Latest Post

ಉಪನ್ಯಾಸಕ ಅಶೋಕ ಕೋರೆಗೆ ಪಿಎಚ್‌.ಡಿ ಡಾಕ್ಟರೇಟ್ : ಎಬಿವಿಪಿ ಯಿಂದ ಸನ್ಮಾನ ಸಾಕು ನಾಯಿಗಳಿಗೆ ತಪ್ಪದೇ ರೇಬೀಸ್ ಲಸಿಕೆ ನೀಡಿ: ಸಚಿವ ಪ್ರಭು ಚವ್ಹಾಣ
Spread the love

ಅನ್ಯ ಅಧಿಕಾರಿಗಳನ್ನು ನೇಮಿಸಿರುವ ಕುರಿತು ಪ್ರತಿಭಟನೆ
ಔರಾದ :- ಪಟ್ಟಣದ ತಾಲೂಕು ಪಂಚಾಯಿತಿ ಕಚೇರಿ ಎದುರುಗಡೆ ಕಪ್ಪುಪಟ್ಟಿ ಧರಿಸಿ ಸಾಂಕೇತಿಕ ಧರಣಿ ನಡೆಸಲಾಯಿತು. ತಾಲೂಕು ಪಂಚಾಯತ್ ಕಾರ್ಯನಿರ್ವಾಹಕ ಅಧಿಕಾರಿ ಹುದ್ದೆಗೆ ಅನ್ಯ ಇಲಾಖೆಯ ಅಧಿಕಾರಿಗಳನ್ನು ನೇಮಿಸುತ್ತಿರುವುದು ಖಂಡನೆಯ.
ಕರ್ನಾಟಕ ರಾಜ್ಯ ಸರ್ಕಾರಿ ನೌಕರ ಸಂಘದ ತಾಲೂಕ ಅಧ್ಯಕ್ಷರಾದ ಶಿವಕುಮಾರ್ ಘಾಟೆ ಅವರ ನೇತೃತ್ವದಲ್ಲಿ ನಡೆದ ಸಾಂಕೇತಿಕ ಧರಣಿಯಲ್ಲಿ ಔರಾದ್ ಮತ್ತು ಕಮಲ್ ನಗರ ತಾಲೂಕಿನ ನೌಕರರು ಮತ್ತು ಸಿಬ್ಬಂದಿ ನೇತ್ರತ್ವದಲ್ಲಿ ಜೇಸ್ಕಾಂ ಇಲಾಖೆಯ ಎಇಇ ಯಾದ ಪ್ರಕಾಶ ಅವರನ್ನು ಗುತ್ತಿಗೆ ಆಧಾರದ ಮೇಲೆ ಹೂವಿನ ಹಡಗಲಿ ತಾಲೂಕು ಪಂಚಾಯಿತಿಯ ಕಾರ್ಯನಿರ್ವಾಹಕ ಅಧಿಕಾರಿಯಾಗಿ ನೇಮಿಸಿರುವದನ್ನು ಕೂಡಲೇ ರದ್ದು ಪಡಿಸಬೇಕು ರಾಜ್ಯದ ವಿವಿಧಡೆ ಆರ್‌ಡಿಪಿಆರ್ ಇಲಾಖೆಯಲ್ಲಿ ನೇಮಿಸಿರುವ ಅನ್ಯ ಇಲಾಖೆಗಳ ಅಧಿಕಾರಿಗಳು ಮಾತ್ರ ಇಲಾಖೆಗೆ ಬಿಡುಗಡೆಗೊಳಿಸಬೇಕು ಮುಂದೆ ಯಾವುದೇ ಹಂತದಲ್ಲಿ ಕೂಡ ಅನ್ಯ ಇಲಾಖೆಯಲ್ಲಿ ಅವರನ್ನು ಇಲಾಖೆಗೆ ನೇಮಿಸಬಾರದೆಂದು ಮಾನ್ಯ ಮುಖ್ಯ ಮಂತ್ರಿಗಳಿಗೆ ಬರೆದ ಮನವಿ ಯನ್ನು ಒತ್ತಾಯಿಸಲಾಯಿತು.ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳ ಅಧ್ಯಕ್ಷ ನಾಗೇಶ್ ಮುಕ್ರಂಬೇ,ಕಮಲನಗರ ತಾಲೂಕು ಪಂಚಾಯಿತಿಯ ಸಹಾಯಕ ನಿರ್ದೇಶಕ ಹಣಮಂತರಾವ ಕೌಟಗೆ, ಪಂಚಾಯತ್ ಅಭಿವೃದ್ಧಿ ಅಧಿಕಾರಿ ಸುರೇಖಾ,ಸಂಧ್ಯಾರಾಣಿ, ನಿರ್ಮಲಾ, ವೆಂಕಟೇಶ್ ದೇಶಪಾಂಡೆ, ಶರಣಪ್ಪ ನಾಗಲಗದ್ದೆ, ಶರಣಪ್ಪ ಗಾದಿಗೆ, ಸಂತೋಷ್ ಕುಮಾರ್ ತಂಬಾಕೆ, ಡಿಟಿಓ ಶಿವಕುಮಾರ್ ಪಾರಾ, ತಾಲೂಕ ಪಂಚಾಯತ್ ಸಿಬ್ಬಂದಿ ಸಂಗೀತಾ ಗಂದಗೆ, ಅನಿತಾ, ಭರತ್ ಕುಮಾರ್ ಹಾಗೂ ಎಲ್ಲಾ ನೌಕರರು ಹಾಗೂ ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು.