Latest Post

ಈ ದೇಶದ ಸಂಪತ್ತು ಶಿಕ್ಷಕರು :ಡಾ ಮನ್ನಥ ಡೊಳೆ ವಸತಿ ನಿಲಯಗಳಿಗೆ 25% ಪ್ರತಿಶತ ಪ್ರವೇಶವನ್ನು ಹೆಚ್ಚಿಸುವಂತೆ ಎಬಿವಿಪಿ ಔರಾದ ಶಾಖೆ ಮನವಿ
Spread the love

NSYF ಸಂಘಟನೆ ವತಿಯಿಂದ ಸಂವಿಧಾನದ ಪೀಠಿಕೆಯ ಫ್ರೇಮ್ ಉಚಿತವಾಗಿ ವಿತರಿಸಲಾಯಿತು

ಇಂದು NSYF ಸಂಘಟನೆ ವತಿಯಿಂದ ಸ್ವಾತಂತ್ರ್ಯ ದಿನ ಮತ್ತು ಕ್ರಾಂತಿ ವೀರ ಸಂಗೊಳ್ಳಿ ರಾಯಣ್ಣ ನವರ ಜನ್ಮದಿನದ ನಿಮಿತ್ತ ಸಂವಿಧಾನದ ಪ್ರಸ್ತಾವನೆಯ ಪೀಠಿಕೆಯ ಫ್ರೇಮ್ ಗಳನ್ನು ಔರಾದನ ಎಲ್ಲಾ ಕಛೇರಿಗಳಿಗೆ ಶಾಲಾ ಕಾಲೇಜುಗಳಿಗೆ, ಸಂಘ ಸಂಸ್ಥೆಗಳಿಗೆ ಮತ್ತು ಸಾಮಾಜಿಕ ರಾಜಕೀಯ ಮುಖಂಡರಿಗೆ ಉಚಿತವಾಗಿ ವಿತರಣೆ ಮಾಡಲಾಯಿತು.
ಸ್ವಾತಂತ್ರ್ಯ ಕಾಪಾಡಿಕೊಳ್ಳ ಬೇಕಾದರೆ, ಸ್ವಾತಂತ್ರ್ಯ, ಸಮಾನತೆ, ಪ್ರಜಾಪ್ರಭುತ್ವ, ಬಂಧುತ್ವ ಉಳಿಸಬೇಕು ಅದಕ್ಕಾಗಿ ಸಂವಿಧಾನ ಪ್ರತಿಯೊಬ್ಬರಿಗೆ ತಿಳಿಯಬೇಕು.
ಹೀಗಾಗಿ ಸಂವಿಧಾನ ಪ್ರಚಾರ ಪ್ರಸಾರ ಮಾಡುವುದರ ಮೂಲಕ ಸ್ವಾತಂತ್ರ್ಯ ದಿನ ನಮ್ಮ ಸಂಘಟನೆಯಿಂದ ಆಚರಣೆ ಮಾಡಲಾಯಿತು.
ಈ ಸಂದರ್ಭದಲ್ಲಿ ರಾಷ್ಟ್ರೀಯ ಪರಿಶಿಷ್ಟ ಜಾತಿ ಪರಿಶಿಷ್ಟ ಪಂಗಡದ ವಿಧ್ಯಾರ್ಥಿ ಯುವ ವೇದಿಕೆಯ ರಾಜ್ಯ ಸಂಚಾಲಕರಾದ ಶಿವು ಕಾಂಬಳೆ, ಮುಖಂಡರಾದ ಪ್ರವೀಣ ಕಾರಂಜೆ, ದಿನೇಶ ಶಿಂದೆ, ಆನಂದ ಕಾಂಬಳೆ, ರವಿ ಎಸ್ ಯರನಾಳೆ, ಮುಂತಾದವರು ಉಪಸ್ಥಿತರಿದ್ದರು.