Latest Post

ಸಾಕು ನಾಯಿಗಳಿಗೆ ತಪ್ಪದೇ ರೇಬೀಸ್ ಲಸಿಕೆ ನೀಡಿ: ಸಚಿವ ಪ್ರಭು ಚವ್ಹಾಣ ಕಂದಾಯ ಇಲಾಖೆ ಡಾಟಾ ಎಂಟ್ರಿ ಆಪರೇಟರ್‌ಗೆ ಸೇವಾ ಭದ್ರತೆ, ಸೂರ್ಯಕಾಂತ್ ನಾಗಮಾರಪಳ್ಳಿ ಮನವಿ
Spread the love

ರಾಷ್ಪ್ರ ಧ್ವಜಕ್ಕೆ ಅವಮಾನ ಮಾಡಿರುವ ಅಂಗನವಾಡಿ ಕೇಂದ್ರದ ಅಧಿಕಾರಿಗಳು.

ಬೇಲ್ದಾಳ: ಗ್ರಾಮದಲ್ಲಿ ದಿನಾಂಕ 15/8/22 ಸ್ವಾತಂತ್ರ್ಯೋತ್ಸವದ ಅಂಗವಾಗಿ ರಾಷ್ಟ ಧ್ವಜವನ್ನು ಅನಾವರಣ ಮಾಡದಿರುವುದು ತುಂಬಾ ನೋವು ತಂದಿದೆ.ಇದರ ಮುಂಚೆಯೇ ಕೂಡಾ ಗಣರಾಜ್ಯೋತ್ಸವ ಸಮಾರಂಭದಂದು ರಾಷ್ಟ್ರ ಧ್ವಜ ಅನಾವರಣ ಮಾಡಲಿಲ್ಲ. ಸಂಬಂಧ ಪಟ್ಟ ಅಧಿಕಾರಿಗಳು ಈ ವಿಷಯವನ್ನು ಗಮನದಲ್ಲಿಟ್ಟುಕೊಂಡು ಇದಕ್ಕೆ ಸಂಬಂಧಿಸಿದ ಅಧಿಕಾರಿಗಳಿಗೆ ತಕ್ಕ ಶಿಕ್ಷೆಯನ್ನು ನೀಡಬೇಕು. ಇದಲದೆ ಈ ಅಂಗನವಾಡಿ ಕೇಂದ್ರವು ಸರಿ ಸುಮಾರು 30-35 ವರ್ಷಗಳ ಹಾಳಾದ ಕೋಣೆಯಿಂದ ಮಳೆಗಾಲದ ಸಮಯದಲ್ಲಿ ಮೇಲ್ಚಾವಣಿಯಿಂದ ನೀರು ಸುರಿದು ಮೇಲ್ಚಾವಣಿ ಬೀಳುವ ಸ್ಥಿತಿಗೆ ತಲುಪಿದೆ.ಇದಕ್ಕೆ ತಕ್ಷಣ ಪರಿಹಾರವನ್ನು ಒದಗಿಸಿ ಹೊಸದಾದ ಕೋಣೆ ನಿರ್ಮಿಸಬೇಕು.ಅದೆ ರೀತಿಯಾಗಿ ಈ ಅಂಗನವಾಡಿ ಕೇಂದ್ರದಲ್ಲಿ ಯಾವುದೇ ರೀತಿಯ ಉಪಕರಣಗಳಾದ ಅಡುಗೆ ಸಾಮಾನುಗಳು ಊಟದ ತಟ್ಟೆಗಳು, ಸಿಲಿಂಡರ್,ಒಲೆ, ಮಕ್ಕಳಿಗೆ ಆಟದ ಆಟಿಕೆಗಳೀಲ್ಲಾ. ಈ ಅಂಗನವಾಡಿ ಕೇಂದ್ರದಲ್ಲಿ ಶಿಕ್ಷಕಿ ಇದು ಇಲ್ಲದಂತಾಗಿದೆ. ಈ ಎಲ್ಲಾ ಸಮಸ್ಯೆಗಳನ್ನು ಗಮನದಲ್ಲಿಟ್ಟು ಕೊಂಡು ಆದಷ್ಟು ಬೇಗ ಬಗೆ ಹರೀಸಬೇಕು.ಒಂದು ವೇಳೆ ಈ ಸಮಸ್ಯೆಯನ್ನು ಬಗೆಹರಿಸದೆ ಇದಲ್ಲಿ ಬೀದಿಗಿಳಿದು ಹೋರಾಟ ಮಾಡಲಾಗುವುದು ಎಂದು ತಾಲೂಕಾ ಶೀಶು ಅಭಿವೃದ್ಧಿ ಯೋಜನಾ ಅಧಿಕಾರಗಳದ ಭೀಮಶೀಂಗ ಚಾವ್ಹಣ ಅವರಿಗೆ ಕರ್ನಾಟಕ ರಕ್ಷಣಾ ವೇದಿಕೆ ತಾಲೂಕ ಉಪಾಧ್ಯಕ್ಷ ಅಂಬಾದಾಸ ಉಪ್ಪಾರ ಅವರು ಎಚ್ಚರಿಸಿದರು.ಈ ಸಂದರ್ಭದಲೀ ಕರವೇ ಚಿಂತಾಕಿ ಘಟಕದ ಅಧ್ಯಕ್ಷ ನವೀನ್ ರೆಡ್ಡಿ, ಉಪಾಧ್ಯಕ್ಷ ನವೀನ್ ಉಪ್ಪಾರ, ಗೌರವ ಅಧ್ಯಕ್ಷ ರಾಜು ಕೋಳಿ, ಯುವ ಹೋರಾಟಗಾರ ಸಂಗಮೇಶ ಮಾಟುರೆ,ಸುನೀಲ್,ವಿಜಾನಂದ, ರಾಹುಲ್,ಯೋಗೇಶ್,ಮತ್ತು ಚಿಂತಾಕಿ ಪಿ ಎಸ ಐ ಸಿದ್ಧಲಿಂಗ ಅನೇಕ ಗ್ರಾಮದ ಜನರು ಉಪಸ್ಥಿತರಿದ್ದರು.