Latest Post

ಉಪನ್ಯಾಸಕ ಅಶೋಕ ಕೋರೆಗೆ ಪಿಎಚ್‌.ಡಿ ಡಾಕ್ಟರೇಟ್ : ಎಬಿವಿಪಿ ಯಿಂದ ಸನ್ಮಾನ ಸಾಕು ನಾಯಿಗಳಿಗೆ ತಪ್ಪದೇ ರೇಬೀಸ್ ಲಸಿಕೆ ನೀಡಿ: ಸಚಿವ ಪ್ರಭು ಚವ್ಹಾಣ
Spread the love

ಗೌರಿ ಗಣೇಶ ಹಬ್ಬದ ನಿಮಿತ್ಯ
ಗಣೇಶ್ ಮೂರ್ತಿ ಖರೀದಿಯಲ್ಲಿ ಬಿಜಿಯಾದ ಭಕ್ತರು
ಔರಾದ :- ಪಟ್ಟಣದ ಮಾರುಕಟ್ಟೆಯಲ್ಲಿ ವಿವಿಧಡೆ ಜನರು ಗೌರಿ ಗಣೇಶ ಹಬ್ಬದ ನಿಮಿತ್ಯ ಭರ್ಜರಿ ಬಣ್ಣ ಬಣ್ಣದ ಮೂರ್ತಿಗಳನ್ನು ಖರೀದಿಸುವಲ್ಲಿ ತೊಡಗಿಕೊಂಡಿದ್ದಾರೆ.
ಕೊವಿಡ್-19 ಕಾರಣದಿಂದ ಎರಡು ವರ್ಷ ಯಾವುದೇ ಹಬ್ಬಗಳನ್ನು ಆಚರಿಸಿಲ್ಲ ವ್ಯಾಪಾರ ಸ್ಥಗಿತಗೊಂಡಿತು ಈ ವರ್ಷ ನಮ್ಮ ವ್ಯಾಪಾರ ಭರ್ಜರಿ ನಡೆಯುತ್ತಿದೆ ಗಣಪನ ಮೂರ್ತಿಗಳ ಬೇಡಿಕೆ ಹೆಚ್ಚಾಗಿದೆ ಎನ್ನುತ್ತಾರೆ ಸ್ಥಳೀಯ ವ್ಯಾಪಾರಿ ಧನರಾಜ ಪಾಂಚಾಳ.
ನಮ್ಮ ದೇಶದಲ್ಲಿ ವೈಭವದಿಂದ ಆಚರಿಸಲ್ಪಡುವ ಒಂದು ಹಬ್ಬ ಪ್ರತಿ ವರ್ಷ ಭಾದ್ರಪದ ಮಾಸದ ಶುಕ್ಲ ಪಕ್ಷದ ಚೌತಿಯ (ಚತುರ್ಥಿಯ) ದಿನ ಈ ಹಬ್ಬವನ್ನು ಆಚರಿಸಲಾಗುತ್ತದೆ ಈ ಹಬ್ಬದಲ್ಲಿ ಗಣಪತಿಯನ್ನು ಪೂಜಿಸಲಾಗುತ್ತದೆ ಬೆಳ್ಳಿ ಅಥವಾ ಮಣ್ಣಿನಿಂದ ಮಾಡಿದ ಗಣಪತಿಯ ಮೂರ್ತಿಯನ್ನು ವಿಧ್ಯುಕ್ತವಾಗಿ ಪೂಜಿಸಿ ವೃತ ವೆಂದು ಆಚರಿಸಲಾಗುತ್ತದೆ. ಹಬ್ಬದ ದಿನ ಮೋದಕ ಹೂಗ್ಗಿ ಕಡುಬು ಎಂಬ ಸಿಹಿ ತಿಂಡಿಯನ್ನು ಮಾಡಿ ಗಣೇಶನಿಗೆ ನೈವೇದ್ಯ ಮಾಡುತ್ತಾರೆ ಈ ಗಣೇಶ ಹಬ್ಬವನ್ನು ಪ್ರತಿಯೊಂದು ಮನೆಯಲ್ಲಿ ಓಣಿಯಲ್ಲಿ ಮಾರುಕಟ್ಟೆಯಲ್ಲಿ ಪೆಂಡಾಲಿನಲ್ಲಿ ಅಲಂಕಾರಮಾಡಿ ವಿಜೃಂಭಣೆಯಿಂದ ಸ್ನೇಹಿತರ ತಂಡಗಳು ವಾರಗಟ್ಟಲೆ ಸಂಭ್ರಮದಿಂದ ಆಚರಿಸುತ್ತಾರೆ.