Latest Post

ಉಪನ್ಯಾಸಕ ಅಶೋಕ ಕೋರೆಗೆ ಪಿಎಚ್‌.ಡಿ ಡಾಕ್ಟರೇಟ್ : ಎಬಿವಿಪಿ ಯಿಂದ ಸನ್ಮಾನ ಸಾಕು ನಾಯಿಗಳಿಗೆ ತಪ್ಪದೇ ರೇಬೀಸ್ ಲಸಿಕೆ ನೀಡಿ: ಸಚಿವ ಪ್ರಭು ಚವ್ಹಾಣ
Spread the love

ಕಳೆದ ಮೂರು ಚುನಾವಣೆಗಳಿಂದ ಔರದ ತಾಲ್ಲೂಕಿನಲ್ಲಿ ಕಾಂಗ್ರೆಸ್ ಹೀನಾಯ ಸೋಲು ಕಾಣುತ್ತಿದೆ ,ಇದರ ಹಿಂದಿನ ಮುಖ್ಯ ಕಾರಣ ಸ್ಥಳೀಯರಿಗೆ ಟಿಕೆಟ್ ನೀಡದೇ ಇರುವುದು ಎಂದು ತಾಲ್ಲೂಕಿನ ಪ್ರತಿ ಒಬ್ಬ ವ್ಯಕ್ತಿಗೂ ಗೊತ್ತು ..
ಅದರೂ ಸಹ ಪ್ರತಿ ಚುನಾವಣೆಯಲ್ಲಿ ಕಾಂಗ್ರೆಸ್ ಟಿಕೆಟ್ ಹಂಚಿಕೆಯ ವಿಷಯದಲ್ಲಿ ಗೊಂದಲ ಇದ್ದೇ ಇರುತ್ತೆ ,ಕಳೆದ ಚುನಾವಣೆಯಲ್ಲಿ ಕಾಂಗ್ರೆಸ್ ನಿಂದ ಸ್ಫರ್ಧಿಸಿದ ವಿಜಯಕುಮಾರ ಕೌಡಳೆ, ಚುನಾವಣೆ ಮುಗಿದ ನಂತರ ಔರದ ತಾಲ್ಲೂಕಿಗೆ ಭೇಟಿ ನೀಡಿದ್ದು ಬೆರಳೆಣಿಕೆಷ್ಟು ಮಾತ್ರ..


ತಾಲ್ಲೂಕಿನ ಜನರ ಮನಸ್ಸನ್ನು ಹತ್ತಿರದಿಂದ ಅರಿತ ಕೆಪಿಸಿಸಿ ಕಾರ್ಯಾಧ್ಯಕ್ಷ ಈಶ್ವರ ಖಂಡ್ರೆ,ಮತ್ತು ವಿಧಾನ ಪರಿಷತ್ತ ಮಾಜಿ ಸದ್ಯಸ ವಿಜಯಸಿಂಗ್ ಕೂಡ ತಾಲ್ಲೂಕಿನ ಭೇಟಿ ತುಂಬಾ ವಿರಳವಾಗಿದೆ,
ಇಂತಹ ಸಂದರ್ಭದಲ್ಲಿ ರಾಜ್ಯದ ಬೇರೆ ಬೇರೆ ಜಿಲ್ಲೆಗಳಿಂದ ಕೈ ನಾಯಕರು ಬಂದು ಠೀಕಾಣಿ ಹುಡುತ್ತಿದ್ದಾರೆ , ಅದೇ ಕಾರಣಕ್ಕಾಗಿ ಸ್ಥಳೀಯರಿಗೆ ಮತ್ತೆ ಟಿಕೆಟ್ ವಂಚಿಸುತ್ತಾ ಕಾಂಗ್ರೆಸ್ ಹೈಕಮಾಂಡ್ ? ಎಂಬ ಪ್ರಶ್ನೆ ಸ್ಥಳಿಯ ಕೈ ಅಭಿಮಾನಿಗಳಲ್ಲಿ ಮೂಡುತ್ತಿದೆ ,ಬಿಜೆಪಿಯ ಪಕ್ಷದಿಂದ ಮತ್ತೆ ಈ ಬಾರಿಯು ಸಚಿವ ಪ್ರಭು ಚವ್ಹಾಣ ಟಿಕೆಟ್ ಪಡೆಯುತ್ತಾರೆ , ಅದರೆ ಕಳೆದ ಚುನಾವಣೆಯಲ್ಲಿ ಪ್ರಭು ಚವ್ಹಾಣ ಕೇವಲ ಒಬ್ಬ ಶಾಸಕರಾಗಿದ್ದರು ಅದರೆ ಈ ಬಾರಿ ಅವರು ಸಚಿವರಾಗಿದ್ದು ,ಸಚಿವರಾದ ಮೇಲೆ ಪ್ರಭು ಚವಾಣ್ ವರ್ಚಸ್ಸು ಕುಸಿದಿದೆ ಆಡಳಿತದ ವಿರೋಧಿ ಅಲೆ ತಾಲೂಕಿನಾದ್ಯಂತ ಪಸರಿಸಿದೆ ಸಚಿವ ಚವಾಣ್ ಅವರನ್ನ ಸೋಲಿಸುವುದು ಈಗ ಸುಲಭ ವಾಗಬಹುದು ಆದರೆ ಕಾಂಗ್ರೆಸ್ ಹೊರಗಿನ ಅಭ್ಯರ್ಥಿಗೆ ಟಿಕೆಟ್ ನೀಡಿದರೆ ಮತ್ತೆ ಚವಾಣ್ ಗೆ ಲಾಭವಾಗುವ ಎಲ್ಲ ಲಕ್ಷಣಗಳು ಇವೆ. ಒಟ್ಟಿನಲ್ಲಿ ಕಾಂಗ್ರೆಸ್ ಈ ಬಾರಿ ಸ್ಥಳೀಯರಿಗೆ ಟಿಕೇಟ್ ನೀಡಿದರೆ ಮಾತ್ರ ಗೆಲುವಿನ ದಡ ಸೇರಬಹುದು ಎಂಬ ಮಾತು ತಾಲೂಕಿನಲ್ಲಿ ಕೇಳಿಬರುತ್ತಿದೆ.