Latest Post

ಈ ದೇಶದ ಸಂಪತ್ತು ಶಿಕ್ಷಕರು :ಡಾ ಮನ್ನಥ ಡೊಳೆ ವಸತಿ ನಿಲಯಗಳಿಗೆ 25% ಪ್ರತಿಶತ ಪ್ರವೇಶವನ್ನು ಹೆಚ್ಚಿಸುವಂತೆ ಎಬಿವಿಪಿ ಔರಾದ ಶಾಖೆ ಮನವಿ
Spread the love

ಸಂತಪೂರನಲ್ಲಿ ತಿರಂಗಾ ರ್ಯಾಲಿ

ಅಜಾದಿ ಕಾ ಅಮೃತ ಮಹೋತ್ಸವ ಅಂಗವಾಗಿ ಸಂತಪುರ ಗ್ರಾಮ ಪಂಚಾಯತ್ ವತಿಯಿಂದ 500 ಮೀಟರ್ ತಿರಂಗಾ ಯಾತ್ರೆಗೆ ಜಗಜ್ಯೋತಿ ಬಸವೇಶ್ವರ ವೃತ್ತದಲ್ಲಿ ಪಂಚಾಯತ್ ಅಭಿವೃದ್ಧಿ ಅಧಿಕಾರಿ ಸಂತೋಷ ಪಾಟೀಲ್ ಹಾಗು ಸಂತಪುರನ ಆರಕ್ಷಕ ಠಾಣೆಯ ಪಿ ಎಸ್ ಐ ಸಿದ್ದು ಗಿರಿಗೌಡರ್ ಚಾಲನೆ ನೀಡಿದರು. ಗ್ರಾಮದ ಪ್ರತಿ ಓಣಿಯಲ್ಲಿ ಶಾಲಾ ಮಕ್ಕಳ ಸ್ವಾತಂತ್ರ ದಿನದ ಅಮೃತ ಮಹೋತ್ಸವದ ಹರ್ಷವನ್ನು ಕೋಲಾಟ, ಲೇಜಿಮ್, ದೇಶ ಭಕ್ತಿ ಗೀತೆ ನೃತ್ಯ ದೊಂದಿಗೆ ವಾಕಥಾನ್ ಮಾಡಲಾಯಿತು,ಸಂತಪುರ ಗ್ರಾಮದ ಮೊರಾರ್ಜಿ ದೇಸಾಯಿ ವಸತಿ ಶಾಲೆ, ಸುಭಾಸ್ ಚಂದ್ರ ಭೋಸ್ ಪ್ರೌಢ ಶಾಲೆ,
ವಿದ್ಯಾಸಿರಿ ನವೋದಯ ತರಬೇತಿ ಕೇಂದ್ರ, ಅನುಭವ ಮಂಟಪ ಪ್ರೌಢ ಶಾಲೆ, ಜ್ಞಾನ ಭಾರತಿ ಪ್ರೌಢ ಶಾಲೆ,ಸರ್ಕಾರಿ ಪ್ರೌಢ ಶಾಲೆ,ಮಾಜಿ ಸೈನಿಕ ಹಿ.ಪ್ರೌ.ಶಾಲೆ, ಐಡಿಯಲ್ ಕಿ. ಪ್ರಾ. ಶಾಲೆ,ದೀಪಾಲಯ ಸಿಬಿಎಸ್ ಸಿ ಶಾಲೆ, ಆನಂದ್ ಪ್ರೌಢ ಶಾಲೆಯ ಎಲ್ಲಾ ಶಾಲೆಯ ಮುಖ್ಯೋಪಾಧ್ಯಾಯರು,ಶಿಕ್ಷಕರು ಹಾಗೂ ಮಕ್ಕಳು ವಾಕಥಾನ್ ನಲ್ಲಿ ಭಾಗವಹಿಸಿದರು. ಗ್ರಾಮ ಪಂಚಾಯತ್ ಸದಸ್ಯರು ಹಾಗೂ ಭಗತ್ ಸಿಂಗ್ ಯುವ ಬ್ರಿಗೇಡ್
ಕಾರ್ಯಕರ್ತರಾದ ಮಂಜು ಸ್ವಾಮಿ, ಸಂತೋಷ ಮಡಿವಾಳ, ನಿಖಿಲ್ ದೇಸಾಯಿ, ಸಂತೋಷ ಕೋಳಿ, ಗಫರ್, ಕಲ್ಲಪ್ಪ ವಗ್ಗೆ, ರೋಹಿತ್ ದೇಸಾಯಿ, ಅಜಯ್ ಗೊರನಾಳೆ, ಕೃಷ್ಣ, ಭರತ,ಗುಂಡು, ಸೌರಭ್, ಶಿವು, ರಾಹುಲ್ ವಿನೋದ್, ಅರುಣ್ ಚಾವರೇ, ಬಸವಕಿರಣ ಗೊರನಾಳೆ, ಕೃಷ್ಣ ಮಚಲಂಬೆ, ಅಂಬದಾಸ್, ಅಶೋಕ್ ಹಟಕರ್ ಮತ್ತು ಗ್ರಾಮಸ್ಥರು ಭಾಗವಹಿಸಿದರು.