Latest Post

ಉಪನ್ಯಾಸಕ ಅಶೋಕ ಕೋರೆಗೆ ಪಿಎಚ್‌.ಡಿ ಡಾಕ್ಟರೇಟ್ : ಎಬಿವಿಪಿ ಯಿಂದ ಸನ್ಮಾನ ಸಾಕು ನಾಯಿಗಳಿಗೆ ತಪ್ಪದೇ ರೇಬೀಸ್ ಲಸಿಕೆ ನೀಡಿ: ಸಚಿವ ಪ್ರಭು ಚವ್ಹಾಣ
Spread the love

ಹಿರಿಯ ನಿವೃತ್ತ ಶಿಕ್ಷಕರಿಗೆ ವಿಶೇಷ ಸನ್ಮಾನ

ಔರಾದ : ಪಟ್ಟಣದ ದತ್ತ ಸಾಯಿ ಶನೇಶ್ವರ ಮಂದಿರದಲ್ಲಿ ಶಿಕ್ಷಕ ಅಮೃತರಾವ ಬಿರಾದಾರ ಅವರ ಸೇವಾ ನಿವೃತ್ತಿ ಹಾಗೂ ಬಸವ ಬಾಂಧವ್ಯ ಕಾರ್ಯಕ್ರಮದಲ್ಲಿ ಮತ್ತು ಶಿಕ್ಷಕರ ದಿನಾಚರಣೆ ನಿಮಿತ್ಯ ತಮ್ಮ ವೃತ್ತಿ ಜೀವನದಲ್ಲಿ ಅತಿ ಉತ್ತಮ ರೀತಿಯಾಗಿ ಸೇವೆಸಲ್ಲಿಸಿ ಕೀರ್ತಿಗೆ ಪಾತ್ರರಾಗಿದ್ದಾರೆ ಇನ್ನು ಅದೆ ರೀತಿಯಾಗಿ ಕುಟುಂಬದ ಜಿವನದಲ್ಲು ಎಲ್ಲರೊಂದಿಗೆ ಅವಿನಾಭಾವ ದೊಂದಿಗೆ ಸಂಸ್ಕಾರಿತ ಜೀವನ ಬಾಳು ಬದುಕುತ್ತಿರುವ ಹಿರಿಯ ನಿವೃತ್ತ ಶಿಕ್ಷಕರಾದ ಪ್ರಾಧ್ಯಾಪಕ ಬಾಬುರಾವ ಬಾರೋಳೆ,ಕರಿಮಸಾಬ,ಶಿವಾಜಿರಾವ ಜಾಧವ, ರಾಮಚಂದ್ರ ಸದಾಫುಲೆ,ಮಲ್ಲಿಕಾರ್ಜುನ ಸ್ವಾಮಿ, ದಾನಮ್ಮ ನಳಗೆ,ಮಹಾದೇವಿ ಪಡಂಪಳ್ಳೆ,ಶಕುಂತಲಾ ನಿಡೋದೆ,ಕಲಾವತಿ ಮಡಿವಾಳಪ್ಪಾ, ಇವರ ಕುಟುಂಬ ಜೀವನದ ಕಾರ್ಯವೈಖರ್ಯ ಪರಿಗಣಿಸಿ ಗೌರವ ಸನ್ಮಾನ ಮಾಡಿದರು. ಅದೆರಿತಿ ಸೇವಾ ನಿವೃತ್ತ ಶಿಕ್ಷಕ ಅಮೃತರಾವ ಬಿರಾದಾರ ದಂಪತಿಗಳಿಗೆ ಸನ್ಮಾನಿಸಿ ಗೌರವಿಸಲಾಯಿತು.

ಈ ಸಂದರ್ಭದಲ್ಲಿ ಕಸಾಪ ನಿಕಟ ಪೂರ್ವ ಅಧ್ಯಕ್ಷ ಜಗನಾಥ ಮುಲಗೆ, ಅಧ್ಯಾಪಕ ಡಿ ಡಿ ಬೊಳೆಗಾವೆ,ಕಲ್ಯಾಣರಾವ ಶೇಂಬೆಳ್ಳಿ,ಬಾಲಾಜಿ ಅಮರವಾಡಿ,ಗುರುರಾಜ ಜಿ ಎಮ್, ಪಂಡರಿ ಅಡೆ,ಗಜಾನಂದ ಮಳ್ಳಾ,ವಿರೇಶ ಅಲಮಾಜೆ,ಬಸವರಾಜ ಶೇಟಕಾರ,ಮಹಾನಂದಾ ಎಂಡೆ,ಗುರಮ್ಮಾ ಶೇಂಬೆಳ್ಳೆ,ಸುಜಾತಾ ಟಂಕಸಾಲೆ ಹಾಗೂ ಶಾಮಸುಂದರ ಖಾನಾಪೂರೆ ಪ್ರಾಸ್ತಾವಿಕ ಮಾತನಾಡಿದರು ಮಲ್ಲಿಕಾರ್ಜುನ ಟಂಕಸಾಲೆ ಸ್ವಾಗತಿಸಿದರು ಈ ಸಂದರ್ಭದಲ್ಲಿ ಅನೇಕರು ಉಪಸ್ಥಿತರಿದ್ದರು.