Latest Post

ಉಪನ್ಯಾಸಕ ಅಶೋಕ ಕೋರೆಗೆ ಪಿಎಚ್‌.ಡಿ ಡಾಕ್ಟರೇಟ್ : ಎಬಿವಿಪಿ ಯಿಂದ ಸನ್ಮಾನ ಸಾಕು ನಾಯಿಗಳಿಗೆ ತಪ್ಪದೇ ರೇಬೀಸ್ ಲಸಿಕೆ ನೀಡಿ: ಸಚಿವ ಪ್ರಭು ಚವ್ಹಾಣ
Spread the love

ನಾಗಮಾರಪಳ್ಳಿ ಅವರಿಗೆ ಅದ್ದೂರಿಯಾಗಿ ಸ್ವಾಗತಿಸಿದ ತಾಲೂಕಿನ ಜನತೆ

ನೂತನ ನಿರ್ದೇಶಕ ರಾಗಿ ಪ್ರಥಮ ಬಾರಿಗೆ ತವರು ಕ್ಷೇತ್ರಕ್ಕೆ ಆಗಮಿಸಿದ ಉಮಾಕಾಂತ ನಾಗಮಾರಪಳ್ಳಿ ಅವರಿಗೆ ಅದ್ದೂರಿ ಸ್ವಾಗತ

ಕರ್ನಾಟಕ ರಾಜ್ಯ ಸಹಕಾರ ಮಾರಾಟ ಮಹಾಮಂಡಳಿ ನಿಯಮಿತ ಬೆಂಗಳೂರು ಇದರ ನಿರ್ದೇಶಕರಾಗಿ ಆಯ್ಕೆಯಾಗಿರುವ ಡಿಸಿಸಿ ಬ್ಯಾಂಕ್ ಅದ್ಯಕ್ಷ ಉಮಾಕಾಂತ ನಾಗಮಾರಪಳ್ಳಿ ಅವರಿಗೆ ಔರಾದ ತಾಲೂಕಿನ ಜನತೆ ಅಭಿಮಾನಿಗಳು ಅದ್ದೂರಿಯಾಗಿ ಸ್ವಾಗತಿಸಿ ಅಭಿನಂದಿಸಿ ಸನ್ಮಾನಿಸಿದರು.

ಸಾರೋಟಿನಲ್ಲಿ ಇಬ್ಬರು ಸಹೋದರರಿಗೆ ಅಮರೇಶ್ವರ ದೇವಸ್ಥಾನದಿಂದ ಮೆರವಣಿಗೆ ಪ್ರಾರಂಭಗೊಂಡು ಬಸವೇಶ್ವರ ವರ್ತದಿಂದ ಕನ್ನಡಾಂಬೆ ಮಾರ್ಗವಾಗಿ ಡಾ|| ಗುರುಪಾದಪ್ಪ ನಾಗಮಾರಪಳ್ಳಿ ಕಲ್ಯಾಣ ಮಂಟಪ ವರೆಗೆ ಅದ್ದೂರಿಯಾಗಿ ಸ್ವಾಗತಿಸಿ ಅಭಿನಂದಿಸಿದ ಅಭಿಮಾನಿಗಳು.

ಸಹಕಾರ ಕ್ಷೇತ್ರದಲ್ಲಿ ದಿವಂಗತ ಡಾ|| ಗುರುಪಾದಪ್ಪಾ ನಾಗಮಾರಪಳ್ಳಿ ಅವರ ಕೊಡುಗೆ ಅಪಾರವಾಗಿದೆ ಅವರ ದಾರಿಯಲ್ಲಿ ಅವರ ಸುಪುತ್ರರು ಜನರನ್ನು ಮನೆಗೆಲ್ಲುತ್ತಿದ್ದಾರೆ ಸ್ವಸಾಯ ಸಂಘ, ಡಿಸಿಸಿ ಬ್ಯಾಂಕ್, ಆಸ್ಪತ್ರೆಯ ಸೇವೆಯ ಮೂಲಕ ಬಡವರ ಪಾಲಿಗೆ ಬೆಳಕಾಗಿದ್ದಾರೆ ಎಂದು ಭಾಲ್ಕಿ ಶ್ರೀಗಳಾದ ಬಸವಲಿಂಗ ಪಟ್ಟದೇವರು ಹೇಳಿದರು.
ಡಾ|| ಗುರುಪಾದಪ್ಪಾ ನಾಗಮಾರಪಳ್ಳಿ ಸಹಕಾರ ಆಸ್ಪತ್ರೆ ಅಧ್ಯಕ್ಷ ಸೂರ್ಯಕಾಂತ ನಾಗಮಾರಪಳ್ಳಿ ಮಾತನಾಡಿ ಇಲ್ಲಿಯ ಜನರು ನಮ್ಮೊಂದಿಗೆ ಇದ್ದಾರೆ ಎಲ್ಲ ಕಷ್ಟ ಸುಖದಲ್ಲಿ ಭಾಗಿಯಾಗಿ ಕುಟುಂಬದ ಸದಸ್ಯರಂತಿದ್ದಾರೆ ಕಾರ್ಯಕರ್ತರ ಸಮಸ್ಯೆ ನಮ್ಮ ಸಮಸ್ಯ ಎಂದು ನಾವು ಪರಿಗಣಿಸಿ ಸೇವೆಗೈಯುತ್ತಿದ್ದೆವೆ ಎಂದು‌ ನೂಡಿದರು.

ನಮ್ಮ ತಂದೆಯವರು ಹಾಕಿಕೊಟ್ಟ ದಾರಿಯಲ್ಲಿ ನಾವುಗಳು ಸಾಗುತ್ತಿದ್ದು ಕಾರ್ಯಕರ್ತರ ಸಮಸ್ಯೆ ನಮ್ಮ ಸಮಸ್ಯೆ ಎಂದು ಪರಿಗಣಿಸುತ್ತಿದ್ದೆವೆ ಹಿಂದೆ ಪ್ರಭು ಚವ್ಹಾಣ ಅವರಿಗೆ ಗೆಲುವಿಗೆ ಸಹಕರಿಸಿದ್ದೇವೆ. ಆದರೆ ಅವರು ವಿನಾಕಾರಣ ನಮ್ಮ ಮೇಲೆ ಹಾಗೂ ನಮ್ಮ ಕಾರ್ಯಕರ್ತರ ಮೇಲೆ ಆರೋಪ ಮಾಡುತ್ತಿದ್ದಾರೆ ಕಾರ್ಯಕರ್ತರಿಗೆ ಏಕವಚನದಲ್ಲಿ ಮಾತನಾಡುತ್ತಿರುವುದು ಸರಿಯಲ್ಲ ಮುಂಬರುವ ಚುನಾವಣೆಯಲ್ಲಿ ನಾಗಮಾರಪಳ್ಳಿ ಶಕ್ತಿ ತೋರಿಸುತ್ತೆವೆ ಎಂದು ಡಿಸಿಸಿ ಬ್ಯಾಂಕ್ ಅಧ್ಯಕ್ಷ ಉಮಾಕಾಂತ ನಾಗಮಾರಪಳ್ಳಿ ಪರೋಕ್ಷವಾಗಿ ಆಕ್ರೋಶ ವ್ಯಕ್ತಪಡಿಸಿದ್ದರು. ನಮ್ಮ ಜನರಿಗೆ ತೊಂದರೆ ಮಾಡಿದರೆ ಸುಮ್ಮನೆ ಕೂಡುವುದಿಲ್ಲ ಎಂದು ಖಡಕ್ ಎಚ್ಚರಿಕೆ ನೀಡಿದರು. ಈ ಸಂದರ್ಭದಲ್ಲಿ ನನಗೆ ಸ್ವಾಗತಿಸಿ ಸನ್ಮಾನಿಸಿ ಗೌರವಿಸಿದಕ್ಕೆ ತಾಲ್ಲೂಕಿನ ಜನತೆಗೆ ಕೋಟಿ ನಮನ ಸಲ್ಲಿಸಿದರು.

ಕಾರ್ಯಕ್ರಮದಲ್ಲಿ ಹೊಟ್ಟಿ ತುಂಬಾ ಊಟ ಮಾಡಿದ ನಾಗಮಾರಪಳ್ಳಿ ಅಭಿಮಾನಿಗಳು
ಈ ಕಾರ್ಯಕ್ರಮದ ಅಧ್ಯಕ್ಷತೆ ಬಸವರಾಜ ಹೆಬ್ಬಾಳೆ ವಹಿಸಿದರು ಮುಖ್ಯ ಅತಿಥಿಗಳಾಗಿ ಪೂಜ್ಯ ಬಸವಲಿಂಗ ಪಟ್ಟದೇವರು ವಹಿಸಿದ್ದರು ಸಂಜುಕೂಮಾರ ಜುಮ್ಮಾ ಸ್ವಾಗತಿಸಿದರು ನೌಲಿಂಗ್ ಪಾಟೀಲ್ ನಿರೋಪಿಸಿದರು ಕಮಲನಗರ ಹಾಗೂ ಔರಾದ ತಾಲೂಕಿನ 10,000 ಕ್ಕೂ ಹೆಚ್ಚು ಕಾರ್ಯಕರ್ತರು ಅಭಿಮಾನಿಗಳು ಪಾಲ್ಗೊಂಡಿದ್ದರು.

Leave a Reply