Latest Post

ಸಾಕು ನಾಯಿಗಳಿಗೆ ತಪ್ಪದೇ ರೇಬೀಸ್ ಲಸಿಕೆ ನೀಡಿ: ಸಚಿವ ಪ್ರಭು ಚವ್ಹಾಣ ಕಂದಾಯ ಇಲಾಖೆ ಡಾಟಾ ಎಂಟ್ರಿ ಆಪರೇಟರ್‌ಗೆ ಸೇವಾ ಭದ್ರತೆ, ಸೂರ್ಯಕಾಂತ್ ನಾಗಮಾರಪಳ್ಳಿ ಮನವಿ
Spread the love

ಪ್ರವಚನದಿಂದ ಶಾಂತಿ,ನೆಮ್ಮದಿ– ಡಾ. ಬಸವಲಿಂಗ ಪಟ್ಟದೇವರು

ಶ್ರಾವಣ ಮಾಸದಲ್ಲಿ ಪ್ರವಚನದಿಂದ ಸುಖ,ಶಾಂತಿ, ನೆಮ್ಮದಿ ಯಾಗಿರಬಹುದು ಎಂದು ಡಾ. ಬಸವಲಿಂಗಪಟ್ಟದೇವರು ಹೇಳಿದರು.

ಸಂತಪುರ ಅನುಭವ ಮಂಟಪನಲ್ಲಿ ಶರಣರ ವಚನಗಳಲ್ಲಿ ಜೀವನ ದರ್ಶನ ಪ್ರವಚನ ಮಂಗಲ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಲಿಂಗ ದೀಕ್ಷೆ ಪಡೆಯುವುದರಿಂದ ಶರೀರ ಹಾಗೂ ಮನಸ್ಸು ದೃಢವಾಗುತ್ತದೆ ಜೊತೆಗೆ ದಾಂಪತ್ಯ ಜೀವನ ಸುಗಮವಾಗಿ ಸಾಗುತ್ತದೆ. ನಿತ್ಯ ಸಪ್ತಶರಣರ ಸಂಘದಿಂದ ಧನಾತ್ಮಕ ವಾತಾವರಣ ಸೃಷ್ಟಿಯಾಗಿ ನೆಮ್ಮದಿಯಾಗಿ ಇರಬಹುದು ಎಂದು ಹೇಳಿದರು.

ಮುಖ್ಯ ಅತಿಥಿ ವಿಜಯಕುಮಾರ ಜಿ.ಎಂ. ಜಂಟಿ ನಿರ್ದೇಶಕರು, ಸಾರ್ವಜನಿಕ ಶಿಕ್ಷಣ ಇಲಾಖೆ, ಆಯುಕ್ತರ ಕಚೇರಿ, ಕಲ್ಬುರ್ಗಿ ಮಾತನಾಡಿ ಪೂಜ್ಯಶ್ರೀ ಡಾ. ಬಸವಲಿಂಗ ಪಟ್ಟದೇವರು ಶಿಕ್ಷಣದ ಜೊತೆಗೆ ಅಧ್ಯಾತ್ಮಿಕ ಕಾರ್ಯದಲ್ಲಿ ಅಪಾರ ಕೊಡಿಗೆಯಾಗಿದೆ. ಮೋಡನಂಬಿಕೆ, ಡಂಬಾಚಾರಕ್ಕಿಂತಲೂ ವೈಚಾರಿಕತೆಯಾಗಿ ಆರಾಧನೆ ಮಾಡಿ ಭಕ್ತಿ ಪಡೆಯಬಹುದು. ಪೂಜ್ಯಶ್ರೀಗಳು ಶಿಕ್ಷಣ ನೀಡಿ ಸಮಾಜ ಉದ್ಧಾರ ಮಾಡುತ್ತಿರುವುದು ಅತ್ಯಂತ ಉಪಯುಕ್ತ ಕಾರ್ಯವಾಗಿದೆ ಎಂದು ಹೇಳಿದರು.

ಪ್ರವಚನಕಾರರಾದ ಸಂಜುಕುಮಾರ್ ಜುಮ್ಮಾ ಮಾತನಾಡಿ ನಾನು ಹುಟ್ಟಿದ ಊರಿನಲ್ಲಿ ಪ್ರಥಮ ಬಾರಿಗೆ ಪ್ರವಚನ ಮಾಡಿದ್ದು, ತಾವೆಲ್ಲ ಸಹಕಾರ ಮಾಡಿದ್ದಕ್ಕೆ ನನ್ನ ಪ್ರವಚನ ಸಾರ್ಥಕ ಮಾಡಿದಿರಿ ತಮ್ಮೆಲ್ಲರಿಗೂ ಧನ್ಯವಾದಗಳು ಎಂದು ಹೇಳಿದರು.

ಓಂಕಾರ ರೋಗನ್,ಉಪ ನಿರ್ದೇಶಕರು ಸಾರ್ವಜನಿಕ ಶಿಕ್ಷಣ ಇಲಾಖೆ ಬೀದರ್. ಔರಾದ ಕ್ಷೇತ್ರ ಶಿಕ್ಷಣಾಧಿಕಾರಿ ಎಚ್.ಎಸ್. ನಗನೂರ್, ಸಂಪನ್ಮೂಲ ವ್ಯಕ್ತಿಗಳು ಸಂತೋಷ್, ಬಲಭೀಮ ಕುಲಕರ್ಣಿ, ಬಸವರಾಜ್ ಬಿರಾದರ್, ಮನ್ಮತ್ತಪ್ಪ ಹುಗ್ಗೆ, ಶಿವಕಾಂತ್ ಸ್ವಾಮಿ, ಮನೋಹರ್ ನಿಟ್ಟೂರೆ, ನಾಗಶೆಟ್ಟಿ ಬಿಜಲವಾಡೆ, ಮಾರುತಿ ಗಾದಿಗೆ, ಸೋಮನಾಥ ದೇಶಮುಖ, ಹಾವಗಿ ಶರಣರು, ಬಸವರಾಜ್ ಪಾಟೀಲ್, ಶರಣಪ್ಪ ಚಿಟಿಮೆ,ಶಿವಕುಮಾರ್ ಹಿರೇಮಠ, ಗಣಪತಿ ದೇಶಪಾಂಡೆ,ಪ್ರಾಂಶುಪಾಲ್ ನವೀಲಕುಮಾರ ಉತ್ಕಾರ್ ಸೇರಿದಂತೆ ಗ್ರಾಮದ ಅನೇಕ ಮುಖಂಡರು ಉಪಸ್ಥಿತರಿದ್ದರು.

ಗ್ರಾಮದ ಹಾಗೂ ಸುತ್ತಮುತ್ತಲಿನ ಅನೇಕ ಭಕ್ತರು ಪೂಜ್ಯ ಶ್ರೀಗಳಿಂದ ಲಿಂಗ ದಿಕ್ಷೇಯನ್ನು ಪಡೆದರು.

ಇದೇ ಸಂದರ್ಭದಲ್ಲಿ ಪೂಜ್ಯಶ್ರೀ ಡಾ. ಬಸವಲಿಂಗ ಪಟ್ಟದೇವರ ಜನ್ಮದಿನ ಅಂಗವಾಗಿ ರಕ್ತದ ನೀಡಿದ ರಕ್ತದಾನಿಗಳಿಗೆ ಸನ್ಮಾನಿಸಲಾಯಿತು.