Latest Post

ಉಪನ್ಯಾಸಕ ಅಶೋಕ ಕೋರೆಗೆ ಪಿಎಚ್‌.ಡಿ ಡಾಕ್ಟರೇಟ್ : ಎಬಿವಿಪಿ ಯಿಂದ ಸನ್ಮಾನ ಸಾಕು ನಾಯಿಗಳಿಗೆ ತಪ್ಪದೇ ರೇಬೀಸ್ ಲಸಿಕೆ ನೀಡಿ: ಸಚಿವ ಪ್ರಭು ಚವ್ಹಾಣ
Spread the love

ಸೌಹಾರ್ದಕ್ಕೆ ಹೆಸರಾದ ಬೋರ್ಗಿ ಮೋಹರಂ

ಹಿಂದೂ-ಮುಸ್ಲಿಂ ಭಾವೈಕ್ಯತೆ ಸಾರುವ ಮೋಹರಂ

ಔರಾದ್: ನಂಬಿಕೆ ಮತ್ತು ಸಂಪ್ರದಾಯಗಳ ಕ್ರಿಯಾ ರೂಪಗಳೇ ಹಬ್ಬಗಳು. ಹಬ್ಬಗಳಲ್ಲಿ ನಮ್ಮ ಜನರು ಹಲವು ಬಗೆಯಾಗಿ ಆಚರಿಸುತ್ತಾರೆ. ಅಂತಹ ಹಲವು ಹಬ್ಬಗಳಲ್ಲಿ ಭಾವೈಕ್ಯತೆಯನ್ನು ಸಾರುವ ಮೊಹರಂ ಹಬ್ಬವು ಯಾವುದೇ ತಾರತಮ್ಯವಿಲ್ಲದೇ ಹಿಂದೂಗಳು ಸಹ ಪಾಲುಗೊಳ್ಳುವುದು ಈ ಹಬ್ಬದ ಒಂದು ವಿಶೇಷ. ಹಿಂದೂ ಮುಸ್ಲಿಂ ಭಾಂಧವ್ಯಕ್ಕೆ ಈ ಆಚರಣೆ ಒಳ್ಳೆಯ ಉದಾಹರಣೆಯಾಗಿ ನಡೆದುಕೊಂಡು ಬರುತ್ತದೆ. ಗ್ರಾಮೀಣ ಜನಪದ ಪರಿಸರದಲ್ಲಿ ಮೊಹರಂ ವಿಶಿಷ್ಠ ಸಾಂಸ್ಕೃತಿಕ ಆಚರಣೆಯಾಗಿದೆ.

ತಾಲೂಕಿನ ಬೋರ್ಗಿ (ಜೆ) ಗ್ರಾಮದ ಮೋಹರಂ ಜಾತಿ-ಭೇದ ಮೀರಿದ್ದು ಎಂದು ಹೇಳಬಹುದು. ಇಲ್ಲಿ ಹಿಂದೂ ಮುಸ್ಲಿಂ ಎಂಬ ಭಾವನೆ ಇಲ್ಲದೆ ಗ್ರಾಮದ ಪ್ರತಿಯೊಬ್ಬರು ತಮ್ಮ ಹಬ್ಬವೆಂದು ಆಚರಿಸಿಕೊಂಡು ಬರುತ್ತಿರುವರು. ಈ ಗ್ರಾಮದಲ್ಲಿ ಸುಮಾರು ಎಂಟು ದಿನಗಳ ಕಾಲ ಮೋಹರಂ ಹಬ್ಬ ಸಂಭ್ರಮ ಸಡಗರದಿಂದ ಆಚರಿಸಲಾಗುತ್ತದೆ. ಮುಗ್ತುಮ್ ಭಾಷಾ ಈ ಗ್ರಾಮದ ಪ್ರಮುಖ ದೇವರು ಬಿಫಾತ್ಮಾ, ಲಾಲಾಸಾಬ್, ಮಮಾಧನೆಪ್, ಹಸೇನ್ ಹುಸೇನ್, ಡೋಲಿ ಪಿರ್ ಗಳು ಕೂಡಿಸಿ ಪ್ರತಿಯೊಂದು ಪಂಜಾಗಳಿಗೆ ಭಕ್ತಾರಿಂದ ಸುಮಾರು 100 ಕೆ.ಜಿ ಗಳ ಹೂವಿನ ಹಾರಗಳು ಬರುತ್ತವೆ ಈ ಹೂವಿನ ಹಾರಗಳಿಂದ ಪಂಜಾಗಳನ್ನು ವೈಭವದಿಂದ ಅಲಂಕರಿಸಿ ಅದ್ದೂರಿಯಾಗಿ ಮೋಹರಂ ಹಬ್ಬ ಆಚರಣೆ ಮಾಡಲಾಗುತ್ತದೆ.

ಈ ಸಂದರ್ಭದಲ್ಲಿ ಗ್ರಾಮದ ಯುವಕರು ಹಿರಿಯರು ಹಳೆಯ ಸಾಂಪ್ರದಾಯಿಕ ಕಲೆಯಾದ ಮಜ್ಜುನು ಕುಣಿಯುತ್ತಾರೆ. ಜಿಲ್ಲೆಯ ಅನೇಕ ಜನರು ಬೋರ್ಗಿ(ಜೆ) ಗ್ರಾಮಕ್ಕೆ ಮೋಹರಂ ಹಬ್ಬ ನೋಡಿ ಕಣ್ತುಂಬಿಕೊಂಡು ದೇವರ ದರ್ಶನ ಪಡೆದು ಪುನಿತರಾಗುತ್ತಾರೆ.

ಮೋಹರಂ ಹಬ್ಬವನ್ನು ಹಿಂದುಗಳು ತಮ್ಮ ಹಬ್ಬವೆಂದು ಆಚರಣೆ ಮಾಡುತ್ತಾರೆ. ಹಿಂದುಗಳ ಸಹಕಾರ ಬಹಳ ಮಹತ್ವದ್ದು ಇಲ್ಲಿನ ಪ್ರತಿಯೊಂದು ವೈಶಿಷ್ಟ್ಯತೆಗೆ ಹಿಂದುಗಳೇ ಕಾರಣ ಇಲ್ಲಿನ ಸಾರ್ವಜನಿಕರ ಸಹಕಾರ ನಮ್ಮನ್ನು ಮೂಕವಿಸ್ಮಿತನಾಗಿಸಿದೆ.ಶೇಕ್ ಖಲೀಲ್ ಪಟೇಲ್,ಮುಲ್ಲಾ