Latest Post

ಉಪನ್ಯಾಸಕ ಅಶೋಕ ಕೋರೆಗೆ ಪಿಎಚ್‌.ಡಿ ಡಾಕ್ಟರೇಟ್ : ಎಬಿವಿಪಿ ಯಿಂದ ಸನ್ಮಾನ ಸಾಕು ನಾಯಿಗಳಿಗೆ ತಪ್ಪದೇ ರೇಬೀಸ್ ಲಸಿಕೆ ನೀಡಿ: ಸಚಿವ ಪ್ರಭು ಚವ್ಹಾಣ
Spread the love

ಬಸವೇಶ್ವರ ಡಿ.ಎಡ್ ಕಾಲೇಜು ಹಾಗೂ ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ ಔರಾದ ಸಂಯುಕ್ತಾಶ್ರಯದಲ್ಲಿ ಶಿಕ್ಷಕರ ದಿನಾಚರಣೆ ಮತ್ತು ಡಿ.ಎಡ್ ದ್ವಿತೀಯ ಪ್ರಶಿಕ್ಷಣಾರ್ಥಿಗಳಿಂದ ಪ್ರಥಮ ವರ್ಷದ ಪ್ರಶಿಕ್ಷಣಾರ್ಥಿಗಳಿಗೆ ಸ್ವಾಗತ ಕಾರ್ಯಕ್ರಮ ಜರುಗಿತ್ತು.
ಈ ಸಂದರ್ಭದಲ್ಲಿ ಡಾ ಮನ್ಮಥ ಡೊಳೆ ಮಾತನಾಡಿ ಈ ದೇಶದ ಸಂಪತ್ತು ಶಿಕ್ಷಕರು ಶಿಕ್ಷಕರಿಂದಲೆ ದೇಶದಲ್ಲಿ ಅಭಿವೃದ್ಧಿ ಹೊಂದಲು ಸಾದ್ಯ ಪ್ರತಿಯೊಬ್ಬರೂ ಶಿಕ್ಷಣದಿಂದ ಸಮಾಜ ಬಲಿಷ್ಠ ಗೊಳಿಸಬಹುದು ಸಮಾಜದಲ್ಲಿ ಆದರ್ಶ ತಂದೆ ತಾಯಿ ಹಾಗೂ ಒಳ್ಳೆಯ ವ್ಯಕ್ತಿ ಯಾಗಬೇಕಾದರೆ ಶಿಕ್ಷಣ ಸಂಸ್ಕಾರ ಮುಖ್ಯ ವಾದದ್ದು ಎಂದು ಶಿಕ್ಷಣದ ಬಗ್ಗೆ ಉಪನ್ಯಾಸ ಮಂಡಿಸಿದರು.

ಪೂಜ್ಯ ಬಸವಲಿಂಗ ಪಟ್ಟದ್ದೆವರು ಮಾತನಾಡಿ ಈ ಕಾಲೇಜಿನ ಪ್ರಶಿಕ್ಷನಾರ್ಥಿಗಳೆ ನಾಳಿನ ಶಿಕ್ಷಕರು ಈ ಸಮಾಜದಲ್ಲಿ ಶಿಕ್ಷಕರ ಪಾತ್ರ ಬಹುದೊಡ್ಡದು ಶಿಕ್ಷಣಕ್ಕೆ ಮಹತ್ವ ನೀಡಿ ಶಿಕ್ಷಣ ಮುಗಿದ ತಕ್ಷಣವೇ ನಮ್ಮ ಶಾಲೆಗಳಲ್ಲಿ ಶಿಕ್ಷಕರಾಗಿ ಕೇಲಸಮಾಡಿ ಎಂದು ಡಿ.ಎಡ್ ಕಾಲೇಜಿನ ವಿದ್ಯಾರ್ಥಿಗಳಿಗೆ ಪೂಜ್ಯ ಅಪ್ಪಾಜೀ ಧೈರ್ಯ ತುಂಬಿದರು.
ಪ್ರಾಂಶುಪಾಲ ಓಂಪ್ರಕಾಶ್ ದಡ್ಡೆ ಮಾತನಾಡಿ ಈಗಿನ ವಿದ್ಯಾರ್ಥಿಗಳೆ ಸಮಾಜದಲ್ಲಿ ಯಶಸ್ವಿ ವ್ಯಕ್ತಿಯಾಗಿ ತಮ್ಮ ಕುಟುಂಬದಲ್ಲಿ ಯಶಸ್ವಿ ಮಗನಾಗಿ ಯಾವುದೇ ದೂಷ್ಚಟಗಳಿಗೆ ಬಲಿಯಾಗದೆ ತಮ್ಮ ಕುಟುಂಬ ಗ್ರಾಮ ದೇಶಕ್ಕೆ ಕೀರ್ತಿ ತರುವಂತ ವ್ಯಕ್ತಿಗಳಾಗಿ ಹೊರಹೊಮ್ಮಿ ಎಂದು ನುಡಿದ
ರು.

ಈ ಸಂದರ್ಭದಲ್ಲಿ ದಿವ್ಯ ಸಾನಿಧ್ಯ ಪರಮಪೂಜ್ಯ ಮ.ಘ.ಚ.ಡಾ ಬಸವಲಿಂಗ ಪಟ್ಟದೇವರು ವಹಿಸಿದ್ದರು.ಅಧ್ಯಕ್ಷತೆ ಶ್ರೀ ಮನ್ಮತಪ್ಪ ಹುಗ್ಗೆ, ವಿಶೇಷ ಉಪನ್ಯಾಸ ಡಾ.ಮನ್ಮಥ ಡೋಳೆ ಪ ಪೂ ಪ್ರಾಂಶುಪಾಲರ ಸಂಘದ ಜಿಲ್ಲಾ ಪ್ರಧಾನ ಕಾರ್ಯದರ್ಶಿಗಳು, ಮುಖ್ಯ ಅತಿಥಿಯಾಗಿ ಓಂ ಪ್ರಕಾಶ್ ದಡ್ಡೆ ಪ್ರಾಂಶುಪಾಲರು,ಸರಕಾರಿ ಪ.ಪೂ ಕಾಲೇಜು ಔರಾದ ಹಾಗೂ ಪ ಪೂ ಪ್ರಾಂಶುಪಾಲರ ಸಂಘದ ಜಿಲ್ಲಾ ಉಪಾಧ್ಯಕ್ಷರು. ಅಥಿತಿಗಳಾಗಿ ಪತ್ರಕರ್ತರಾದ ಶಿವಾನಂದ ಮೊಕ್ತೇದಾರ್,ಪತ್ರಕರ್ತರು ಹಾಗೂ ABVP ಮುಖಂಡರಾದ ಅಂಬಾದಾಸ ನಳಗೆ, ಉಪಸ್ಥಿತರಿದ್ದರು.
ನಿರೂಪಣೆ ಶಿಕ್ಷಕ ನಾಗನಾಥ ಶಂಕು ವಹಿಸಿಕೊಂಡರು ಸುರೇಖಾ ಡಿ ವಂದಿಸಿದರು ಈ ಸಂದರ್ಭದಲ್ಲಿ ಉಪನ್ಯಾಸಕರಾದ ಬಸವರಾದ ತಳವಾರ,ರೇಖಾ ನೌಬಾದೆ,ವಾಮನರಾವ ಮಾನೆ,ಸಂಜೀವ ವಲಾಂಡೆ, ಬಸವ ಗುರುಕುಲ ಆಂಗ್ಲ ಮಾಧ್ಯಮ ಪಿಬ್ಲಿಕ್ ಶಾಲೆಯ ಪ್ರಾಂಶುಪಾಲ ಶ್ರೀಮತಿ ಸನ್ವರ್ ಸುಲ್ತಾನಾ, ಐಟಿಐ ಕಾಲೇಜಿನ ಪ್ರಾಂಶುಪಾಲ ಸತೀಶ ಗಂಧಿಗೂಡೆ, ನಾಗನಾಥ ಪಾಟೀಲ್, ನಿರ್ಮಲಾ ಸೇರಿ, ಇಂದುಮತಿ ಎಡವೆ,ಹಾಗೂ ಕಾಲೇಜಿನ ವಿದ್ಯಾರ್ಥಿಗಳು ವಿದ್ಯಾರ್ಥಿನಿಯರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.

Leave a Reply