Latest Post

ಉಪನ್ಯಾಸಕ ಅಶೋಕ ಕೋರೆಗೆ ಪಿಎಚ್‌.ಡಿ ಡಾಕ್ಟರೇಟ್ : ಎಬಿವಿಪಿ ಯಿಂದ ಸನ್ಮಾನ ಸಾಕು ನಾಯಿಗಳಿಗೆ ತಪ್ಪದೇ ರೇಬೀಸ್ ಲಸಿಕೆ ನೀಡಿ: ಸಚಿವ ಪ್ರಭು ಚವ್ಹಾಣ
Spread the love

ತಾಲೂಕು ಪಂಚಾಯತ ತಮ್ಮ ಹುಕುಂ ಶಾಹಿಯಲ್ಲಿ ಇಟ್ಟಿಕೊಂಡಿದ್ದಾರೆ ಸಚಿವ ಚವ್ಹಾಣ

ಮುಂಬರುವ ಔರಾದ ವಿಧಾನ ಸಭಾ ಕ್ಷೇತ್ರದ ಕಾಂಗ್ರೆಸ್ ಟಿಕೆಟ್ ಸ್ಥಳೀಯರಿಗೆ ನಿಡಬೇಕೆಂದು ಪಟ್ಟಣದ ಪ್ರವಾಸಿ ಮಂದಿರದಲ್ಲಿ ಪತ್ರಿಕಾ ಗೋಷ್ಟಿ ನಡೆಸಲಾಯಿತು.

ತಾಲ್ಲೂಕಿನಲ್ಲಿ ಸುಮಾರು 15 ವರ್ಷಗಳಿಂದ ಬಿಜೆಪಿ ಸರ್ಕಾರವು ಆಡಳಿತ ನಡೆಸುತ್ತಿದ್ದು ಬಡವರ ಹಾಗೂ ರೈತರ ಕಷ್ಟದಲ್ಲಿ ಭಾಗಿಯಾಗದ ಈ ಸರ್ಕಾರ ನಮಗೆ ಬೇಕೆ ಇಂತಹ ವೈಫಲ್ಯ ಕಂಡ ಸರ್ಕಾರ ತಾಲೂಕಿನಿಂದ ಕಿತ್ತು ಒಗಿಯಬೇಕು ಮುಂದೆ ಬರುವಂತ ಚುನಾವಣೆಯಲ್ಲಿ ತಾಲೂಕಿನ ಎಲ್ಲಾ ಹಿರಿಯ ಕಾಂಗ್ರೆಸ್ ಕಾರ್ಯಕರ್ತರು ಅಭಿವೃದ್ಧಿಯ ಬೆನ್ನೆಲುಬಾಗಿ ನಿಂತು ಪಕ್ಷ ಬೆಳೆಸುವ ಕಾರ್ಯದಲ್ಲಿ ತೊಡಗಿ ಬರುವಂತ ಚುನಾವಣೆಯಲ್ಲಿ ಹೈಕಮಾಂಡ್ ಯಾವುದೇ ಅಭ್ಯರ್ಥಿ ಗುರುತಿಸಿದರು ಪಕ್ಷದಲ್ಲಿ ಒಗ್ಗಟ್ಟಿನಿಂದ ಕೆಲಸ ಮಾಡಲು ಬದ್ದರಾಗಿದ್ದೇವೆ ಎಂದು ಅಭಿಪ್ರಾಯ ಪಟ್ಟ ಹಿರಿಯ ಕಾಂಗ್ರೆಸ್ ಮುಖಂಡ ಶಿವರಾಜ ದೇಶಮುಖ್.
ಔರಾದ ತಾಲೂಕಿನಲ್ಲಿ ಸುಮಾರು ಒಂದು ಲಕ್ಷಕ್ಕಿಂತ ಹೆಚ್ಚು ಪರಿಶಿಷ್ಟ ಜಾತಿ ಜನಾಂಗದವರು ಇದ್ದು ಕಾಂಗ್ರೆಸ್ ಪಕ್ಷದಲ್ಲಿ ತಾಲೂಕಿನ ಸ್ಥಳೀಯ ಅಭ್ಯರ್ಥಿಗಳಿಗೆ ಟಿಕೆಟ್ ನೀಡಬೇಕು ತಾಲೂಕಿನ ಎಲ್ಲಾ ಹಿರಿಯ- ಕಿರಿಯ ಕಾಂಗ್ರೆಸ್ ಪಕ್ಷದ ಕಾರ್ಯಕರ್ತರು ಮುಂಚುಣಿಯಲ್ಲಿ ನಿಂತು ಪಕ್ಷ ಬೆಳೆಸುತ್ತೇವೆ ತಾಲೂಕಿನ ಅಭಿವೃದ್ಧಿಗೆ ಅವಕಾಶ ನೀಡಬೇಕು ಪ್ರಭು ಚವ್ಹಾಣ ಹಠಾವೊ ಔರಾದ ಬಚಾವೊ ಎಂದರು.
ತಾಲ್ಲೂಕಿನ ಅಭ್ಯರ್ಥಿಗೆ ಅವಕಾಶ ನೀಡಿದರೆ ಕಾಂಗ್ರೆಸಿನ ಗೆಲುವು ಖಚಿತ ಎಂದ ತಾಲೂಕಿನ ಹಿರಿಯ ಮುಖಂಡ ರಾಮಣ್ಣ ಒಡೆಯರ ನುಡಿದರು.
ಪ್ರಭು ಚವ್ಹಾಣ ಸರ್ಕಾರ ತಾಲ್ಲೂಕಿನಲ್ಲಿ ಆಡಳಿತ ವೈಫಲ್ಯ ಕಂಡು ಜನರು ತತ್ತರಿಸಿದ್ದಾರೆ ಆದರಿಂದ ನಾಳೆಯಿಂದ ತಾಲ್ಲೂಕಿನ ಕಾಂಗ್ರೆಸ್ ಪಕ್ಷದ ಕಾರ್ಯಕರ್ತರು ಮನೆ ಬಾಗಿಲಿಗೆ ಎಂಬ ಯೋಜನೆ ಹಾಕಿಕೊಂಡು ಜನರ ಸಮಸ್ಯೆ ಆಲಿಸುವಲ್ಲಿ ನಿರತರಾಗುತ್ತೆವೆ ಎಂದ ಬಂಟಿ ದರಬಾರೆ.
ನಮ್ಮ ತಾಲ್ಲೂಕಿನ ಕಾಂಗ್ರೆಸ್ ಹಿರಿಯ ಮುಖಂಡರಲ್ಲಿ ಹೈಕಮಾಂಡ್ ಯಾರನ್ನಾದರೂ ಒಬ್ಬರನ್ನು ಟಿಕೆಟ್ ನಿಡಿದ್ದಲ್ಲಿ ನಾವುಗಳು ಒಗ್ಗಟ್ಟಿನಲ್ಲಿ ಕೇಲಸಮಾಡುತ್ತ ಪಕ್ಷ ಬಲಿಷ್ಠ ಗೊಳಿಸುತ್ತೆವೆ ಎಂದು ಕೆ ಟಿ ವಿಶ್ವನಾಥ ನುಡಿದರು.
ಔರಾದ ತಾಲೂಕಿನ ವಿಧಾನ ಸಭೆ ಚುಣಾವಣೆಗೆ ಹಲವು ಜನರು ಆಕಾಂಕ್ಷಿಗಳಿದ್ದು ಮತ್ತು ಬೆರೆಕೆಡೆಯಿಂದ ಬಂದ ಅಭ್ಯರ್ಥಿಗಳು ಕಾಂಗ್ರೆಸ್ ಪಕ್ಷದ ಟಿಕೆಟ್ ನನಗೆ ಖಚಿತ ಎಂದು ಹೇಳುತ್ತಿರುವದು ಸತ್ಯಕ್ಕೆ ದೂರವಾದ ಮಾತು. ಇನ್ನು ಪಕ್ಷದಲ್ಲಿ ಹಲವೂ ವರ್ಷಗಳಿಂದ ದುಡಿದ ಹಿರಿಯ ಮುಖಂಡರು ನಿರಂತರವಾಗಿದ್ದು ಅವರನ್ನು ಟಿಕೆಟ್ ನಿಡಬೇಕೆಂದು ರಾಜ್ಯ ಘಟಕದ ಜಿಲ್ಲಾ ಘಟಕದ ಅದ್ಯಕ್ಷರಿಗೂ ನಮ್ಮ ಅಭಿಪ್ರಾಯ ತಿಳಿಸಿದ್ದೆವೆ ತಾಲ್ಲೂಕಿನಲ್ಲಿ ಕಾಂಗ್ರೆಸ್ ಪಕ್ಷದಲ್ಲಿ ಸೇನಾ ಹೈ ಲೇಕಿನ ಸೇನಾ ಪತಿನಹಿ ಹೈ ಎಂದು ವಿಶ್ವನಾಥ ದಿನೆ ನುಡಿದರು.

ಈ ಸಂದರ್ಭದಲ್ಲಿ ಕಾಂಗ್ರೆಸ್ ಪಕ್ಷದ ಹಿರಿಯ ಮುಖಂಡರಾದ ರಾಮಣ್ಣಾ ವಡಿಯರ,ಬಾಬುರಾವ ತಾರೆ,ಕೆ ಟಿ ವಿಶ್ವನಾಥ ,ವಿಶ್ವನಾಥ ದಿನೆ,ಬಂಟಿ ದರಬಾರೆ,ಅಭಂಗರಾವ ಗಡದೆ,ಅನೇಕ ಕಾಂಗ್ರೆಸ್ ಪಕ್ಷದ ಕಾರ್ಯಕರ್ತರು ಪತ್ರಿಕಾ ಗೋಷ್ಠಿಯಲ್ಲಿ ಉಪಸ್ಥಿತರಿದ್ದರು.