Latest Post

ಸಾಕು ನಾಯಿಗಳಿಗೆ ತಪ್ಪದೇ ರೇಬೀಸ್ ಲಸಿಕೆ ನೀಡಿ: ಸಚಿವ ಪ್ರಭು ಚವ್ಹಾಣ ಕಂದಾಯ ಇಲಾಖೆ ಡಾಟಾ ಎಂಟ್ರಿ ಆಪರೇಟರ್‌ಗೆ ಸೇವಾ ಭದ್ರತೆ, ಸೂರ್ಯಕಾಂತ್ ನಾಗಮಾರಪಳ್ಳಿ ಮನವಿ
Spread the love

ನಾಲ್ಕು ತಿಂಗಳ ಮೊದಲೆ ಹರ ಘರ ತಿರಂಗಾ ಅಭಿಯಾನ ಕರೆ ಕೊಟ್ಟಿದ್ದ ಅವಳಿ ಸಹೋದರರು.

ಔರಾದ್: ಸ್ವಾತಂತ್ರ ಅಮೃತ ಮಹೊತ್ಸವದ ಅಂಗವಾಗಿ ಕೇಂದ್ರ ಸರಕಾರ ಹಮ್ಮಿಕೊಂಡಿರುವ ಹರ ಘರ ತಿರಂಗಾ ಅಭಿಯಾನ ಪ್ರಾರಂಭಿಸುವ ಪೂರ್ವದಲ್ಲೆ ಎಪ್ರಿಲ್ ತಿಂಗಳಿನಲ್ಲಿ, ಔರಾದ ಪಟ್ಟಣದಿಂದ ಕೊಳ್ಳೂರ ಗ್ರಾಮದ ಅವಳಿ ಸಹೋದರಾದ ಅರುಣ ರ‍್ಯಾಕಲೆ ಮತ್ತು ಕರುಣ ರ‍್ಯಾಕಲೆ ರವರು, ಸ್ವಾತಂತ್ರ್ಯದ ಅಮೃತ ಮಹೊತ್ಸವದ ಅಂಗವಾಗಿ, ಸ್ವಾತಂತ್ರ್ಯ ಹೊರಾಟಗಾರರಿಗೆ ಸೈಕಲ ಯಾತ್ರೆಯ ಮೂಲಕ ನಮನ ಸಲ್ಲಿಸಲು ೨೫ ದಿನದ ಔರಾದ ಪಟ್ಟಣ ದಿಂದ ಮಲೆ ಮಹಾದೇಶ್ವರ ಬೆಟ್ಟದವರೆಗೆ ಸುಮಾರು ೧೨೫೦ ಕಿ.ಮೀ ಯಾತ್ರೆಯ ಸಂದರ್ಭದಲ್ಲಿ ನೂರರು ಸಭೆಗಳನ್ನು ರಾಜ್ಯದ ಉದ್ದಲಗಕ್ಕೂ ಜರುಗಿಸಿ ಸ್ವಾತಂತ್ರ್ಯದ ದಿವಸದಂದು ಮನೆಯ ಮೇಲೆ ಧ್ವಜಾರೊಹಣ ಮಾಡಬೇಕೆಂದು ಮನವಿ ಮಾಡಿಕೊಂಡಿದ್ದರು.

೧೦ ಸಾವಿರಕಿಂತ ಅಧಿಕ ಕರಪತ್ರಗಳನ್ನು ಹಂಚುವುದರ ಮುಖಾಂತರ ಕೇಂದ್ರ ಸರಕರ ಪ್ರಾರಂಭಿಸುವ ಪೂರ್ವದಲ್ಲಿ ೧೦ನೇ ತರಗತಿಯಲ್ಲಿ ಓದುತ್ತಿರುವ ಅರುಣ ರ‍್ಯಾಕಲೆ ಮತ್ತು ಕರುಣ ರ‍್ಯಾಕಲೆ ಔರಾದ ಪಟ್ಟಣದಿಂದಲೆ ಹರಘರ ತಿರಂಗಾದ ಕಲ್ಪನೆ ಮಾಡಿಸಿ ಜನ ಜಾಗೃತಿ ಕೈಗೊಂಡಿದ್ದಾರೆ.

ಅವಳಿ ಸಹೋದರರು ಕೈಗೊಂಡ ಸೈಕಲ ಯಾತ್ರೆಯಲ್ಲಿ, ಮುಗುಳಖೊಡ-ಜಿಡಗಾ ಮಠದ ಪಿಠಾಧ್ಯಕ್ಷರು, ಸಿದ್ದಗಂಗಾ ಮಠದ ಪಿಠಾಧ್ಯಕ್ಷರನ್ನು ಭೇಟಿ ಮಾಡಿ ಆರ್ಶಿವಾದ ಪಡೆದು ಅಗಸ್ಟ -೧೫ ರಂದು ಮನೆಯಲ್ಲಿ ಧ್ವಜಾರೊಹಣ ಮಾಡುವಂತೆ ವಿನಂತಿಸಿದರು.

ಸಭಾ ಅಧ್ಯಕ್ಷರಾದ ವಿಶ್ವೇಶ್ವರ ಹೆಗಡೆ ಮತ್ತು ಸಂಸ್ಕೃತಿ ಇಲಾಖೆಯವರನ್ನು ಭೇಟಿ ಮಾಡಿ ತಾಲ್ಲೂಕಿಗೊಂದು ಕಾರ್ಯಕ್ರಮ ಮತ್ತು ಪ್ರತಿ ಮನೆಯ ಮೇಲೆ ತ್ರಿವರ್ಣ ಧ್ವಜವನ್ನು ಆಗಸ್ಟ-೧೫ ರಂದು ಹಾರಿಸುವಂತೆ ಮನವಿ ಮಾಡಿದರು.

ಸೈಕಲ ಯಾತ್ರೆಯನ್ನು ಏಪ್ರಿಲ್ ೩ ರಂದು ಪಶು ಸಂಗೊಪನೆ ಸಚಿವರಾದ ಪ್ರಭು ಚವ್ಹಾಣರವರು ಚಾಲನೆ ನೀಡಿದರು ದಿನಾಂಕ ೨೭/೦೪/೨೦೨೨ ರಂದು ಮಹಾದೆಶ್ವರ ಬೆಟ್ಟದಲ್ಲಿ ಮಹಾದೆಶ್ವರ ಅಭಿವೃಧಿ ಪ್ರಾಧಿಕಾರದವರ ಆಡಳಿತ ಮಂಡಳಿ ಹಾಗೂ ಗುರು ಮಲ್ಲೆಶ್ವರ ಮಠದ ಪಿಠಾಧಿಪತಿರವರು ಸಮುಖದಲ್ಲಿ ಮುಕ್ತಾಯಗೊಂಡಿತ್ತು.