Latest Post

ಉಪನ್ಯಾಸಕ ಅಶೋಕ ಕೋರೆಗೆ ಪಿಎಚ್‌.ಡಿ ಡಾಕ್ಟರೇಟ್ : ಎಬಿವಿಪಿ ಯಿಂದ ಸನ್ಮಾನ ಸಾಕು ನಾಯಿಗಳಿಗೆ ತಪ್ಪದೇ ರೇಬೀಸ್ ಲಸಿಕೆ ನೀಡಿ: ಸಚಿವ ಪ್ರಭು ಚವ್ಹಾಣ
Spread the love

ಭಾಲ್ಕಿ ಹಿರೇಮಠದ ಪೂಜ್ಯ ಶ್ರೀ ಗುರುಬಸವ ಪಟ್ಟದೇವರು ದೀನ ದಲಿತರಿಗೆ ಹಾಗೂ ಬಡ ಪ್ರತಿಭಾವಂತ ವಿದ್ಯಾರ್ಥಿಗಳಿಗೆ, ಅಸಹಾಯಕ ಬಡಜನರಿಗೆ ಸದಾ ಸಹಾಯಕರಾಗಿ ಮಾಡುತ್ತಿರುವ ಕಾರ್ಯ ಅದ್ಭುತ ಎಂದು ಪ್ರಾಂಶುಪಾಲ್ ನವಿಲಕುಮಾರ ಉತ್ಕಾರ್ ಹೇಳಿದರು.

ಸಂತಪುರ್ ಸಿದ್ದರಾಮೇಶ್ವರ ಪದವಿಪೂರ್ವ ಕಾಲೇಜು ವತಿಯಿಂದ ಶನಿವಾರ ಔರಾದ ಪಟ್ಟಣದ ರಮಾಬಾಯಿ ಅಂಬೇಡ್ಕರ್ ವೃದ್ಧಾಶ್ರಮದಲ್ಲಿ ಭಾಲ್ಕಿ ಹಿರೇಮಠದ ಪೂಜ್ಯಶ್ರೀ ಗುರು ಬಸವ ಪಟ್ಟದೇವರ 41ನೇ ಜನ್ಮದಿನ ಪ್ರಯುಕ್ತ ಹಣ್ಣು ಹಂಪಲು ವಿತರಿಸಿದರು.

ಪೂಜ್ಯಶ್ರೀಗಳು ಮಾಡುತ್ತಿರುವ ಕಾರ್ಯ ದೇಶ ಹಾಗೂ ಸಮಾಜಕ್ಕೆ ಅಮೂಲ್ಯ ಕೊಡುಗೆಯಾಗಿದೆ ಎಂದು ಹೇಳಿದರು.

ಔರಾದ ರಮಾಬಾಯಿ ಅಂಬೇಡ್ಕರ್ ವೃದ್ರಾಶ್ರಮದ, ವೃದ್ಧರು ಭಾಲ್ಕಿ ಹಿರೇಮಠದ ಪೂಜ್ಯಶ್ರೀ ಗುರುಬಸವ ಪಟ್ಟದೇವರ ಜನ್ಮ ಶುಭ ಕೋರಿ ಶಿರ್ವಾದಿಸಿದರು.

ಉಪನ್ಯಾಸಕರಾದ ಕಲ್ಲಪ್ಪ ಬುಟ್ಟೆ, ಶಿವಪುತ್ರ ಧರಣಿ, ಸುಧಾ ಕೌಟಿಗೆ, ಸ್ವಾತಿ ಸಿರಂಜಿ, ಅಂಬಿಕಾ ವಿಶ್ವಕರ್ಮ, ಈರಮ್ಮ ಕಟಗಿ, ಸ್ಥಳೀಯರಾದ ಸಂಗಪ್ಪ ಮತ್ತು ಇತರರು ಇದ್ದರು.