Latest Post

ಉಪನ್ಯಾಸಕ ಅಶೋಕ ಕೋರೆಗೆ ಪಿಎಚ್‌.ಡಿ ಡಾಕ್ಟರೇಟ್ : ಎಬಿವಿಪಿ ಯಿಂದ ಸನ್ಮಾನ ಸಾಕು ನಾಯಿಗಳಿಗೆ ತಪ್ಪದೇ ರೇಬೀಸ್ ಲಸಿಕೆ ನೀಡಿ: ಸಚಿವ ಪ್ರಭು ಚವ್ಹಾಣ
Spread the love

ವಸತಿ ನಿಲಯಗಳಿಗೆ 25% ಪ್ರತಿಶತ ಪ್ರವೇಶವನ್ನು ಹೆಚ್ಚಿಸುವಂತೆ ಅಭಾವಿಪ್ ಮನವಿ
ಔರಾದ ಪಟ್ಟಣದ ಹಿಂದುಳಿದ ವರ್ಗಗಳ ಕಲ್ಯಾಣ ಅಧಿಕಾರಿಗಳ ಕಛೇರಿ ಎದುರು ಪ್ರತಿಭಟನೆ
ತಾಲೂಕು ಹಿಂದುಳಿದ ವರ್ಗಗಳ ಕಲ್ಯಾಣ ಅಧಿಕಾರಿಗಳ ಮುಖಾಂತರ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಸಚಿವರಿಗೆ ಮನವಿ ಪತ್ರ ಸಲ್ಲಿಸಲಾಯಿತು
.

ಔರಾದ :ತಾಲೂಕಿನ ವಸತಿ ನಿಲಯಗಳಲ್ಲಿ ಸಮರ್ಪಕ ವ್ಯವಸ್ಥೆ ಕಲ್ಪಿಸುವಂತೆ ಮತ್ತು ಸಮರ್ಪಕ ಸಂಖ್ಯೆಯಲ್ಲಿ ವಾರ್ಡನಗಳನ್ನು ಒದಗಿಸುವ ಹಾಗೂ ವಿದ್ಯಾರ್ಥಿಗಳಿಗೆ ಪ್ರವೇಶದಲ್ಲಿ 25% ಪ್ರತಿಶತ ಹೆಚ್ಚಳ ಮಾಡುವಂತೆ ಅಖೀಲ ಭಾರತೀಯ ವಿದ್ಯಾರ್ಥಿ ಪರಿಷತ್ ಔರಾದ ಶಾಖೆ ಅಗ್ರಹಿಸಿದೆ.

ಪಟ್ಟಣದ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಅಡಿಯಲ್ಲಿ ನಡೆಸಲಾಗುವ ವಸತಿ ನಿಲಯಗಳಲ್ಲಿ ಸಮರ್ಪಕ ವ್ಯವಸ್ಥೆ ಇಲ್ಲದೆ ವಿದ್ಯಾರ್ಥಿಗಳು ನರಕ ಯಾತನೆ ಅನುಭವಿಸುವಂತಾಗಿದೆ ವಸತಿ ನಿಲಯಗಳಲ್ಲಿ ಸರಿಯಾದ ಸಮಯಕ್ಕೆ ಊಟ ನೀಡುತ್ತಿಲ್ಲ ನೀಡುತ್ತಿರುವ ಊಟ ಕಳಪೆ ಮಟ್ಟದಾಗಿದೆ ಸ್ವಚ್ಛತೆ ಕಾಪಾಡುತ್ತಿಲ್ಲ ಶುದ್ಧ ಕುಡಿಯುವ ನೀರಿನ ವ್ಯವಸ್ಥೆ ಇಲ್ಲ ಗ್ರಂಥಾಲಯ ವ್ಯವಸ್ಥೆ ಇಲ್ಲ ಆಟೋ ಪ್ರಕರಣಗಳ ವ್ಯವಸ್ಥೆ ಇಲ್ಲ ಮಕ್ಕಳಿಗೆ ಅನ್ಯಾಯವಾಗುತ್ತಿದೆ ತಾಲೂಕಿನಲ್ಲಿ ವಸತಿ ನಿಲಯಗಳಿಗೆ ವಾರ್ಡನ್ ಗಳ ಸಂಖ್ಯೆ ಕಡಿಮೆ ಇರುವುದರಿಂದ ವಸತಿ ನಿಲಯಗಳು ಅನಾಥ ಪ್ರಜ್ಞೆಯಂತೆ ಭಾವಿಸುತ್ತಿವೆ ತಾಲೂಕಿನಲ್ಲಿ ಗ್ರಾಮೀಣ ಪ್ರದೇಶದಿಂದ ವಿದ್ಯಾಭ್ಯಾಸ ಮಾಡಲು ಬರುವ ವಿದ್ಯಾರ್ಥಿಗಳ ಸಂಖ್ಯೆ ಹೆಚ್ಚಾಗಿದ್ದು ವಸತಿ ನಿಲಯಗಳಿಗೆ ಸೀಮಿತ ಸಂಖ್ಯೆಯಲ್ಲಿ ಪ್ರವೇಶ ಇರುವುದರಿಂದ ಬಹಳಷ್ಟು ಬಡ ವಿದ್ಯಾರ್ಥಿಗಳು ವಸತಿ ನಿಲಯದಿಂದ ವಂಚಿತರಾಗಿರುತ್ತಾರೆ ಇದರಿಂದ ವಿದ್ಯಾರ್ಥಿಗಳಿಗೆ ಅನ್ಯಾಯವಾಗುತ್ತಿದೆ ಆದುದರಿಂದ ತಾವುಗಳು ನಮ್ಮ ಈ ಮನವಿಯನ್ನು ಆಲಿಸಿ ಕೆಳಕಂಡ ನಮೂದಿಸಿರುವ ಬೇಡಿಕೆಗಳನ್ನು ಈಡೇರಿಸಬೇಕಾಗಿ ಎಬಿವಿಪಿ ತಾಲೂಕಾ ಪ್ರಮುಖ ಹಾವಪ್ಪಾ ದ್ಯಾಡೆ ಮನವಿ ಮಾಡಿದ್ದಾರೆ.

ಈ ಸಂದರ್ಭದಲ್ಲಿ ತಾಲೂಕು ಹಿಂದುಳಿದ ವರ್ಗಗಳ ಇಲಾಖೆಯ ಅಧಿಕಾರಿ ಸಂಗೀತಾ ಬಿರಾದಾರ ಎಬಿವಿಪಿ ನಗರ ಕಾರ್ಯದರ್ಶಿ ನೌನಾಥ ಮೇತ್ರೆ, ಅಶೋಕ ಶೇಂಭೆಳ್ಳಿ,ಅಂಬಾದಾಸ ನಳಗೆ,ರಮೇಶ್ ವಾಘಮಾರೆ,ಅನೀಲ ಮೇತ್ರೆ, ಮಹಾದೇವಶಿಂಧೆ,ಮಲ್ಲಿಕಾರ್ಜುನಜೊಜನಾ,ಬಸಗೊಂಡ,ರೂಬೆನ,ತಾರಾಬಾಯಿ,ಭುವನೇಶ್ವರಿ,ಭಾರತಿ,ವಸಂತಾ,ಶಿಲ್ಪಾ,ಅನೇಕ ಶಾಲಾ ಕಾಲೇಜುಗಳ ವಿದ್ಯಾರ್ಥಿಗಳು ಹೋರಾಟದಲ್ಲಿ ಉಪಸ್ಥಿತರಿದ್ದರು.

ರೈತರ ಜಮೀನುಗಳ ರಸ್ತೆ ಸಮಸ್ಯೆ ಕೂಡಲೇ ಪರಿಹರಿಸಿ: ಶಾಸಕ ಬಂಡೆಪ್ಪ ಖಾಶೆಂಪುರ್ ಸೂಚನೆ!

ಬೇಡಿಕೆಗಳು :-
೧) ವಸತಿ ನಿಲಯದ ವಿಧ್ಯಾರ್ಥಿಗಳಿಗೆ ಅನೂಕೂಲವಾಗುವಂತೆ ಆರೋಗ್ಯಕರ ಹಾಗೂ ಒಳ್ಳೆಯ ಸಮರ್ಪಕ ವ್ಯವಸ್ಥೆ ಮಾಡಬೇಕು.
೨) ವಸತಿ ನಿಲಯಗಳ ಸಂಖ್ಯೆಗೆ ಅನುಗುಣವಾಗುವಂತೆ ವಾರ್ಡನ್ ವ್ಯವಸ್ಥೆ ಮಾಡಬೇಕು.
೩) ವಿಧ್ಯಾರ್ಥಿಗಳಿಗೆ ಅನ್ಯಾಯವಾಗದಂತೆ ಹೆಚ್ಚುವರಿ ೨೫% ಪ್ರತಿಶತ ಪ್ರವೇಶವನ್ನು ಹೆಚ್ಚಿಸಬೇಕು.

Leave a Reply