ಆಗಲಿ ಸ್ಥಳೀಯ ನಾಯಕರಿಗೆ ಟಿಕೆಟ್ ನೀಡಬೇಕೆಂದು ಪಟ್ಟು ಹಿಡಿದಿದ್ದಾರೆ , ಆದರೆ ಜಿಲ್ಲಾಧ್ಯಕ್ಷರ ಮತ್ತು ತಾಲೂಕು ಅಧ್ಯಕ್ಷರ ಕಣ್ಣು ತಪ್ಪಿಸಿ ಪರ ಜಿಲ್ಲೆಯವರು ಬಂದು ಪ್ರಚಾರ ಗಿಟ್ಟಿಸಿಕೊಳ್ಳುತ್ತಿರುವುದು ಸ್ಥಳೀಯ ನಾಯಕರಲ್ಲಿ ಆತಂಕ ಸೃಷ್ಟಿಸಿದೆ

ಚುನಾವಣೆ ಬಂದಾಗ ಪ್ರಚಾರ ಗಿಟ್ಟಿಸಿಕೊಳ್ಳುವುದು ನಂತರ ಕ್ಷೇತ್ರದಿಂದಲೇ ಮಾಯವಾಗುವುದು ವಾಡಿಕೆ, ಹಲವು ವರುಷಗಳಿಂದ ಸ್ಥಳೀಯ ನಾಯಕರು ಕಾಂಗ್ರೆಸ್ ಪಕ್ಷಕ್ಕಾಗಿ ಹಗಲಿರುಳು ದುಡಿದು ಪಕ್ಷ ಸಂಘಟನೆ ಮಾಡಿದು ಬೇರೆ ಜಿಲ್ಲೆಯವರಿಗೆ ಟಿಕೆಟ್ ನೀಡುವುದಕ್ಕಾ? ಎಂದು ಸ್ಥಳೀಯ ನಾಯಕರು ತಮ್ಮ ಕಳವಳ ವ್ಯಕ್ತಪಡಿಸುತ್ತಿದ್ದಾರೆ

ಬಿಜೆಪಿಯ ಪಕ್ಷದಿಂದ ಮತ್ತೆ ಈ ಬಾರಿಯು ಸಚಿವ ಪ್ರಭು ಚವ್ಹಾಣ ಟಿಕೆಟ್ ಪಡೆಯುತ್ತಾರೆ , ಅದರೆ ಕಳೆದ ಚುನಾವಣೆಯಲ್ಲಿ ಪ್ರಭು ಚವ್ಹಾಣ    ಒಬ್ಬ ಶಾಸಕರಾಗಿದ್ದರು ಅದರೆ ಈ ಬಾರಿ ಅವರು ಸಚಿವರಾಗಿದ್ದು ,ಸಚಿವರಾದ ಮೇಲೆ ಪ್ರಭು ಚವಾಣ್  ವರ್ಚಸ್ಸು ಕುಸಿದಿದೆ ಆಡಳಿತದ ವಿರೋಧಿ ಅಲೆ ತಾಲೂಕಿನಾದ್ಯಂತ ಪಸರಿಸಿದೆ ಸಚಿವ ಚವಾಣ್ ಅವರನ್ನ ಸೋಲಿಸುವುದು ಈಗ ಸುಲಭ ವಾಗಬಹುದು ಆದರೆ ಕಾಂಗ್ರೆಸ್ ಹೊರಗಿನ ಅಭ್ಯರ್ಥಿಗೆ ಟಿಕೆಟ್ ನೀಡಿದರೆ ಮತ್ತೆ ಚವಾಣ್ ಗೆ ಲಾಭವಾಗುವ ಎಲ್ಲ ಲಕ್ಷಣಗಳು ಇವೆ. ಒಟ್ಟಿನಲ್ಲಿ ಕಾಂಗ್ರೆಸ್ ಈ ಬಾರಿ ಸ್ಥಳೀಯರಿಗೆ ಟಿಕೇಟ್ ನೀಡಿದರೆ ಮಾತ್ರ ಗೆಲುವಿನ ದಡ ಸೇರಬಹುದು ಎಂಬ ಮಾತು ತಾಲೂಕಿನಲ್ಲಿ ಕೇಳಿಬರುತ್ತಿದೆ.