Latest Post

ಸಾಕು ನಾಯಿಗಳಿಗೆ ತಪ್ಪದೇ ರೇಬೀಸ್ ಲಸಿಕೆ ನೀಡಿ: ಸಚಿವ ಪ್ರಭು ಚವ್ಹಾಣ ಕಂದಾಯ ಇಲಾಖೆ ಡಾಟಾ ಎಂಟ್ರಿ ಆಪರೇಟರ್‌ಗೆ ಸೇವಾ ಭದ್ರತೆ, ಸೂರ್ಯಕಾಂತ್ ನಾಗಮಾರಪಳ್ಳಿ ಮನವಿ
Spread the love

ಸದ್ಯದ ಬೆಳವಣಿಗೆಗಳು ನೋಡಿದರೆ ಔರಾದ ತಾಲ್ಲೂಕನ್ನು ಹಿಂದುಳಿದ ತಾಲ್ಲೂಕು ಎನ್ನುವ ಹಣೆ ಪಟ್ಟಿ ಬದಲಾಯಿಸುವುದಕ್ಕೆ ಇನ್ನು ಎರಡು ದಶಕಕ್ಕೂ ಅಧಿಕ ಸಮಯಬೇಕು,
ಸದ್ಯ ತಾಲ್ಲೂಕಿನಲ್ಲಿ ಭ್ರಷ್ಟಾಚಾರ ತಾಂಡವವಾಡುತ್ತಿದೆ ಇಂತಹ ಪರಿಸ್ಥಿತಿಯಲ್ಲಿ ಸೂಕ್ತ ಸ್ಥಾನಕ್ಕೆ ಸೂಕ್ತ ಅಧಿಕಾರಿಗಳು ಇಲ್ಲದೆ ಹೋದರೆ ಮತ್ತೆ ಭ್ರಷ್ಟಾಚಾರಕ್ಕೆ ಮುಕ್ತ ಆಹ್ವಾನ ನೀಡಿದಂತಾಗುತ್ತದೆ,

ಔರಾದ ಪಟ್ಟಣದಲ್ಲಿ ಮೂಲಭೂತ ಸೌಕರ್ಯಗಳು ಸೇರಿದಂತೆ ಅನೇಕ ಸಮಸ್ಯೆಗಳಿಗೆ ಪರಿಹಾರ ನೀಡುವಲ್ಲಿ ಮುಖ್ಯ ಅಧಿಕಾರಿಯ ಪಾತ್ರ ಮಹತ್ವದ್ದು
ಆದರೆ ಪಟ್ಟಣ ಪಂಚಾಯಿತಿಗೆ ಖಾಯಂ ಮುಖ್ಯ ಅಧಿಕಾರಿ ಇಲ್ಲದೆ ಇರುವುದು! ಖೇದಕರ ಸಂಗತಿ, ಸರ್ಕಾರ ಈ ಭಾಗಕ್ಕೆ ಎಷ್ಟು ಮಲತಾಯಿ ಧೋರಣೆ ತೋರುತ್ತಿದೆ ಎಂಬುದನ್ನು ಸ್ಪಷ್ಟವಾಗಿ ಅರ್ಥಮಾಡಿಕೊಳ್ಳಬಹುದು.
ಮೂಲತಃ ಔರಾದ ತಾಲೂಕಿನಿಂದ ಒಬ್ಬರು ಕೇಂದ್ರ ಸಚಿವರು ಮತ್ತೊಬ್ಬರು ರಾಜ್ಯ ಸಚಿವರು ಇದ್ದರೂ ಕೂಡ ಪಟ್ಟಣಕ್ಕೆ ಖಾಯಂ ಮುಖ್ಯ ಅಧಿಕಾರಿ ಇಲ್ಲದಿರುವುದು ಇವರ ಆಡಳಿತಕ್ಕೆ ಹಿಡಿದ ಕೈಗನ್ನಡಿಯಾಗಿದೆ.

ನಿಯಮಗಳ ಪ್ರಕಾರ ನೋಡಿದ rdpr ಅಧಿಕಾರಿಯನ್ನ ಪಟ್ಟಣ ಪಂಚಾಯತ್ ಮುಖ್ಯಾಧಿಕಾರಿಯಾಗಿ ನೇಮಕ ಮಾಡಲು ಬರುವುದಿಲ್ಲ ,ಆದರು ಕೊಡ ರಾಜಕೀಯ ಪ್ರಭಾವ ಬಳಸಿ ಅಧಿಕಾರ ಅನುಭವಿಸುತ್ತಿದ್ದಾರೆ. 2 ತಿಂಗಳಗಳ ಹಿಂದೆ ಖಾಯಂ ಅಧಿಕಾರಿಯ ನೇಮಕ ಆಗಿತ್ತು, ಆದರೆ ತಮ್ಮ ರಾಜಕೀಯ ಪ್ರಭಾವ ಬಳಸಿ ಆ ಅಧಿಕಾರಿಯನ್ನು ಇತ್ತ ಬರದ ಹಾಗೆ ಮಾಡಿರುವ ಕೀರ್ತಿ ಇವರಿಗೆ ಸಲ್ಲುತ್ತದೆ. ಒಟ್ಟಿನಲ್ಲಿ ಅಭಿವೃದ್ಧಿ ಯಾರಿಗೂ ಬೇಕಾಗಿಲ್ಲ ಅಧಿಕಾರಕ್ಕಾಗಿ ಎಲ್ಲ ನಿಯಮಗಳ ನ್ನು ಗಾಳಿಗೆ ತೂರಿ ಮುಖ್ಯಾಧಿಕಾರಿ ಹುದ್ದೆ ಅಲಂಕರಿಸಿರುವುದು ಎಷ್ಟರಮಟ್ಟಿಗೆ ಸರಿ ಎನ್ನುವುದು ಪಟ್ಟಣದ ಜನತೆಯ ಮಾತಾಗಿದೆ

ಪಟ್ಟಣ ಪಂಚಾಯಿತಿ ಮುಖ್ಯ ಅಧಿಕಾರಿಯಾಗಲು ಹಣ ಬಲ ಮತ್ತು ರಾಜಕೀಯ ಬಲ ಇದ್ದರೆ ಸಾಕ್ ? ಎಂಬ ಪ್ರಶ್ನೆ ಪಟ್ಟಣದ ಜನರಲ್ಲಿ ಮೂಡಿದೆ,