Latest Post

ಈ ದೇಶದ ಸಂಪತ್ತು ಶಿಕ್ಷಕರು :ಡಾ ಮನ್ನಥ ಡೊಳೆ ವಸತಿ ನಿಲಯಗಳಿಗೆ 25% ಪ್ರತಿಶತ ಪ್ರವೇಶವನ್ನು ಹೆಚ್ಚಿಸುವಂತೆ ಎಬಿವಿಪಿ ಔರಾದ ಶಾಖೆ ಮನವಿ
Spread the love

ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿ ಒಂದಲ್ಲ ಒಂದು ರೀತಿಯ ಸುದ್ದಿಯಲ್ಲಿ ಇದ್ದೇ ಇರುತ್ತೆ
ಇವಾಗ ಸುದ್ದಿ ಸದ್ದು ಮಾಡುತ್ತಿರುವುದು ಔರಾದ ತಾಲೂಕು ಕಾಂಗ್ರೆಸ್ ಸಮಿತಿಯಲ್ಲಿ

ಹೌದು ಕಳೆದ ಮೂರು ಚುನಾವಣೆಗಳಲ್ಲಿ ಭಾರಿ ಮುಖಭಂಗ ಅನುಭವಿಸಿರುವ ಕಾಂಗ್ರೆಸ್, ಈ ಬಾರಿ ಔರಾದನಲ್ಲಿ ಅಧಿಕಾರ ಹಿಡಿಯಬೇಕು ಎಂಬ ನಿಟ್ಟಿನಲ್ಲಿ ಭರ್ಜರಿ ತಯಾರಿ ನಡೆಸಿಕೊಂಡಿದೆ, ಏನೇ ಆಗಲಿ ಈ ಬಾರಿ ಔರದ್ ಕ್ಷೇತ್ರದಲ್ಲಿ ಕಾಂಗ್ರೆಸ್ ಪಕ್ಷ ಮುಂಚೂಣಿಗೆ ಬರಬೇಕು ಎಂದು ಕಾಂಗ್ರೆಸ್ ಸಮಿತಿಯ ಆಸೆಯಾಗಿದೆ
ಅದಕ್ಕಾಗಿಯೇ ತಾಲೂಕಿಗೆ ಸಂಯೋಜಕರು ಮತ್ತು ವೀಕ್ಷಕರು ಹಾಗೂ ವಕ್ತಾರರ ನೇಮಕ ಮಾಡಲಾಗಿದೆ.
ತಾಲೂಕಿಗೆ ಪಕ್ಷ ಸಂಘಟನೆಯ ಜವಾಬ್ದಾರಿಯನ್ನ ಹೊತ್ತ ಬಂದವರು ಇಂದು ತಾಲೂಕಿನಲ್ಲಿ ತಾವೇ ಅಭ್ಯರ್ಥಿಗಳು ಎಂದು ಘೋಷಿಸಿಕೊಂಡು ಕ್ಷೇತ್ರದಲ್ಲಿ ತಿರುಗಾಡುತ್ತಿದ್ದಾರೆ
ಸ್ವಯಂಘೋಷಿತ ಶಾಸಕ ಅಭ್ಯರ್ಥಿಗಳಾದ ಇವರು ಹಲವು ವರ್ಷಗಳಿಂದ ಪಕ್ಷ ಕಟ್ಟುತ್ತಿರುವಂತಹ ನೈಜ ಕಾರ್ಯಕರ್ತರ ವರ್ಚಸ್ಸನ್ನು ಕ್ಷೇತ್ರದಲ್ಲಿ ಕಡಿಮೆ ಮಾಡುತ್ತಿದ್ದಾರೆ,


ಬೇರೆ ಜಿಲ್ಲೆಯವರು ಬಂದು ಇಲ್ಲಿ ಪ್ರಚಾರಗಿಟ್ಟಿಸಿ ತಾವೇ ಅಭ್ಯರ್ಥಿ ಎಂದು ಘೋಷಿಸಿಕೊಂಡು ಕ್ಷೇತ್ರದಲ್ಲಿ ತಿರುಗಾಡುತ್ತಿರುವುದು ತಾಲೂಕಿನ ಮುಖಂಡರಿಗೆ ಮುಳು ವಾಗಿದೆ

ಕರ್ನಾಟಕ ಪ್ರದೇಶ್ ಕಾಂಗ್ರೆಸ್ ವತಿಯಿಂದ ಅಧಿಕೃತ ಅಭ್ಯರ್ಥಿಯ ಘೋಷಣೆಯಾಗಿಲ್ಲ ಸಂಘಟನೆ ಮಾಡಬೇಕಾದವರು ಪಕ್ಷದಲ್ಲಿ ಅಭ್ಯರ್ಥಿಯೆಂದು ಘೋಷಿಸಿಕೊಂಡಾಗ ಪಕ್ಷ ಸಂಘಟನೆ ಯಾಗುವುದು ಹೇಗೆ? ಎಂಬ ಪ್ರಶ್ನೆ ಕಾಂಗ್ರೆಸ್ಸಿಗರಲ್ಲಿ ಮೂಡಿದೆ!

ಬೀದರ್ ಜಿಲ್ಲೆಯ ಘಟಾನುಘಟಿ ನಾಯಕರು ಕೆಪಿಸಿಸಿಯಲ್ಲಿ ಉತ್ತಮ ಸ್ಥಾನಗಳನ್ನು ಪಡೆದಿದ್ದಾರೆ, ಇವರೆಲ್ಲರ ಕಣ್ಣನ್ನ ಮುಚ್ಚಿ ಬೇರೆ ಜಿಲ್ಲೆಯವರು ಬಂದು ಕ್ಷೇತ್ರದಲ್ಲಿ ತಾವೇ ಅಭ್ಯರ್ಥಿಯೆಂದು ಘೋಷಿಸಿಕೊಂಡು ತಿರುಗುವಾಗ ಇವರು ಸುಮ್ಮನಿರುವುದು ಯಾಕೆ? ಪಕ್ಷ ಇವರಿಗೆ ಸಂಘಟನೆ ಮಾಡಲು ಕಳುಹಿಸಿದೆಯೋ ಅಥವಾ ಪಕ್ಷ ಇಬ್ಬಾಗ್ ಮಾಡಲು ಕಳುಹಿಸಿದೇಯೋ ಎಂಬುವುದು ಪಕ್ಷದ ರಾಜ್ಯ ನಾಯಕರೆ ಇದಕ್ಕೆ ಉತ್ತರಿಸಬೇಕು!