Latest Post

ಉಪನ್ಯಾಸಕ ಅಶೋಕ ಕೋರೆಗೆ ಪಿಎಚ್‌.ಡಿ ಡಾಕ್ಟರೇಟ್ : ಎಬಿವಿಪಿ ಯಿಂದ ಸನ್ಮಾನ ಸಾಕು ನಾಯಿಗಳಿಗೆ ತಪ್ಪದೇ ರೇಬೀಸ್ ಲಸಿಕೆ ನೀಡಿ: ಸಚಿವ ಪ್ರಭು ಚವ್ಹಾಣ
Spread the love

ಪಟ್ಟಣದಲ್ಲಿ 17 ಕೋಟಿ ರೂಪಾಯಿ ಅಭಿವೃದ್ಧಿ ಕಾಮಗಾರಿ ಚಾಲನೆ :- ಸಚಿವ ಚವ್ಹಾಣ

ಔರಾದ : ಪಶು ಸಂಗೋಪನೆ ಸಚಿವರಾದ ಪ್ರಭು ಬಿ ಚವ್ಹಾಣ ಅವರು ಸೆ6 ರಂದು ಔರಾದ ಪಟ್ಟಣದ ವಿವಿಧ ವಾರ್ಡುಗಳಲ್ಲಿ ಸಂಚರಿಸಿ ಸುಮಾರು 17 ಕೋಟಿ ರೂಪಾಯಿಗಳ ಅಭಿವೃದ್ಧಿ ಕಾಮಗಾರಿಗಳ ಚಾಲನೆ ನೀಡಿದರು.
ಮೊದಲು ತಾಲೂಕು ಮಟ್ಟದ ಕ್ರೀಡಾ ಕೊಟಕ್ಕೆ ಔರಾದ ಕ್ರೀಡಾಂಗಣದಲ್ಲಿ ಚಾಲನೆ ನೀಡಿದರು. 4.25 ಕೋಟಿ ರೂಪಾಯಿ ಪ ಪಂಚಾಯತ್ ಅನುದಾನದಲ್ಲಿ, 3 ಕೋಟಿ ರೂಪಾಯಿ ಎಲ್ಲಿ ನಗರ ಉತ್ಕಾರನ, 3 ಕೋಟಿ ರೂ ಸರ್ಕಾರಿ ಆಸ್ಪತ್ರೆಯಿಂದ ತಹಶಿಲ್ ಕಚೇರಿ ವರೆಗೆ ಡಾಂಬರೀಕರಣ ರಸ್ತೆ, 3ಕೊಟಿ ರೂ ವೆಚ್ಚದ ಹೈಟೆಕ್ ಪಶು ಆಸ್ಪತ್ರೆಗೆ ಚಾಲನೆ ನೀಡಿದರು ಎ ಪಿ ಎಂ ಸಿ ಯಿಂದ ತಹಶಿಲ್ ಕಚೇರಿಯವರಿಗೆ ಸ್ಟೇಟ್ ಲೈಟ್ ಕಾಮಗಾರಿ ಈಗಾಗಲೇ ಪ್ರಾರಂಭವಾಗಿದೆ ಪಟ್ಟಣದ ವಿವಿಧ ವಾರ್ಡುಗಳಿಗೆ ತೆರಳಿ ವಿವಿಧ ಕಾಮಗಾರಿಗಳ ಚಾಲನೆ ನೀಡಲಾಯಿತು ಹಾಗೂ ಜನರ ಸಮಸ್ಯೆ ಆಲಿಸಿ ಕೂಡಲೇ ಅಧಿಕಾರಿಗಳ ಗಮನಕ್ಕೆ ತಂದು ಸಮಸ್ಯೆ ಬಗೆಹರಿಸಲಾಗುತ್ತದೆ ಎಂದರು. ಅದೇ ರೀತಿ ಭಾರತ್ ಮಾಲಯೋಜನೆಯಲ್ಲಿ ರಾಷ್ಟ್ರೀಯ ಹೆದ್ದಾರಿ ಬೀದರ್ ವನಮಾರಪಳ್ಳಿ ರಸ್ತೆ ಕಾಮಗಾರಿ ಕಳಪೆ ಮಟ್ಟದಲ್ಲಿ ನಡೆಯುತ್ತಿದೆ ಎಂದಾಗ ಅನೇಕರು ನನ್ನ ಗಮನಕ್ಕೆ ತಂದಿದ್ದಾರೆ ಅದರ ಬಗ್ಗೆ ಸಂಬಂಧಪಟ್ಟ ಅಧಿಕಾರಿಗಳ ಹಾಗೂ ಗುತ್ತಿಗೆದಾರರಿಗೆ ಮಾತನಾಡುತ್ತೇನೆ ಕಾಮಗಾರಿ ವೀಕ್ಷಣೆ ಮಾಡುತ್ತೆನೆ ಎಂದು ನುಡಿದರು.
ಔರಾದ್ ಪಟ್ಟಣದ ವಾರ್ಡ ನಂ 14 ರಲ್ಲಿ 31.34 ಲಕ್ಷ ರೂಪಾಯಿ ಸಿಸಿ ಡ್ರೆನ್ ಕಾಮಗಾರಿಗೆ ಚಾಲನೆ ನೀಡಲಾಯಿತು. ಕೆಲವು ಬಡಾವಣೆಗಳಲ್ಲಿ ಟೀ ಪಾರ್ಕ್ ನಿರ್ಮಾಣಕ್ಕೆ 2.50 ಕೋಟಿ ರೂ ಮಂಜೂರು ಮಾಡಲಾಗಿದೆ ಕೆಲವೇ ದಿನಗಳಲ್ಲಿ ಕಾಮಗಾರಿ ಪ್ರಾರಂಭಿಸಲಾಗುತ್ತದೆ ಹಾಗೆ ಔರಾದ್ ಪಟ್ಟಣದ ಸಂಪೂರ್ಣ ಅಭಿವೃದ್ಧಿ ಕನಸು ಸಾಕಾರಗೊಳಿಸುತ್ತೇನೆ ಮುಂದಿನ ದಿನಗಳಲ್ಲಿ ತಾವು ನೋಡುವಿರಿ ಎಂದು ಪತ್ರಿಕಾಗೋಷ್ಠಿಯಲ್ಲಿ ಸಚಿವ ಚವ್ಹಾಣ ನುಡಿದರು.
ಅಲೆಮಾರಿ ಜನಾಂಗಕ್ಕೆ ಬೆರೆ ಸ್ಥಳದಲ್ಲಿ ಮೂರು ಎಕ್ಕರೆ ಮಂಜೂರು ಮಾಡಲಾಗಿದೆ ಸರ್ವೆ ನಂಬರ್ 183 ರಲ್ಲಿ ನೀಡಲಾಗಿದೆ ಕೂಡಲೇ ವಸತಿಗಳು ಹಂಚುವಂತ ಕಾರ್ಯದಲ್ಲಿ ತೊಡಗಲ್ಲಿದ್ದಾರೆ ಅಧಿಕಾರಿಗಳು ಅದೇ ರೀತಿ ಬಿಸಿಎಂ ವಸತಿ ನಿಲಯ ನರಸೀಪುರ ತಾಂಡಾಬಳಿ 2.50 ಕೋಟಿ ರೂ ಅನುದಾನ ಬಿಡುಗಡೆ ಯಾಗಿದೆ ಕಾಮಗಾರಿಗೆ ಚಾಲನೆ ನೀಡಲಾಯಿತು. ಪಟ್ಟಣದ ಸಂಪೂರ್ಣ ಅಭಿವೃದ್ಧಿ ಜವಬ್ದಾರಿ ನನ್ನದಾಗಿದೆ ಮೊದಲ ಆದ್ಯತೆ ಚರಂಡಿ ನೀರು ರಸ್ತೆಗಳಿಗೆ ನಿಡಲಾಗುತ್ತದೆ ಎಂದು ಸಚಿವ ಚವ್ಹಾಣ ಪತ್ರಿಕಾ ಗೋಷ್ಟಿಯಲ್ಲಿ ನುಡಿದರು.

ಈ ಸಂದರ್ಭದಲ್ಲಿ ತಹಶಿಲ್ದಾರ ಅರುಣ ಕುಮಾರ ಕುಲಕರ್ಣಿ,ಪಶು ಮೀನುಗಾರಿಕೆ ವಿಶ್ವವಿದ್ಯಾಲಯ ಸದಸ್ಯ ವಸಂತ ಬಿರಾದಾರ, ಮುಖಂಡ ಧೊಂಡಿಬಾ ನರೊಟೆ, ಕೇರಬಾ ಪವಾರ,ಪಟ್ಟಣ ಪಂಚಾಯತ ಮುಖ್ಯಾಧಿಕಾರಿ ಶಿವಕುಮಾರ್ ಘಾಟೆ,ಪ ಪಂ ಉಪಾಧ್ಯಕ್ಷ ಸಂತೋಷ ಪೊಕಲವಾರ,ಪ ಪಂ ಸದಸ್ಯರಾದ ಸಂಜುಕೂಮಾರ ವಡಿಯಾರ,ದಯಾನಂದ ಘುಳೆ,ಯಾದು ಮೆತ್ರೆ,ಗುಂಡಪ್ಪಾ ಮುಧಾಳೆ,ಶ್ರೀ ಕಾಂತ ಅಲಮಾಜೆ,ಸುಂದರರಾಜ, ವಿವಿಧ ಇಲಾಖೆಯ ಅಧಿಕಾರಿಗಳು ಹಾಗೂ ಗುತ್ತಿಗೆದಾರರಾದ ಶರಣಪ್ಪಾ ಪಂಚಾಕ್ಷರಿ, ಸೂರ್ಯಕಾಂತ ಅಲಮಾಜೆ,ಶಿವರಾಜ್ ಅಲಮಾಜೆ,ಅಶೋಕ ಅಲಮಾಜೆ,ಅನೇಕ ಕಾರ್ಯಕರ್ತರು ಉಪಸ್ಥಿತರಿದ್ದರು.