Latest Post

ಸಾಕು ನಾಯಿಗಳಿಗೆ ತಪ್ಪದೇ ರೇಬೀಸ್ ಲಸಿಕೆ ನೀಡಿ: ಸಚಿವ ಪ್ರಭು ಚವ್ಹಾಣ ಕಂದಾಯ ಇಲಾಖೆ ಡಾಟಾ ಎಂಟ್ರಿ ಆಪರೇಟರ್‌ಗೆ ಸೇವಾ ಭದ್ರತೆ, ಸೂರ್ಯಕಾಂತ್ ನಾಗಮಾರಪಳ್ಳಿ ಮನವಿ
Spread the love

ಮಠಾಧೀಶರಿಂದ ವೇಂಕಟೆಶ್ವರಸ್ವಾಮಿ ದೇವಸ್ಥಾನ ಭೂಮಿ ಪೂಜೆಗೆ ಚಾಲನೆ

ಔರಾದ : ತಾಲೂಕಿನ ಕೊಳ್ಳೂರ ಗ್ರಾಮದಲ್ಲಿ ಶ್ರೀ ಬಾಲಾಜಿ ವೆಂಕಟೇಶ್ವರ ದೇವಸ್ಥಾನದ ಭೂಮಿ ಪೂಜೆ ಕಾರ್ಯಕ್ರಮವನ್ನು ತಾಲೂಕಿನ ಎಲ್ಲಾ ಮಠಾಧೀಶರಿಂದ ನೆರವೇರಿಸಲಾಯಿತು.

ಈ ಸಂದರ್ಭದಲ್ಲಿ ಮಾಜಿ ಜಿಲ್ಲಾ ಪಂಚಾಯತ ಸದಸ್ಯೆ ಮೀನಾಕ್ಷಿ ಸಂಗ್ರಾಮ ಮಾತನಾಡಿ ತೆಲಂಗಾಣ ಮಾಹಾರಾಷ್ಟ ಈ ಗಡಿ ಭಾಗದಲ್ಲಿ ಇಂತಹ ಪುಣ್ಯಕ್ಷೇತ್ರ ವೇಂಕಟೆಶ್ವರ ದೇವಸ್ಥಾನ ಹಾಗೂ ಗೋಶಾಲೆ ನಿರ್ಮಿಸುತ್ತಿರುವದು ನಮ್ಮೆಲ್ಲರ ಪುಣ್ಯ ಈ ಮಂದಿರ ನಿರ್ಮಾಣ ಕ್ಕೆ ನಾನು ಕೈಜೊಡಿಸುತ್ತೆನೆ 2023 ರಲ್ಲಿ ಎನಾದರು ಕಾಂಗ್ರೆಸ್ ಸರ್ಕಾರ ಕರ್ನಾಟಕದಲ್ಲಿ ಬಂದಲ್ಲಿ ಈ ಮಂದಿರಕ್ಕೆ ಕೋಟ್ಯಾಂತರ ರೂಪಾಯಿ ಅನುದಾನ ತರುವಲ್ಲಿ ನಾನು ಮುಂದಾಗುತ್ತೆನೆ .ಇಂತಹ ಪುಣ್ಯಕ್ಷೇತ್ರವೆ ಸ್ವರ್ಗ ನಾವೆಲ್ಲರು ಪುಣ್ಯವಂತರು ಅದಕ್ಕೆ ನಮ್ಮ ಗ್ರಾಮದಲ್ಲಿ ತಿರುಪತಿ ತಿಮ್ಮಪ್ಪನ ದೇವಸ್ಥಾನ ನಿರ್ಮಾಣ ವಾಗುತ್ತಿದೆ ನಾವೆಲ್ಲರೂ ಕೈಜೊಡಿಸೊಣ ಎಂದು ನುಡಿದರು.
ಅದೇ ರೀತಿ ಪೂಜ್ಯ ಷ.ಬ್ರ.108 ಶಂಕರಲಿಂಗ ಶಿವಾಚಾರ್ಯ ಮಹಾರಾಜರು ಮಾತನಾಡಿ ನಮ್ಮ ಔರಾದ ತಾಲೂಕಿನ ಈ ಕೊಳ್ಳುರ ಗ್ರಾಮದಲ್ಲಿ ಶ್ರೀ ವೆಂಕಟೇಶ್ವರ ದೇವಸ್ಥಾನ ಹಾಗೂ ಗೋಶಾಲೆ ನಿರ್ಮಿಸುತ್ತಿದ್ದು ಗ್ರಾಮಸ್ಥರು ಪುಣ್ಯವಂತರು ಈ ದೇವಸ್ಥಾನ ನಿರ್ಮಾಣಕ್ಕೆ ಎಲ್ಲರು ಕೈ ಜೊಡಿಸಬೆಕು ನಮ್ಮಲ್ಲಿರುವ ಕಡು ಬಡವರು ತಿರುಪತಿ ದೇವಸ್ಥಾನಕ್ಕೆ ಹೋಗುವ ಸಾಮರ್ಥ್ಯ ಇಲ್ಲವಾಗಿದೆ ನಮ್ಮ ಭಾಗದ ಭಕ್ತರಿಗೆ ವೆಂಕಟೇಶ್ವರ ದರ್ಶನ ಈ ಕೊಳ್ಳುರ ಗ್ರಾಮದ ಇಂತಹ ಸುಂದರ ಸ್ಥಳದಲ್ಲಿ ಸಿಗುತ್ತಿರುವದು ನಾವು ಪುಣ್ಯವಂತರು ಎಂದು ಶ್ರೀಗಳು ಹೇಳಿದರು.
ಈ ಕಾರ್ಯಕ್ರಮದ ದಿವ್ಯ ಸಾನಿಧ್ಯವನ್ನು ಷ.ಬ್ರ.108 ಶಿವಲಿಂಗ ಶಿವಾಚಾರ್ಯ ಮಹಾರಾಜ ಹೆಡಗಾಪುರ್,ಷ.ಬ್ರ.108 ವೈರಾಗ್ಯ ಶಿಖಾಮಣಿ ಅವಧೂತಗಿರಿ ಮಹಾರಾಜ್ ಬದ್ರಿಪುರ್, ಷ.ಬ್ರ.108 ಶಂಕರ್ಲಿಂಗ ಶಿವಾಚಾರ್ಯ ಮಹಾರಾಜ್ ಹಣೆ ಗಾಂವ್, ಷ.ಬ್ರ.108ಬಸವಲಿಂಗ ಶಿವಾಚಾರ್ಯ ಮಹಾರಾಜ ಕೌಳಾಸ,ದೇವಗಿರಿ ಮಹಾರಾಜ್ ಮುಂಗಿ, ದತ್ತಾತ್ರೆ ಮಹಾರಾಜ್ ಭವಾನಿ ಬಿಜಲಗಾವ್, ಇವರ ಸನ್ನಿಧಿಯಲ್ಲಿ ಶ್ರೀ ಬಾಲಾಜಿ ವೆಂಕಟೇಶ್ವರ ದೇವಸ್ಥಾನದ ಭೂಮಿ ಪೂಜೆ ನೆರವೇರಿಸಲಾಯಿತು.
ಈ ಭೂಮಿ ಪೂಜೆ ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಯಾಗಿ ಕಾಂಗ್ರೆಸ್ ಪಕ್ಷದ ಕಾರ್ಯದರ್ಶಿ ಶ್ರೀಮತಿ ಮೀನಾಕ್ಷಿ ಸಂಗ್ರಾಮ್, ಮುಖಂಡ ವಿಶ್ವನಾಥ್ ದಿನೇ, ಸುಧಾಕರ್ ಕೊಳ್ಳುರ್, ಅಶೋಕ್ ಕೊಲ್ಲೂರ್, ಗ್ರಾ ಪ ಸದಸ್ಯ ಸಂಜು ಗೌಡಾ,ರಾಜಕೂಮಾರ ಧಬಾಡೆ,ದೇವಸ್ಥಾನದ ಕಮಿಟಿ ಅಧ್ಯಕ್ಷ ಉಮಾಕಾಂತ ಸ್ವಾಮಿ,ಉಪಾದ್ಯಕ್ಷೆ ಮಮ್ತಾ ಗೋಪಾಲ್ ರೆಡ್ಡಿ, ನವಿನ ರಾಜು ಖಜಾಂಶಿ ಮತ್ತು ಸಮಸ್ತ ಭಕ್ತಾದಿಗಳು ಗ್ರಾಮಸ್ಥರು ಉಪಸ್ಥಿತರಿದ್ದರು.