Latest Post

ಉಪನ್ಯಾಸಕ ಅಶೋಕ ಕೋರೆಗೆ ಪಿಎಚ್‌.ಡಿ ಡಾಕ್ಟರೇಟ್ : ಎಬಿವಿಪಿ ಯಿಂದ ಸನ್ಮಾನ ಸಾಕು ನಾಯಿಗಳಿಗೆ ತಪ್ಪದೇ ರೇಬೀಸ್ ಲಸಿಕೆ ನೀಡಿ: ಸಚಿವ ಪ್ರಭು ಚವ್ಹಾಣ
Spread the love

ಘರ್ ಘರ್ ತಿರಂಗ ಅಭಿಯಾನಕ್ಕೆ ಚಾಲನೆ ನೀಡಿದ ಪಟ್ಟಣ ಪಂಚಾಯತ ಸದಸ್ಯ:ಸಂಜು ವಡಿಯರ್
ಔರಾದ:- ಪಟ್ಟಣದ ವಾರ್ಡ್ ನಂಬರ್ 14ರ ಶಿಕ್ಷಕರ ಕಾಲೋನಿಯಲ್ಲಿ 75 ನೇ ಅಮೃತ ಮಹೋತ್ಸವದ ನಿಮಿತ್ಯ ಘರ ಘರ ತಿರಂಗಾ ಅಭಿಯಾನವನ್ನು ಔರಾದ್ ಪಟ್ಟಣ ಪಂಚಾಯಿತಿ ಸದಸ್ಯ ಸಂಜು ಕುಮಾರ್ ಒಡೆಯರ್ ಅವರು ತಮ್ಮ ವಾರ್ಡಿನಲ್ಲಿ ಪ್ರತಿ ಮನೆಮನೆಗೆ ಹೋಗಿ ರಾಷ್ಟ್ರಧ್ವಜವನ್ನು ಹಾರಿಸುವ ಮೂಲಕ ಕೇಂದ್ರ ಸರ್ಕಾರದ ಈ ಅಭಿಯಾನವನ್ನು ಯಶಸ್ವಿಗೊಳಿಸಿದರು. ಈ ಸಂದರ್ಭದಲ್ಲಿ ಸಂಜು ಕುಮಾರ್ ಒಡೆಯರ್ ಅವರು ಮಾತನಾಡಿ ಸರ್ಕಾರದ ಆದೇಶ ನಾವು ನೀವು ಸೇರಿ ಪಾಲಿಸೋಣ ದಿನಾಂಕ ೧೩ ಆಗಸ್ಟ್ ರಿಂದ 15 ಅಗಸ್ಟ್ ರವರಿಗೆ ಪ್ರತಿಯೊಬ್ಬರು ತಮ್ಮ ತಮ್ಮ ಮನೆಗಳ ಮೇಲೆ ರಾಷ್ಟ್ರಧ್ವಜವನ್ನು ಹಾರಿಸಿ ರಾಷ್ಟ್ರಧ್ವಜಕ್ಕೆ ಗೌರವಿಸಬೇಕು ಎಂದರು ಈ ಸಂದರ್ಭದಲ್ಲಿ ವಾರ್ಡ ಭೂತ ಅದ್ಯಕ್ಷ ಸಂತೋಷ ಪಟ್ನೆ,ವಿರೇಶ ಬಾರೊಳೆ,ಪ್ರಶಾಂತ ವಾಗಡೊಳೆ,ರವಿ ಸ್ವಾಮಿ, ಅಂಬಾದಾಸ ನಳಗೆ ಉಪಸ್ಥಿತರಿದ್ದರು.