Latest Post

ಸಾಕು ನಾಯಿಗಳಿಗೆ ತಪ್ಪದೇ ರೇಬೀಸ್ ಲಸಿಕೆ ನೀಡಿ: ಸಚಿವ ಪ್ರಭು ಚವ್ಹಾಣ ಕಂದಾಯ ಇಲಾಖೆ ಡಾಟಾ ಎಂಟ್ರಿ ಆಪರೇಟರ್‌ಗೆ ಸೇವಾ ಭದ್ರತೆ, ಸೂರ್ಯಕಾಂತ್ ನಾಗಮಾರಪಳ್ಳಿ ಮನವಿ
Spread the love

ಔರಾದ ಮತ್ತು ಕಮಲನಗರ ತಾಲೂಕಿನಲ್ಲಿ ವಾಡಿಕೆಗಿಂತ ಹೆಚ್ಚು ಮಳೆ ಆದ ಕಾರಣ ರೈತರು ಸಂಕಷ್ಟಕ್ಕೆ ಸಿಲುಕಿದ್ದು ನೋವಿನ ಸಂಗತಿಯಾಗಿದೆ ರೈತನನ್ನು ದೇಶದ ಬೆನ್ನೆಲುಬು ಎನ್ನುತ್ತಾರೆ ಆದರೆ ಈ ಅತಿವೃಷ್ಟಿಯನ್ನು ನೋಡಿ ರೈತನ ಸಹಾಯಕ್ಕೆ ಸರ್ಕಾರಗಳು ಮುಂದೆ ಬಂದಿಲ್ಲವೆಂದು ರೈತರ ಪರ “ಗೋರ್ ಸೇನಾ” “ಸಂಭಾಜಿ ಬ್ರಿಗೇಡ್” “ಕರ್ನಾಟಕ ರಾಜ್ಯ ರೈತರ ಸಂಘ”ಜೈ ಗುರುಪ” “ಸುಭಾಷ್ ಚಂದ್ರ ಬೋಸ್ ಯುವಕ ಸಂಘ”ಹಾಗೂ “ಕರ್ನಾಟಕ ರಕ್ಷಣಾ ವೇದಿಕೆ”ಅಖಿಲ ಭಾರತೀಯ ಕಿಸಾನ್ ಸಭಾ”ಈ ಸಂಘಟನೆಗಳಿಂದ ತಾಲ್ಲೂಕಿನಲ್ಲಿ ಕಿಸಾನ್ ಆಕ್ರೋಶ್ ಮೋರ್ಚಾ ರೈತರ ಬೃಹತ್ ಪ್ರತಿಭಟನೆ ಮಾಡಲಾಯಿತು. ಔರಾದನ ಎಪಿಎಂಸಿ ಕ್ರಾಸ್ ಮುಖಾಂತರ ಬಸವೇಶ್ವರ ವೃತ್ತ ಹಾದು ತಹಸಿಲ್ ಕಚೇರಿಯವರೆಗೆ ಬೃಹತ್ ಪ್ರತಿಭಟನೆ ರ್ಯಾಲಿ ಮಾಡಿದರು.


ಈ ಬೃಹತ್ ಪ್ರತಿಭಟನೆಯು ಜೈಸಿಂಗ್ ರಾಠೋಡ್ ರವರ ನೇತೃತ್ವದಲ್ಲಿ ಪ್ರಾರಂಭಗೊಂಡ ಈ ಬೃಹತ್ ಮೋರ್ಚಾ ರ್ಯಾಲಿಯು ಶಾಂತ ರೀತಿಯಿಂದ ನಡೆಯಿತು ಇದೇ ಸಂದರ್ಭದಲ್ಲಿ ಮಾತನಾಡಿದ ಜೈಸಿಂಗ್ ರಾಠೋಡ್ ನಾನು ರೈತಪರವಾಗಿ ಕೆಲಸ ಮಾಡುತ್ತೇನೆ ರೈತ ಇಂದು ಬಹಳಷ್ಟು ಸಂಕಷ್ಟಕ್ಕೆ ಒಳಗಾಗಿದ್ದು ಸರ್ಕಾರವು ಅನೇಕ ಜಿಲ್ಲೆಗಳಿಗೆ ಬರಗಾಲ ಘೋಷಣೆ ಮಾಡಿದೆ ಅದರಲ್ಲೂ ವಾಡಿಕೆಗಿಂತ ಬೀದರ್ ಜಿಲ್ಲೆಯಲ್ಲಿ ಹೆಚ್ಚು ಮಳೆಯಾಗಿದೆ ರೈತರ ಬೆಳೆ ಸಂಪೂರ್ಣ ನಾಶ ಹೊಂದಿದೆ ರೈತನು ಬಿತ್ತನೆ ಮಾಡಲು ತೆಗೆದುಕೊಂಡ ಬೀಜಗಳ ದುಡ್ಡು ಕೊಡದೆ ಪರಿಸ್ಥಿತಿಯಲ್ಲಿ ಇಂದು ಒದ್ದಾಡುತ್ತಿದ್ದಾನೆ.ರೈತ ಈ ಸಂಕಷ್ಟವನ್ನು ನೋಡಿ ಸರಕಾರವು ಪ್ರತಿ ಎಕರೆಗೆ “ಐವತ್ತು ಸಾವಿರ”ಪರಿಹಾರ ನೀಡಬೇಕೆಂದು ಐದಾರು ಸಂಘಟನೆಗಳು ಕೂಡಿಕೊಂಡು ಬೃಹತ್ ಪ್ರತಿಭಟನೆಯ ರ್ಯಾಲಿಯು ಕೈಗೊಂಡು ತಹಶೀಲ್ದಾರವರ ಮುಖಾಂತರ ಮಾನ್ಯ ಮುಖ್ಯಮಂತ್ರಿಗಳಿಗೆ ಮನವಿಯನ್ನು ನೀಡಿದರು.
ಇನ್ನೂ ಸತತವಾಗಿ ಒಂದು ತಿಂಗಳಿನಿಂದ ಸುರಿದಿರುವ ಮಳೆಯಿಂದ ಅನೇಕ ಬಡ ಜನರು ಮನೆಗಳನ್ನು ಕಳೆದುಕೊಂಡಿದ್ದಾರೆ ಅವರಿಗೂ ಸಹ ಪರಿಹಾರ ನೀಡಬೇಕೆಂದರು.

Sponsor Advertisement


ಇದೇ ಸಂದರ್ಭದಲ್ಲಿ ಬೀದರ್ ಜಿಲ್ಲೆ ರೈತ ಸಂಘದ ಕಾರ್ಯಅಧ್ಯಕ್ಷ ಶ್ರೀಮಂತ ಬಿರಾದಾರ್ ಮಾತನಾಡಿ ಇಂದು ರೈತ ಅನೇಕ ಸಂಕಷ್ಟಗಳಿಗೆ ಸಿಲುಕಿ ಸಾಲಬಾಧೆ ತಾಳಲಾರದೆ ನೇಣು ಹಾಕಿಕೊಂಡು ಸಾಯುವ ಪರಿಸ್ಥಿತಿ ಉಲ್ಭಣವಾಗಿದೆ ಇದನ್ನು ನೋಡಿ ಸರ್ಕಾರವು ಕಣ್ಮುಚ್ಚಿ ಕುಳಿತುಕೊಂಡಿದೆ ಎಂದು ಆಕ್ರೋಶ ವ್ಯಕ್ತಪಡಿಸುತ್ತಾ ರೈತನ ಮನಶುದ್ಧಿ ಆತ್ಮಶುದ್ಧಿ ಭಾವಶುದ್ಧ ಇಂತಹ ಭಾವನೆಯಿಂದ ದೇಶದ ಜನರಿಗೆ ಅನ್ನವನ್ನು ಉಣಿಸುತ್ತಿರುವ ರೈತನ ಬಗ್ಗೆ ಚಿಂತಿಸಲೇ ಬೇಕಾದ ಮಾತು ಆದ್ದರಿಂದ ಕೂಡಲೇ ಬೀದರ್ ಜಿಲ್ಲೆಯನ್ನು ಬರಗಾಲ ಘೋಷಿತ ಜಿಲ್ಲೆ ಮಾಡಬೇಕೆಂದು ಮನವಿ ಮಾಡಿದರು.
ಈ ಸಂದರ್ಭದಲ್ಲಿ ಜೈಸಿಂಗ ರಾಠೊಡ ಅಭಿಮಾನಿಗಳು, ರೈತ ನಾಯಕರು,ವಿವಿಧ ಸಂಘ ಸಂಸ್ಥೆಗಳ ಪದಾಧಿಕಾರಿಗಳು ಪ್ರತಿಭಟನಾ ರ್ಯಾಲಿಯಲ್ಲಿ ಉಪಸ್ಥಿತರಿದ್ದರು.