Latest Post

ಸಾಕು ನಾಯಿಗಳಿಗೆ ತಪ್ಪದೇ ರೇಬೀಸ್ ಲಸಿಕೆ ನೀಡಿ: ಸಚಿವ ಪ್ರಭು ಚವ್ಹಾಣ ಕಂದಾಯ ಇಲಾಖೆ ಡಾಟಾ ಎಂಟ್ರಿ ಆಪರೇಟರ್‌ಗೆ ಸೇವಾ ಭದ್ರತೆ, ಸೂರ್ಯಕಾಂತ್ ನಾಗಮಾರಪಳ್ಳಿ ಮನವಿ
Spread the love

ಅಲ್ಪಸಂಖ್ಯಾತರ ವಸತಿ ನಿಲಯದಲ್ಲಿ ಡಿ ಗ್ರೂಪ್ ನೌಕರಸ್ಥರ ದರ್ಬಾರ

ಔರಾದ: ಪಟ್ಟಣದ ಕೇಂದ್ರ ಕಾರ್ಯ ಗ್ರಹ ಬಳಿ ಇರುವ ಅಲ್ಪಸಂಖ್ಯಾತರ ಮೆಟ್ರಿಕ್ ನಂತರ ಬಾಲಕಿಯರ ವಸತಿ ನಿಲಯದಲ್ಲಿ ಹೊರಗುತ್ತಿಗೆ ಆಧಾರದ ಮೇಲೆ ಬಂದಂತ ನೌಕರಸ್ಥರದೆ ದರ್ಬಾರ ಆಗಿದೆ.
ವಸತಿ ನಿಲಯದ ಮೇಲ್ವಚಾರಕಿ ಚಂದ್ರಕಲಾ ವಾರಕ್ಕೊಮ್ಮೆ ಬರೋದು ಕಷ್ಟ.ಆದರೆ ಇಲ್ಲಿ ಡಿ ಗ್ರೂಪ್ ನೌಕರರ ಅಡುಗೆ ಸಹಾಯಕಿಯರ ದರ್ಬಾರ್ ಆಗಿದೆ ವಾರಕ್ಕೆ ಒಂದು ಸಾರಿ ರೇಷನ ನೀಡುತ್ತಾರೆ ಒಂದು ಕೆಜಿ ರೇಷನಲ್ಲಿ ಒಂದು ವಾರ ಅಡುಗೆ ಮಾಡಲಾಗುತ್ತದೆ ಮೆನುಚಾರ್ಟ್ ಪ್ರಕಾರ ಊಟ ಇಲ್ಲವೇ ಇಲ್ಲ ವಾರದಲ್ಲಿ ನಾಲ್ಕು ಸಾರಿ ಚಿತ್ರಾನ್ನ ಮಾಡುತ್ತಾರೆ. ಕೇಳಿದ್ದರೆ ಮೇಲಿಂದ ರೇಶನ್ ಬಂದಿಲ್ಲ ಅನ್ನುತ್ತಾರೆ. ನಮ್ಮ ವಸತಿ ನಿಲಯದ ವಾರ್ಡನ್ ಚಂದ್ರಕಲಾ ಮೇಡಂ ಅಂತೂ ಇನ್ನು ಮುಖವೇ ತೋರಿಸಿಲ್ಲ ಇಲ್ಲಿ ಯಾವುದೇ ರೀತಿಯ ಸರ್ಕಾರದ ಮೂಲ ಭೂತ ಸೌಲಭ್ಯಗಳು ಸಿಗುತ್ತಿಲ್ಲ ಅನ್ನುತ್ತಾರೆ ವಸತಿ ನಿಲಯದ ವಿದ್ಯಾರ್ಥಿನಿಯರು.
ಮೆನು ಚಾಟ್ ಪ್ರಕಾರ ಊಟ ಅಂತೂ ಇಲ್ಲವೇ ಇಲ್ಲ ವಿದ್ಯಾರ್ಥಿನಿಯರು ಕೇಳಿಕೆ ಹೋದರೆ ಅವರನ್ನೇ ಅಂಜಿಸುತ್ತಾರೆ ನಮಗೆ ಈ ವಸತಿ ನಿಲಯದಿಂದ ಯಾರು ತೆಗೆಯುವುದಿಲ್ಲ ನಾವು ಸಚಿವ ಚವ್ಹಾಣ ಅವರ ಆದೇಶ ಪತ್ರ ಇಲಾಖೆಗೆ ಕೊಟ್ಟು ಬಂದಿದ್ದೇವೆ ಎನ್ನುತ್ತಾರೆ ವಸತಿ ನಿಲಯದಲ್ಲಿ ಹೊರ ಗುತ್ತಿಗೆ ಆಧಾರದ ಮೇಲೆ ಬಂದಿರುವಂತಹ ಮಹಿಳೆಯರು .
ತಾಲೂಕು ಅಧಿಕಾರಿ ಯಾಗಿ ಹುಮನಾಬಾದ ವಸತಿ ನಿಲಯದ ಮೇಲ್ವಿಚಾರಕ ಶಿವಕುಮಾರ್ ಅವರನ್ನು ನೇಮಕ ಮಾಡಲಾಗಿದೆ ಅವರು ಕೂಡಾ ವಾರದಲ್ಲಿ ಎರಡು ಬಾರಿ ತಾಲೂಕು ಕಛೇರಿಗೆ ಬರುತ್ತಾರೆ

ನಮ್ಮ ವಸತಿ ನಿಲಯಕ್ಕೆ ಖಾಯಂ ಮೇಲ್ವಿಚಾರಕರು ಬೇಕು ಇಲ್ಲಿ ಕೆಲಸ ಮಾಡುತ್ತಿರುವ ಡಿ ಗ್ರೂಪ್ ನೌಕರಸ್ಥರಿಗೆ ಬೇರೆ ಕಡೆ ಹಾಕಿ ಇಲ್ಲಿ ಹೊಸಬರನ್ನು ತರುವಲ್ಲಿ ಇಲಾಖೆ ಮುಂದಾಗಬೇಕು ಎನ್ನುತ್ತಾರೆ ವಸತಿ ನಿಲಯದ ವಿದ್ಯಾರ್ಥಿನಿಯರು
ಮೂಲಭೂತ ಸೌಲಭ್ಯ ಇಲ್ಲದೆ ವಂಚಿತರಾದ ಅಲ್ಪಸಂಖ್ಯಾತರ ಮ್ಯಾಟ್ರಿಕ್ ನಂತರ ಬಾಲಕಿಯರ ವಸತಿ ನಿಲಯದ ಔರಾದ ವಿದ್ಯಾರ್ಥಿನಿಯರು.